ಹಲೋ
ಹೇಗಿದ್ದೀರಾ?
ನವೆಂಬರ್. ಬಂತೆಂದರೆ ರಾಜ್ಯೋತ್ಸವದ. ಸಂಭ್ರಮವೇ ಸಂಭ್ರಮ. ಎಲ್ಲೆಲ್ಲೋ ಕನ್ನಡ ಗೀತೆಗಳು ಮೊಳಗಳಲಿ ಕ್ಕೆ ಶುರು ಆಗಿ ಬಿಡುತ್ತದೆ.
ಕನ್ನಡ ಭಾಷೆಗೆ ಸುಮಾರು ಐದು ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ತುಂಬ ಸುಂದರವಾದ ಲಿಪಿಯನ್ನು ಹೊಂದಿದೆ.
ಸಂವಿಧಾನದಲ್ಲಿ ಗುರುತಿಸಲ್ಪಡುವ ಕನ್ನಡ ಭಾಷೆ ಅತ್ಯಂತ ಪ್ರಭಾವಯುತವಾದ ಭಾಷೆ ಕೂಡ ಆಗಿದೆ.
ಕನ್ನಡ ಭಾಷೆ ಮೂಲತಃ ಹೃದಯದ ಭಾಷೆ ಕೂಡ ಆಗಿದೆ. ನಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವ ಭಾಷೆ ಆಗಿದ್ದುದರಿಂದ ಕನ್ನಡ ಭಾಷೆಯಲ್ಲಿಯೇ ಅನೇಕ ಕೃತಿಗಳನ್ನು ರಚಿಸಲಾಗಿದೆ. ಸುಮಾರು ಎಂಟು.ಜ್ಞಾನಪೀಠ ಪ್ರಶಸ್ತಿಗಳನ್ನು ಹೊಂದಿದ ಕನ್ನಡ ಭಾಷೆ ಎಷ್ಟೋ ಕವಿಗಳ ಹೃದಯದ ಭಾಷೆ ಕೂಡ ಆಗಿದೆ.
ಆದರೆ ಅಷ್ಟಕ್ಕೇ ನಾವು ಸಮಾಧಾನ ಪಟ್ಟು ಕೊಳ್ಳುವಂತಿಲ್ಲ. ಆಂಗ್ಲ ಭಾಷೆಯ ಸೆಳೆತದ ಮುಂದೆ ನಮ್ಮ ಹೃದಯದ ಭಾಷೆ ಕೊಚ್ಚಿ ಕೊಂಡು ಹೋಗದಂತೆ ನೋಡಿ ಕೊಳ್ಳುವ ಹೊಣೆ ಕೂಡ ನಮ್ಮ ಮೇಲೆ ಇದೆ.
ನಾವು ಕನ್ನಡವನ್ನು ಎಷ್ಟೇ ಪ್ರೀತಿಸಿದರೂ. ನಮ್ಮ ಭವಿಷ್ಯದ ಪ್ರಶ್ನೆ ಮುಂದೆ ಬಂದಾಗ ನಮ್ಮ ಮುಂದೆ ಇಂಗ್ಲಿಷ್ ಮೀಡಿಯಂ ಎಂಬ ಪೆಡಂಭೂತ ನಮ್ಮ ಮುಂದೆ ಬಂದು ನಿಲ್ಲುತ್ತದೆ.
ಕೂಲಿ ಕೆಲಸ ಮಾಡುವವರು, ಅನಕ್ಷರಸ್ಥರು ಕೂಡ ತಮ್ಮ ಮಕ್ಕಳನ್ನು. ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಲು ಪಡುವ ಪಾಡು ನೋಡಿದರೆ,ನಾವು ಕನ್ನಡದ ಹೊಣೆಯನ್ನು ಹೊರ ಬೇಕಾಗಿದೆ.
ಹಾಗಂತ ಆತಂಕ ಪಟ್ಟು ಕೊಳ್ಳುವ ಪ್ರಮೇಯವೂ ಇಲ್ಲ. ಕಪ್ಪು ಕರ್ಮೋಡದ ನಡುವೆ ಬೆಳ್ಳಿ ಚುಕ್ಕಿಯೊಂದು ಮಿನುಗುವಂತೆ ನಮಗೆ ಭರವಸೆ, ಪರಿಹಾರ ಸಿಗುತ್ತವೆ.ಆದರೆ ಹುಡುಕ ಬೇಕಷ್ಟೇ.
