'ಸಿರಿಬಾಗಿಲು' ಮಾತ್ರವಲ್ಲ ಧರ್ಮ ಸಂಸ್ಕ್ರತಿಗೆ ಹೆಬ್ಬಾಗಿಲು: ಒಡಿಯೂರು ಶ್ರೀಗಳ ಮೆಚ್ಚುಗೆ

Upayuktha
0


ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಸದಸ್ಯ ಸಮಾವೇಶದ ಉದ್ಘಾಟನೆ ಆಶೀರ್ವಚವನವನ್ನು ನೆರವೇರಿಸಿದ ಒಡಿಯೂರು ಶ್ರೀಗಳು "ಇದು ಸಿರಿಬಾಗಿಲು ಮಾತ್ರವಲ್ಲ ಧರ್ಮ ಸಂಸ್ಕೃತಿಗೆ ಹೆಬ್ಬಾಗಿಲು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಆರಾಧನಾ ಕಲೆಯಾದ ಯಕ್ಷಗಾನವನ್ನು ಇಂದು ವಿದ್ವಾಂಸರುಗಳು ಸೇರಿ ಅದರ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ನವರಸ ಕಲೆ ಎಂದೇ ಹೇಳಬಲ್ಲ ಯಕ್ಷಗಾನ ದಲ್ಲಿ ಭಾವ-ಭಾಷಾಶುದ್ದಿಗೆ ಆದ್ಯತೆ ಹಾಗೂ ಸಮಾಜಕ್ಕೆ ಪುರಾಣ ಕಥೆಗಳ ಪರಿಚಯವು ಉಂಟಾಗುತ್ತದೆ. ಪ್ರತಿಯೊಬ್ಬರ ಬದುಕಿಗೆ ಪ್ರತಿ ಪ್ರಸಂಗದಲ್ಲಿ ಬರುವ ಸಂದೇಶಗಳು ಮಾರ್ಗದರ್ಶನವಾಗುತ್ತದೆ. ಒಬ್ಬ ವ್ಯಕ್ತಿಯ ನಿಸ್ವಾರ್ಥ ಸೇವೆಗೆ ದಾನಿಗಳ ಸಹಕಾರ ಸಿಗುತ್ತದೆ ಎಂಬುದಕ್ಕೆ ಪ್ರತಿಷ್ಠಾನ ಮುಖೇನ ಸಿರಿಬಾಗಿಲು ಮಯ್ಯರು, ಅವರು ನಡೆಸುವ ಯಶಸ್ವಿ ಚಟುವಟಿಕೆ ಉದಾಹರಣೆ ಎಂದು ಶ್ರೀಗಳು ಹೇಳಿದರು.


ಯಕ್ಷಗಾನ ಕಲೆ ಅದರ ಶ್ರೇಷ್ಠತೆ ಅದನ್ನು ಉಳಿಸುವಲ್ಲಿ ಮಯ್ಯರು ಹಾಗು ಮನೆಯವರ, ಸದಸ್ಯರ ಶತ ಪ್ರಯತ್ನ ಮೆಚ್ಚುವಂತದ್ದು ಎಂದರು.  ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ರವರು ಪ್ರತಿಷ್ಠಾನದ  ಇದುವರೆಗಿನ ಚಟುವಟಿಕೆ, ಮುಂದಿನ ಹಲವು ಯೋಜನೆಗಳನ್ನು ವಿವರಿಸಿದರು.


ಮುಖ್ಯ ಅತಿಥಿಯಾಗಿ ರಾಧಾಕೃಷ್ಣ ಕೆ. ಉಳಿಯತಡ್ಕ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಸತೀಶ ಅಡಪ ಸಂಕಬೈಲು, ಮಾಜಿ ಯಕ್ಷಗಾನ ಅಕಾಡೆಮಿಯ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಶೀನಶೆಟ್ಟಿ ಕಜೆ ಶುಭ ಹಾರೈಸಿದರು.


ರಾಜಾರಾಮರಾವ್ ಮೀಯಪದವು ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಶಾಂತ ಹೊಳ್ಳ ನೀರಾಳ ನಿರೂಪಿಸಿದರು. ಪ್ರತಿಷ್ಠಾನದ ಪೋಷಕರಾದ  ಎಚ್. ಕೃಷ್ಣ ಭಟ್ ಮಂಗಳೂರು, ಸದಸ್ಯರುಗಳಾದ ಎಂ. ಎಲ್. ಭಟ್ ಸಾಗರ, ಸದಾಶಿವ ಭಟ್ ಎದ್ರುಕಳ ಉಪಸ್ಥಿತರಿದ್ದರು.


ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ಇವರು ಧನ್ಯವಾದವಿತ್ತರು. ಇದಕ್ಕೂ ಮುಂಚೆ ಜಯರಾಮ ದೇವಸ್ಯ ಮತ್ತು ಬಳಗದವರಿಂದ "ಶರ ಸೇತುಬಂಧನ" ಯಕ್ಷಗಾನ ತಾಳಮದ್ದಳೆ ಜರಗಿತು. ಸಂಜೆ 6:00 ಯಿಂದ ಸಾಕೇತ ಕಲಾವಿದರು ಹೆಗ್ಗೋಡು ಸಾಗರ ಇವರಿಂದ ಬಡಗುತಿಟ್ಟಿನ ಗದಾಯುದ್ಧ ಯಕ್ಷಗಾನ ಪ್ರದರ್ಶನ ನಡೆಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top