'ಮಹಾಂತೇಶ ಬೀಳಗಿ ನಿಜವಾದ ಬಡವರ ಬಂಧು'

Upayuktha
0


ಸುರಪುರ: ಇಂದು ಬಣಗಾರ್ ಫೌಂಡೇಶನ್ ವತಿಯಿಂದ ಇತ್ತಿಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಡಾ. ಮಹಾಂತೇಶ ಬೀಳಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. 


ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಅವರು ಈ ಸಂದರ್ಭದಲ್ಲಿ ಮಾತನಾಡಿ 'ಕರ್ನಾಟಕ ಕಂಡ ಅತ್ಯಂತ ದಕ್ಷ ಅಧಿಕಾರಿಯಾಗಿದ್ದವರು ಮಹಾಂತೇಶ ಬೀಳಗಿ. ದಾವಣಗೆರೆ ಹಾಗೂ ರಾಜ್ಯದ ವಿವಿಧ ಕಡೆಗೆ ಜಿಲ್ಲಾಧಿಕಾರಿಗಳಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಇವರು ನಾಡಿನ ಯುವ ಐಕಾನ್ ಆಗಿದ್ದರು. ಅನೇಕ ಬಡ ಮಕ್ಕಳಿಗೆ ಸ್ಪೂರ್ತಿಯಾಗಿದ್ದರು. ಅತ್ಯಂತ ಬಡತನದಲ್ಲಿ ಬೆಳೆದು ಬಂದ ಬೀಳಗಿ ಅವರು ಸಮಾಜಮುಖಿಯಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದರು. ಬೆಸ್ಕಾಂ ಎಂಡಿ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು ಕೂಡ ಅತ್ಯಂತ ಸರಳ ಜೀವಿಯಾಗಿದ್ದರು. ಮಹಾಂತೇಶ ಬೀಳಗಿಯವರು ಕೆಎಎಸ್/ ಐಎಎಸ್ ಪರೀಕ್ಷೆ ಹೇಗೆ ಎದುರಿಸಬೇಕು ಎಂದು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ನೀಡಿದ್ದರು' ಎಂದು ಹೇಳಿದರು.


'ಬಡ ಹಾಗೂ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಸಹಕಾರ ನೀಡಿದ ಇವರು, ಬಣಗಾರ ಸಮಾಜಕ್ಕೆ ಇವರು ಅಪಾರ ಕೊಡುಗೆ ನೀಡಿದ್ದಾರೆ. ಇಂಥ ಅಧಿಕಾರಿಯನ್ನೇ ನಮ್ಮ ಕನ್ನಡ ನಾಡು ಕಂಡಿಲ್ಲ, ಇವರ ಅಗಲಿಕೆ ನಿಜಕ್ಕೂ ನಾಡಿಗೆ ದೊಡ್ಡ ನಷ್ಟ. ದೇವರು ಇವರ ಆತ್ಮಕ್ಕೆ ಶಾಂತಿಯನ್ನು ನೀಡಲಿ' ಎಂದು ಸುರಪುರದ ಬಣಗಾರ ಫೌಂಡೇಶನ್ ಅಧ್ಯಕ್ಷ ವಸಂತಕುಮಾರ ಬಣಗಾರ ಅವರು ಹೇಳಿದರು.   


ಸುರಪುರದ ಕನ್ನಡ ಸಾಹಿತ್ಯ ಸಂಘದಲ್ಲಿ ಬಣಗಾರ ಫೌಂಡೇಶನ್ ವತಿಯಿಂದ ಇಂದು (ಡಿ.1) ನುಡಿ ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹೋಂಗಾರ್ಡ ಕಮಾಂಡೆಂಟ್ ವೆಂಕಟೇಶ್ ಸುರಪುರಕರ, ಜಾಗೃತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ ಮಾರ್ಗೇಲ್, ಬಣಗಾರ ಸಮಾಜದ ಯುವ ಮುಖಂಡರಾದ ಸಂತೋಷಕುಮಾರ, ಪ್ರಜ್ವಲ್ ಬಣಗಾರ, ಗಾಯಕ ದತ್ತಾತ್ರೇಯ ಜಾಗೀರದಾರ, ನಂದರೆಡ್ಡಿ ಮೂಡಬೂಳ, ಬಾಬುರಾವ ಗುಜಲೋರ, ರಾಘವೇಂದ್ರ ಭಕ್ರಿ ಹಾಗೂ ಇನ್ನಿತರರು ಭಾಗವಹಿಸಿದ್ದರು.


ಪ್ರಾರಂಭದಲ್ಲಿ ಮಹಾಂತೇಶ ಬೀಳಗಿ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top