'ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು'

Chandrashekhara Kulamarva
0



ಸುರತ್ಕಲ್‌: ಭವಿಷ್ಯದ ಬದುಕನ್ನು ಉಜ್ವಲಗೊಳಿಸಲು ಪುಸ್ತಕಗಳ ಓದು ಬಲು ಸಹಕಾರಿ. ಆಧುನಿಕ ಕಾಲ ಘಟ್ಟದಲ್ಲಿ ಓದುವ ವರ್ಗ ಗ್ರಂಥಾಲಯಕ್ಕೆ ಆಗಮಿಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಇಶ್ಯೂಸ್ ಅಂಡ್ ಕನ್ಸರ್ನ್ಸ್ ಆಂಗ್ಲ ಪತ್ರಿಕೆಯ ಸಂಪಾದಕ ಜಯರಾಮ ಶ್ರೀಯಾನ್ ನುಡಿದರು.


ಅವರು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಮಂಗಳೂರು, ನಗರ ಗ್ರಂಥಾಲಯ ಸುರತ್ಕಲ್ ಶಾಖೆ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಓದುಗರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಸುರತ್ಕಲ್ ರೋಟರಿ ಕ್ಲಬ್ ಸೇವಾ ನಿರ್ದೇಶಕ ಕೃಷ್ಣಮೂರ್ತಿ ಅವರು ಗ್ರಂಥಾಲಯ ಪಿತಾಮಹ ಎಸ್. ಆರ್. ರಂಗನಾಥನ್ ಅವರ ಗ್ರಂಥಾಲಯ ವಿಜ್ಞಾನದ ಕುರಿತಾದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು ಗ್ರಂಥಾಲಯದ ಪ್ರಯೋಜನಗಳನ್ನು ಸರ್ವರೂ ಪಡೆದು ಕೊಳ್ಳಬೇಕು ಎಂದರು.


ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀಪತಿ ಭಟ್, ಶಿಕ್ಷಕಿಯರಾದ ಕುಸುಮ ಕೆ.ಆರ್. ಮತ್ತು ಸಂಗೀತ ಶುಭ ಹಾರೈಸಿದರು. ಗ್ರಂಥಪಾಲಕಿ ಫರ್ಜಾನ ಬೇಗಂ, ಸಹಾಯಕರಾದ ವೇದಾವತಿ ಮತ್ತು ವಸಂತಿ ಉಪಸ್ಥಿತರಿದ್ದರು. ಶ್ರುತಿ ಮತ್ತು ಪ್ರೇರಣಾ ಕಾರ್ಯಕ್ರಮ ನಿರೂಪಿದರು. ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕ ಪ್ರದರ್ಶನ ನಡೆಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top