ಎಸ್.ಡಿ.ಎಂ ಶಾಲೆ ಕುಮಾರಿ ಅನೀಶ ರಾಜ್ಯ ಮಟ್ಟಕ್ಕೆ: ಗುಂಡು ಎಸೆತದಲ್ಲಿ ವಿನೂತನ ದಾಖಲೆ

Upayuktha
0


ಉಜಿರೆ: ಸುಳ್ಯ ತಾಲೂಕಿನ ಪಂಜದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ -  ಬಾಲಕಿಯರ ಅತ್ಲೇಟಿಕ್ಸ್ ಸ್ಪರ್ಧೆಯ 17ರ ವಯೋಮಾನದ ಬಾಲಕಿಯರ ಗುಂಡು ಎಸೆತದಲ್ಲಿ.  ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿನಿ ಕುಮಾರಿ  ಅನೀಶ  ಪ್ರಥಮ ಸ್ಥಾನ ಪಡೆದಿದ್ದಾರೆ.


11.43  ಮೀ ದೂರಕ್ಕೆ ಎಸೆದು ಕೂಟದಲ್ಲಿಯೇ ವಿನೂತನ ಸಾಧನೆ ಮೆರೆದಿದ್ದಾರೆ. ಈ ಮೂಲಕ ಬಾಗಲಕೋಟೆಯಲ್ಲಿ ನಡೆಯಲ್ಲಿರು ರಾಜ್ಯ ಮಟ್ಟದ ಬಾಲಕರ- ಬಾಲಕಿಯರ ಅತ್ಲೇಟಿಕ್ಸ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.


ಇವರಿಗೆ ಎಸ್.ಡಿ.ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಸಮೂಹ ಅಭಿನಂದಿಸಿರುತ್ತಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top