ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ವತಿಯಿಂದ, ಹರಿದಾಸರೂ ಕನ್ನಡ ನಾಡು ನುಡಿಯ ಸೇವೆಗಾಗಿ, ಕನ್ನಡ ತಾಯಿ ಭುವನೇಶ್ವರಿಯ ಸ್ಮರಣೆಯನ್ನು, ನಾಡದೇವಿಗೆ ಅಕ್ಷರಾಂಜಲಿಯನ್ನು ಸಲ್ಲಿಸುವ ಮೂಲಕ, ಕರ್ನಾಟಕದ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.
ನವೆಂಬರ ಮಾಸ ಪೂರ್ತಿಯಾಗಿ ಪ್ರತಿ ನಿತ್ಯವೂ, ಮೂವತ್ತು ಮಹಿಳಾ ಹರಿದಾಸರು ರಚಿಸಿದ ಕನ್ನಡದ ಕೃತಿಗಳನ್ನು ರಚಿಸಿ, ಹಾಡಿ, ಮೈತ್ರೇಯಿ ಬ್ಲಾಗ್ ನಲ್ಲಿ ಪ್ರಸಾರ ಮಾಡಿ ಕನ್ನಡ ಮಾಸದ ಹಿರಿಮೆಯನ್ನು ಆಚರಿಸಲಾಯಿತು.
ಆದಿ ಕವಿ ವಾಲ್ಮೀಕಿ ರಾಮಾಯಣದ ಯುದ್ಧ ಕಾಂಡದ, “ಅಪಿ ಸ್ವರ್ಣಮಯೀ ಲಂಕಾ: ನ ಮೇ ಲಕ್ಷ್ಮಣ ರೋಚತೇ । ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ।" ನಮ್ಮ ತಾಯಿ ಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠವಾದುದರಿಂದ ಚಿನ್ನದಿಂದ ಅಲಂಕರಿಸಲ್ಪಟ್ಟ ಈ ಲಂಕೆಯಲ್ಲಿ ನನಗೆ ಆಸಕ್ತಿಯಿಲ್ಲ” ಎಂಬ ಮಾತಿನಂತೆ, ನಾಡು ನುಡಿಯ ಸೇವೆಯನ್ನು ಅವಕಾಶ ಸುಂದರವಾಗಿಯೇ ಬಳಸಿಕೊಂಡಿದ್ದಾರೆ. ಈ ಕವನಗಳನ್ನೆಲ್ಲ ಒಟ್ಟಾಗಿಸಿ, “ಮೈತ್ರೇಯಿ ಕನ್ನಡದ ಅಕ್ಷರಾಂಜಲಿ” ನಾಡದೇವಿಗೆ ಅರ್ಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




