ಅಭಾಸಾಪ ಬೆಳ್ತಂಗಡಿ: ಗೀತೆಯ 16ನೇ ಅಧ್ಯಾಯದ ಉಪನ್ಯಾಸ

Upayuktha
0


ಬೆಳ್ತಂಗಡಿ: ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ನ.30 ರಂದು ಗೀತೆ ಜತೆ ಸಾಹಿತ್ಯ ಸಾಂಗತ್ಯ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಹದಿನಾರನೇ ಅಧ್ಯಾಯ ದೈವಾಸುರ ಸಂಪದ್ವಿಭಾಗಯೋಗದ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿ ಬೆಳ್ತಂಗಡಿಯ ನಿವೃತ್ತ ಬ್ಯಾಂಕ್ ಮೇನೇಜರ್ ಶ್ರೀ ತ್ರಿವಿಕ್ರಮ ಹೆಬ್ಬಾರ್ ಇವರು ನೀಡಿದರು.

   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕ ಶ್ರೀ ರಮೇಶ್ ಸುರ್ಯ ಇವರು ವಹಿಸಿದ್ದರು. ಅತಿಥಿಗಳು ಶಾರದಾ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು.


ಕುಮಾರಿ ಸಿಂಚನಾ ಇವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರು ರಚಿಸಿದ ಮತ್ತು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿದ ಆಶಯ ಗೀತೆಯನ್ನು ಶ್ರೀ ರಮೇಶ್ ಮಯ್ಯ ರವರು ಹಾಡಿದರು. ಡಾ. ದಿವಾ ಕೊಕ್ಕಡ ಇವರು ಸ್ವಾಗತಿಸಿದರು. ಅಭ್ಯಾಗತರನ್ನು ತಾಂಬೂಲ ನೀಡಿ ಸ್ವಾಗತಿಸಲಾಯಿತು.


ಸಂಪನ್ಮೂಲ ವ್ಯಕ್ತಿ ತ್ರಿವಿಕ್ರಮ ಹೆಬ್ಬಾರ್ ಇವರು ಗೀತೆಯ 16ನೇ ಅಧ್ಯಾಯದ ದೈವೀಗುಣ ಮತ್ತು ಅಸುರಗುಣದ ವಿವರಣೆಯ ಜೊತೆಗೆ ಸಾಗಿದ ಉಪನ್ಯಾಸದ ಜೊತೆಗೆ ಫಲಾಪೇಕ್ಷೆ ಬಯಸದ ದಾನವದು ದೈವೀ ಗುಣದ ವಿಶೇಷ ಮತ್ತು ಅಹಂಕಾರ, ಡಂಭಾಚಾರವು ಅಸುರೀ ಗುಣವನ್ನು ಪ್ರತಿನಿಧಿಸುತ್ತದೆ. ಶ್ರೇಷ್ಠತೆಯ ಮನುಜ ಜನ್ಮವನ್ನು ಉಳಿಸಿಕೊಳ್ಳಲು ದೈವಿಕ ಗುಣದ ಜೊತೆಗೆ ಮಾನವತೆಯ ಎಳೆಯ ಜೋಡಿಸುತ್ತಾ ನಡೆಯೋಣ ಎಂದರು.


ಸಂಕ್ಷಿಪ್ತವಾಗಿಯೂ ಅರ್ಥಪೂರ್ಣವಾಗಿ ವಿಶ್ಲೇಷಿಸುತ್ತಾ ಸಮಯದ ಸದುಪಯೋಗಗೊಳಿಸಿ ಸಂಪನ್ಮೂಲ ಭರಿತ ಮಾತುಗಳನ್ನಾಡಿದರು.


ರಮೇಶ್ ಸುರ್ಯ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಿರಂತರವಾಗಿ ಸಾಹಿತ್ಯದ ಒಡನಾಟದಿಂದ ಶಕ್ತಿಯು ಹೆಚ್ಚಳವಾಗುವುದು. ನಿತ್ಯ ಕಾರ್ಯದ ಜೊತೆಗೆ ಮನಸಿನ ಹಿಡಿತಕ್ಕೆ ಸಾಹಿತ್ಯ ಮತ್ತು ಇಂತಹ ಭಗವಂತನ ಚಿಂತನೆಗಳು ಅವಶ್ಯಕ, ದೈವೀ ಗುಣದ ಒಳಗೊಳ್ಳುವಿಕೆಗೆ ಭಗವದ್ಗೀತೆ, ರಾಮಾಯಣ ಮಹಾಭಾರತಗಳಂತಹ ದಿವ್ಯ ಗ್ರಂಥಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ ಅದಕ್ಕಿಂತ ಬೇರೆ ಸಾಧನಗಳು ಬೇಕಿಲ್ಲ ಎಂಬುದಾಗಿ ಸರಳ ನಿದರ್ಶನದ ಮೂಲಕ ಸುಂದರವಾಗಿ ನಿರೂಪಿಸಿದರು.


ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ಅಶ್ವಿಜ ಶ್ರೀಧರ್ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀ ರಾಮಕೃಷ್ಣ ಬದನಾಜೆ  ಇವರು ಸರ್ವರಿಗೂ ಧನ್ಯವಾದವನ್ನಿತ್ತರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.


Post a Comment

0 Comments
Post a Comment (0)
Advt Slider:
To Top