ಕನ್ನಡ ಭಾಷೆ ಅನ್ನದ ಭಾಷೆಯಾಗಿ. ಪರಿವರ್ತನ ಹೊಂದಿದಾಗ ಮಾತ್ರ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕನ್ನಡ ಭಾಷೆ ಉನ್ನತ ಶಿಕ್ಷಣದ ಒಂದು ಭಾಗವಾಗ. ಬೇಕು. ಕೇವಲ ಕಾಗದದ ಮೇಲೆ ಮಾತ್ರ ಕನ್ನಡ ಭಾಷೆ ಮೂಡದೆ, ಕಾಗದದ ಬಲಿಯಾಗದೆ ಇಂಗ್ಲಿಷ್ ಭಾಷೆಗೆ ಸೆಡ್ಡು ಹೊಡೆಯುವಂತಾಗಬೇಕು. ರೈಲ್ವೇ ನಿಲ್ದಾಣದಲ್ಲಿ, ವಿಮಾನ ನಿಲ್ದಾಣದಲ್ಲಿ, ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ, ಅಧಿಕಾರಿಗಳ ಮೀಟಿಂಗನಲ್ಲಿ, ಕನ್ನಡ ಭಾಷೆ ಮಿಂಚು ವಂತಾಗಬೇಕು.
ಯಾರೋ ಒಬ್ಬ ವೈದ್ಯರು ಮಾತ್ರವಲ್ಲ, ಪ್ರತಿಯೊಬ್ಬ ವೈದ್ಯರು ಕನ್ನಡದಲ್ಲಿ ಔಷಧಿಗಳ ಹೆಸರು ಬರೆಯುವಂತಾಗಬೇಕು.ಕನ್ನಡ ಭಾಷೆ ಮೊಬೈಲ್ ಸಾಫ್ಟವೇರ್ ನಲ್ಲಿ, ಗೂಗಲ್ನಲ್ಲಿ, ವೆಬ್ಸೈಟ್ಗಳಲ್ಲಿ, ಲಿಂಕ್ಗಳಲ್ಲಿ ಮಿಂಚುವಂತಾದರೆ ಕನ್ನಡ ಭಾಷೆ ,ಯಾರಿಗೂ ಏನು ಕಡಿಮೆಯಿಲ್ಲ ಎಂದು ಮೆರೆದಂತೆ ಆಗುತ್ತದೆ.
ಐಟಿ, ಬಿಟಿ ತಂತ್ರಜ್ಞಾನದ ಕಂಪನಿಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಓದಲು, ಬರೆಯಲು ಕಲಿತಿರಬೇಕು ಎಂಬ ಅಲಿಖಿತ ನಿಯಮ ಮಾಡಿದರೆ ಕನ್ನಡ ತನ್ನ ಶ್ರೇಷ್ಠತೆಯನ್ನು ತೋರಿಸಿ ದಂತಾಗುತ್ತದೆ.ಆಗ ಕನ್ನಡ ಭಾಷೆ ಹೃದಯದ ಭಾಷೆ ಅನ್ನದ ಭಾಷೆಯಾಗಿ ಹೊರ ಹೊಮ್ಮುತ್ತದೆ.
ಕಿರಾಣಿ ಅಂಗಡಿಯ ವ್ಯಾಪಾರಿಯಿಂದ ಹಿಡಿದು ಹೈಕೋರ್ಟಿನ ನ್ಯಾಯಮೂರ್ತಿ ತೀರ್ಪಿನಲ್ಲಿ ಕನ್ನಡ ಬಂದು ಕುಳಿತರೆ ನಾವು ಕನ್ನಡ ರಾಜ್ಯೋತ್ಸವ ಆಚರಿಸಿದ್ದಕ್ಕೂ, ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಕ್ಕೂ ಸಾರ್ಥಕವಾಗುತ್ತದೆ ಅಲ್ಲವೇ?
ಏನಂತೀರಾ?
ಎಲ್ಲ ಓದುಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
-ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


