ಶ್ರೀ ಮಹಿಷಮರ್ದಿನಿ ದೇವಸ್ಥಾನದ ಭೂತ ಬಲಿ ಉತ್ಸವ: ಸಾಹಿತ್ಯ ಗಾನ ನೃತ್ಯ ವೈಭವ

Upayuktha
0


ಕಾಸರಗೋಡು: ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಭೂತ ಬಲಿ ಉತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ 140 ನೇ ವೈವಿಧ್ಯಮಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಅತ್ಯಂತ ವೈಭವಪೂರಿತವಾಗಿ ಜರಗಿತು.


ಕನ್ನಡ ಸಾಹಿತ್ಯ ಪ್ರಸ್ತುತಿಯನ್ನು ಡಾ. ವಾಣಿಶ್ರೀಯವರು ಶ್ರೀ ದೇವಿಗೆ ಅರ್ಪಿಸಿ ಸಾಹಿತ್ಯದಿಂದ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ತಿಳಿಯಪಡಿಸಿದರು.


ಗಾನಾಮೃತ ಕನ್ನಡ ಕೋಗಿಲೆಗಳ ಸ್ವರ ನಿನಾದ ಕಾರ್ಯಕ್ರಮವು ಸಂಸ್ಥೆಯ ಕಲಾವಿದರಾದ ಮಧುಲತಾ ಪುತ್ತೂರು, ಗೋಪಾಲಕೃಷ್ಣ, ವಿಶ್ವನಾಥ ಪುತ್ತಿಗೆ, ಮುರಳಿ ನೀರ್ಚಾಲ್ ಕೃತಿಕಾ ಕುಂಬ್ಳೆ ಇವರಿಂದ ಮಧುರ ಕನ್ನಡ ಹಾಡುಗಳ ಮೂಲಕ ನಡೆದು ಅಪಾರ ಪ್ರಶಂಸೆ ಗಳಿಸಿತು. ತನುಷ ಬಲ್ಲಾಳ್ ಅವರ ಯೋಗ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತು.


ಸಂಸ್ಥೆಯ ಅಪ್ರತಿಮ ನಾಟ್ಯ ಮಯೂರಿಗಳಾದ ಪೂಜಾಶ್ರೀ, ನವ್ಯಶ್ರೀ ಕುಲಾಲ್, ದಿಯಾ ಸುಕೇಶ್, ದಾನ್ವಿಕ, ಸರಿತಾ, ಕೃತಿಕಾ, ವಾಣಿಶ್ರೀ, ರಿಧ್ವಿಕ, ಜಶ್ವಿತ, ಸಂಧ್ಯಾ ಮೊದಲಾದ ಕಲಾವಿದರು ಬಹುವಿಧ ನೂತನ ನೃತ್ಯ ಪ್ರದರ್ಶನದ ಮೂಲಕ ಜನ ಮೆಚ್ಚುಗೆ ಗಳಿಸಿ ಶ್ರೀ ದೇವಿಗೆ ಕಲಾಸೇವೆ ನೀಡಿ ದೇವರ ಅನುಗ್ರಹಕ್ಕೆ ಪಾತ್ರರಾದರು.


ಕಿಕ್ಕಿರಿದು ಸೇರಿದ ಜನಸಾಗರದಲ್ಲಿ ಸುಮಾರು ಮೂರುವರೆ ಘಂಟೆಗಳ ನಿರಂತರ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ ಸಂಸ್ಥೆಯ ವತಿಯಿಂದ ನಡೆಯಿತು.ಡಾ. ವಾಣಿಶ್ರೀ ಅವರಿಗೆ ದೇವರ ಪ್ರಸಾದ ನೀಡಿ ಹರಸಿದರು. ಸಂಸ್ಥೆಯ ಎಲ್ಲಾ ಕಲಾಮಾಣಿಕ್ಯಗಳಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆಯನ್ನು ನೀಡಿ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ  ಕವಿ ಸಾಹಿತಿ ಪುಂಡೂರು ವಿಜಯರಾಜ್ ಪುಣಿಂಚತ್ತಾಯ, ಕಾರ್ಯದರ್ಶಿ ರವೀಂದ್ರ ಗೋಸಾಡ, ಉಪಾಧ್ಯಕ್ಷ ಪ್ರಭಾಕರ ರೈ, ಸತೀಶ್, ಅಚ್ಯುತ್ ಭಟ್ ಮೋಹಿನಿ ವೆಂಕಟೇಶ್ವರಿ ಶಾಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top