ಮಂಗಳೂರು: ಕೆನರಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಮತ್ತು ಮಾದಕ ದ್ರವ್ಯ ವಿರೋಧಿ ಕೋಶಗಳು ಜಂಟಿಯಾಗಿ ನಶಾ ಮುಕ್ತ ಭಾರತ್ ಅಭಿಯಾನದಡಿ ಡ್ರಗ್ಸ್ ವಿರುದ್ಧ ಜಾಗೃತಿ ರ್‍ಯಾಲಿಯನ್ನು ಡಿ. 10ರಂದು ಬೆಳಗ್ಗೆ 7:30ಕ್ಕೆ ಆಯೋಜಿಸಿವೆ.
ಸಿ.ಸಿ.ಆರ್.ಬಿ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ರ್‍ಯಾಲಿಗೆ ಚಾಲನೆ ನೀಡಲಿದ್ದಾರೆ. ಕೆನರಾ ಕಾಲೇಜು ಕರೆಸ್ಪಾಂಡೆಂಟ್ ಸಿಎ ಎಂ ಜಗನ್ನಾಥ ಕಾಮತ್ ಮತ್ತು ಮ್ಯಾನೇಜರ್ ಕೆ. ಶಿವಾನಂದ ಶೆಣೈ ಉಪಸ್ಥಿತರಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

