ಕನ್ನಡದ ಅಳಿವು - ಉಳಿವು

Chandrashekhara Kulamarva
0



ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇಂಗ್ಲೀಷ, ಹಿಂದಿ ಭಾಷೆಗಳು ಹುಟ್ಟುವುದಕ್ಕಿಂತ ಮೊದಲು ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು. ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಕನ್ನಡ ಮಾತನಾಡುವ ಕನ್ನಡಿಗರನ್ನು ಒಂದೆಡೆ ಸೇರಿಸಿ ನವೆಂಬರ್ ೦೧ ೧೯೭೩ ರಂದು 'ಕರ್ನಾಟಕ' ರಾಜ್ಯ ಎಂದು ನಾಮಕರಣ ಮಾಡಲಾಯಿತು.

ಕನ್ನಡ ಭಾಷೆ ತನ್ನದೇ ಆದಂತಹ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದೆ. ಪ್ರಸ್ತುತ ದಿನಗಳಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತೃಭಾಷೆಯಾಗಿದ್ದರೂ, ಕನ್ನಡಿಗರೇ ಕನ್ನಡ ಭಾಷೆಯನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ಕನ್ನಡ ಮಾತನಾಡುವುದು ಕೀಳರಿಮೆ ಎಂಬ ಭಾವನೆ ಅವರಲ್ಲಿ ಮನೆ ಮಾಡಿದೆ. ಅನೇಕರು ಕನ್ನಡ ಶಿಕ್ಷಣವನ್ನು ಮರೆತು ಆಂಗ್ಲ ಶಿಕ್ಷಣದತ್ತ ಹೆಜ್ಜೆ ಹಾಕುತ್ತಾ ಸರ್ಕಾರಿ ಶಾಲೆಗಳ ಅಸ್ತಿತ್ವವನ್ನು ಒಂದೊಂದಾಗಿಯೇ ಇಲ್ಲವಾಗಿಸುತ್ತಿದ್ದಾರೆ. ಬೇರೆ ಭಾಷೆಗಳು ಬೇಕು, ಆದರೆ ಅದೇ ನಮ್ಮ ಭಾಷೆಯಾಗಬಾರದು. ಭಾಷೆ ಎನ್ನುವುದು ಜ್ಞಾನ ಸಂಪಾದನೆಯ ಸಾಧನವೇ ಹೊರತು ಜ್ಞಾನವಲ್ಲ. 

ಕರ್ನಾಟಕ ಅನೇಕ ಭಾಷಿಕರನ್ನು , ಕನ್ನಡೇತರರನ್ನು ಒಳಗೊಂಡ ವೈವಿಧ್ಯತೆಯ ರಾಜ್ಯವಾಗಿದೆ. ಎಲ್ಲಿ ಅನೇಕ ಜನರು ಹಲವಾರು. ವರ್ಷಗಳಿಂದ ನೆಲೆ ನಿಂತಿದ್ದರೂ, ತಮ್ಮ ಮೂಲ ಭಾಷೆಯಲ್ಲಿಯೇ ಮಾತನಾಡುತ್ತಾರೆ ಹೊರತು ಕನ್ನಡವನ್ನು ಕಲಿಯುವ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂಬುದು ವಿಪರ್ಯಾಸ. 

ಕರ್ನಾಟಕದಲ್ಲಿರುವ ಕನ್ನಡಿಗರೇ ಕನ್ನಡ ಭಾಷೆಯನ್ನು ಮಾತನಾಡದಿದ್ದರೆ ಬೇರೆ ರಾಜ್ಯದವರು ಕನ್ನಡವನ್ನು ಉಳಿಸಿ ಬೆಳೆಸುತ್ತಾರೆಯೇ? ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡ ಸಂಘಟನೆಗಳು ಹೋರಾಟ, ಪ್ರತಿಭಟನೆಗಳನ್ನು ನೆಡೆಸಬೇಕೇ?, ಇಲ್ಲವಾದರೆ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆಯೇ? ಎಂಬ ಪ್ರಶ್ನೆ ಮೂಡುತ್ತದೆ.

ನವೆಂಬರ್ ೦೧ ರಂದು ರಾಜ್ಯದೆಲ್ಲೆಡೆ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. 'ಕನ್ನಡವೇ ಸತ್ಯ - ಕನ್ನಡವೇ ನಿತ್ಯ', 'ಕನ್ನಡ ಭಾಷೆ ಉಳಿಸಿ - ಬೆಳೆಸಿ' ಇಂತಹ ಅನೇಕ ಘೋಷಣೆಗಳೊಂದಿಗೆ ರಾಜ್ಯೋತ್ಸವ ಆಚರಿಸಿ, ಮರುದಿನ ಕನ್ನಡವನ್ನು ಮರೆತು ಬದುಕುತ್ತಾರೆ. ಹಾಗಾದರೇ ಕನ್ನಡ ಭಾಷೆ ನವೆಂಬರ್ ೦೧ ಕ್ಕೆ ಮಾತ್ರ ಸೀಮಿತವೇ? ಎಂಬ ಸಂಶಯ ಮೂಡುತ್ತದೆ. 

ಕನ್ನಡ ಭಾಷೆ ನವೆಂಬರ್ ೦೧ ಕ್ಕೆ ಮಾತ್ರ ಸೀಮಿತವಾಗಿರದೇ ಅದು ವರ್ಷವಿಡೀ ವಿಜೃಂಭಣೆಯಿಂದ ಎಲ್ಲೆಡೆ ಮೊಳಗಬೇಕು. ಬೇರೆ ಭಾಷೆಗಳನ್ನು ತಿಳಿಯುವುದರ ಜೊತೆಗೆ ಕನ್ನಡವನ್ನು ದಿನನಿತ್ಯದ ಬಳಕೆಯಲ್ಲಿ ಉಪಯೋಗಿಸಬೇಕು. ಸಹಸ್ರಾರು ವರ್ಷಗಳ ಇತಿಹಾಸವನ್ನು ಹೊಂದಿದ ಕನ್ನಡ ವಿಶ್ವದೆಲ್ಲೆಡೆ ತನ್ನ ಕಂಪು ಸೂಸಲು ಕನ್ನಡಿಗರೇ ಬದ್ಧರಾಗಿರಬೇಕು. ಕನ್ನಡಕ್ಕೆ ನಮ್ಮ ಮೊದಲ ಆದ್ಯತೆಯಿರಬೇಕು. ಕನ್ನಡದ ಅಳಿವು - ಉಳಿವು ನಮ್ಮಲ್ಲಿಯೇ ಇದೆ. ಇನ್ನಾದರೂ ಎಚ್ಚೆತ್ತುಕೊಂಡು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಸಿದ್ದರಾಗಿರಿ.



-ಪೂಜಾ ಲಟ್ಟಿ 

ನೇರ್ಲಿ, ಬೆಳಗಾವಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
To Top