ಪ್ರಜ್ಞಾ ಗುರುಕುಲದ ನೆರವಿಗಾಗಿ ಸಂಗೀತ ಕಾರ್ಯಕ್ರಮ
ಬೆಂಗಳೂರು: ಪ್ರತ್ಯರ್ಪಣಾ ಪೌಂಡೇಶನ್ ವತಿಯಿಂದ ನಗರದ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ನವೆಂಬರ್ 8, ಶನಿವಾರ ಸಂಜೆ 5-00ಕ್ಕೆ ಪ್ರಜ್ಞಾಗುರುಕುಲದ ನೆರವಿಗಾಗಿ ಸಂಗೀತ ಕಾರ್ಯಕ್ರಮ ಹಾಗೂ ಪ್ರೊ|| ಹ .ವಿ. ಕೃಷ್ಣಮೂರ್ತಿಯವರ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಕಾರ್ಯಕ್ರಮಗಳು :
ವಿಜಯಾ ಮ್ಯೂಸಿಕ್ ಕಾಲೇಜಿನ ವಿದ್ಯಾರ್ಥಿಗಳಿಂದ "ಸಮೂಹ ಗಾಯನ", "ಕೃಷ್ಣಾಯ ತುಭ್ಯಂ ನಮಃ" ಶೀರ್ಷಿಕೆಯಲ್ಲಿ ವಿದುಷಿ ಭಾರ್ಗವಿ ವೆಂಕಟ್ರಾಮ್ (ಗಾಯನ), ವಿದ್ವಾನ್ ವಿಷ್ಣು ವೆಂಕಟ್ರಾಮ್ (ಪಿಟೀಲು), ವಿದ್ವಾನ್ ವಿನೋದ ಶ್ಯಾಮ್ ಆನೂರ್ (ಭಾರತೀಯ ತಾಳ ವಾದ್ಯ), ವಿದ್ವಾನ್ ಸಾಯಿ ವಂಶಿ (ರಿದಂ ಪ್ಯಾಡ್), ವಿದ್ವಾನ್ ವಿಶಾಖ್ ರಾಮಪ್ರಸಾದ್ (ಕೀ-ಬೋರ್ಡ್), ವಿದ್ವಾನ್ ರಘುನಂದನ್ ರಾಮಕೃಷ್ಣ (ಬಾನ್ಸುರಿ).
"ಭಗವದ್ಗೀತೆ ಆನ್ ವೀಲ್ಸ್" (ವೀಲ್ಚೇರ್ ನಲ್ಲಿ ವಿಭಿನ್ನ ಸಾಮರ್ಥ್ಯದ ನೃತ್ಯಗಾರರರಿಂದ ಪ್ರದರ್ಶನ). ನಿರ್ದೇಶನ ಮತ್ತು ಸಂಯೋಜನೆ : 'ಕರ್ನಾಟಕ ಕಲಾಶ್ರೀ' ಮತ್ತು 'ರಾಷ್ಟ್ರಪ್ರಶಸ್ತಿ' ಪುರಸ್ಕೃತ ಗುರು. ಸೈಯದ್ ಸಿರಾಜುದ್ದೀನ್ ಪಾಷಾ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


