ಗೋವಾದ ಎಡಿಸಿ ಪ್ರಕಾಶನದಿಂದ "ಚಾರೊಳಿ ಕಿಂಗ್" ರೇಮಂಡ್ ಡಿಕೂನಾ ತಾಕೊಡೆಯವರಿಗೆ ಸನ್ಮಾನ

Upayuktha
0


ಗೋವಾ: ಕಳೆದ ಆರು ವರ್ಷಗಳಲ್ಲಿ ಪ್ರತಿ ದಿನ ಒಂದು ಚಾರೊಳಿ ಚುಟುಕು ತನ್ನ ಮಾತೃಭಾಷೆ ಕೊಂಕಣಿಯಲ್ಲಿ ಬರೆದು ಇಂದಿಗೆ ಎಡುವರೆ ಸಾವಿರಕ್ಕೂ ಹೆಚ್ಚು ಚುಟುಕು ಕೊಂಕಣಿಯಲ್ಲಿ  ಬರೆದು ಪ್ರಕಟಿಸಿದ ರೇಮಂಡ್ ಡಿಕೂನಾ ತಾಕೊಡೆ ಅವರಿಗೆ ಗೋವಾದ ಪನಜಿಯಲ್ಲಿ ಎಡಿಸಿ ಪ್ರಕಾಶನವತಿಯಿಂದ "ಚಾರೊಳಿ ಕಿಂಗ್" ಎಂದು ಸನ್ಮಾನ ಮಾಡಲಾಯಿತು.


ಗೋವಾದ ಕೊಂಕಣಿ ಅಕಾಡೆಮಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ಹಾಡುಗಾರರು ,ಚಿತ್ರಗೀತೆ ರಚನಕಾರ ಪ್ರಶಾಂತ್ ಇಂಗೊಲೆಯವರು ಮುಖ್ಯ ಅತಿಥಿ ಆಗಿದ್ದರು.


ಸನ್ಮಾನ ಮಾಡಿ ಮಾತನಾಡಿದ ಅವರು ವಿಶಿಷ್ಠವಾದ ಪ್ರತಿಭೆಗಳು ಮೌನದಿಂದ ಅರಳುತ್ತವೆ. ಅದರ ಪರಿಮಳದ ಸ್ವಾದವನ್ನು ಪತ್ತೆಮಾಡಲು ಎಲೆಯ ಮರೆಯನ್ನು ಸರಿಸಿ ನೋಡಿ ಪುರಸ್ಕರಿಸಬೇಕು ಎಂದರು.


ಉಗ್ತೆಂ ಮೊಳಾಬ್ ಸಾಹಿತ್ಯ ಬಳಗದ ಹಿರಿಯ ಸಾಹಿತಿ ಅನಗ ಕಾಮತ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಸೈನಿಕರು, ಸಾಹಿತಿ,ಗೀತಕಾರರು ಹಾಗೂ ಬಹುಭಾಷಾ ಹಾಡುಗಾರರು ,ಪತ್ರಕರ್ತರು ಆದ ಜೋನ್ ಆಗೇರ ಅವರು ಮುಖ್ಯ ಅಥಿತಿ ಆಗಿ ಶುಭಹಾರೈಸಿದರು. ಅವರು ಅವಿನಾಶ್ ಕುಂಕೋಲ್ಕರ್ ಅವರನ್ನೂ ಸನ್ಮಾನಿಸಿದರು.


ಅನಗ ಕಾಮತ್ ಸ್ವಾಗತಿಸಿ ಎಬಿಸಿ ಪ್ರಕಾಶನ ಸಂಸ್ಥೆಯ ಪ್ತವರ್ತಕರಾದ ಆನ್ನಿ ಡಿ ಕೊಲ್ವಾಲೆ ವಂದಿಸಿದರು ಗ್ರೇಸಿಯಸ್ ಫುರ್ಟಾದೊ ನಿರ್ವಹಿಸಿದರು.


ನಂತರ ಕವಿತಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಯಿತು. ಸಂದೇಶ ಬಾಂದೇಕರ್ ಕಾರವಾರ ಮೊದಲ ಬಹುಮಾನ, ಸತ್ಯವಾನ ಜಗಲೆ ಗೋವ ದ್ವಿತೀಯ, ಸುನಿತ ಪೆಡ್ನೆಕರ್ ತೃತೀಯ ಮತ್ತು ಮೆಚ್ಚುಗೆ ಪಡೆದ ಕವಿಗಳು ಜೂಡ್ ಫೆರ್ನಾಂಡೀಸ್, ಆನ್ನ ಪೆರೆರಾ ರೊಡ್ರಿಗಸ್, ನಾಮ್‌ದೆರವ್ ಸುರ್ಲಿಕರ್,ಅವಿನಾಶ್ ಕುಂಕೋಲ್ಕರ್.


ನಂತರ "ಉಗ್ತೆಂ ಮೊಳಾಬ್ " ಸಾಹಿತ್ಯ ಸಂಸ್ಥೆಯ ಮಾಸಿಕ ಕವಿ ಗೋಷ್ಟಿ ನಡೆಯನ್ನು ಹಿರಿಯ ಕವಿ ಶಿತಲ್ ಸಾಲ್‌ಗಾಂವ್ಕರ್ ಅವರು ನಡೆಸಿಕೊಟ್ಟರು.


ಭಾಗವಹಿಸಿದ ಕವಿಗಳು; ಜೀತೆಂದ್ರ ಪಡ್ತೆ, ಜೋನ್ ಆಗೇರ್, ಸವಿತಾ ಆಗೇರ್, ಶೀತಲ್ ಸಾಲ್‌ಗೊಂನ್ಕಾರ್, ನಾಮ್‌ದೇವ್ ಸುರ್ಲಿಕರ್, ಅವಿನಾಶ್ ಕನ್ಕೊಲ್ಕರ್, ನಾಗರತ್ನ ಕುರ್ತಾರ್ದ್‌ಕರ್, ಶಾಮಲ್ ಪೆಡ್ನೆಕರ್, ಆನ್ನ ಪೆರೆರಾ, ಅನಗ ಕಾಮತ್, ಸ್ಮಿತ ವೆರ್ನೆಕರ್, ಆನ್ನಿ ಫೆರ್ನಾಂಡೀಸ್, ಸಂದೇಶ್ ಬಾಂದೇಕರ್, ಸತ್ಯಂ ಜಗಲೆ, ಮೋಹಿನಿ ಹಳಂದ್‌ಕಾರ್ ಮತ್ತು ರೇಮಂಡ್ ಡಿಕೂನಾ ತಾಕೊಡೆ.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top