ಬಳ್ಳಾರಿ: ಅಭಯ ಫೌಂಡೇಶನ್ ಬಳ್ಳಾರಿ ಮತ್ತು ಬಳ್ಳಾರಿ ಮೆಡಿಕಲ್ ಕಾಲೇಜ್ & ರಿಸರ್ಚ್ ಸೆಂಟರ್ ಸಂಯುಕ್ತವಾಗಿ ಬಳ್ಳಾರಿಯ ವಾಸವಿ ಕಲ್ಯಾಣ ಮಂದಿರದಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು ಎಂದು ಅಭಯ ಫೌಂಡೇಶನ್ ಅಧ್ಯಕ್ಷ ರಾಮಕೃಷ್ಣ ರೇಣಿಗುಂಟ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಮಹತ್ತ್ವದ ಕಾರ್ಯಕ್ಕಾಗಿ 57ಕ್ಕೂ ಹೆಚ್ಚು ದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾದರು.
ಈ ಕಾರ್ಯಕ್ರಮದ ಉದ್ದೇಶ ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಮತ್ತು ಜೀವ ರಕ್ಷಕ ರಕ್ತದ ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡುವುದು. ಬಳ್ಳಾರಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ವೃತ್ತಿಪರರು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ರಕ್ತ ಸಂಗ್ರಹಣೆಯನ್ನು ಸುಗಮವ ಸುಗಮವಾಗಿ ನಡೆಸಿದರು. ಅಭಯ ಫೌಂಡೇಶನ್‌ನ ಸ್ವಯಂಸೇವಕರು ಸಕ್ರಿಯವಾಗಿ ಸಹಕರಿಸಿ ದಾನಿಗಳನ್ನು ಉತ್ತೇಜಿಸಿದರು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಸಹಕಾರ ನೀಡಿದ ಎಲ್ಲಾ ದಾನಿಗಳು, ಸ್ವಯಂಸೇವಕರು ಮತ್ತು ಬೆಂಬಲಿಗರಿಗೆ ಸಂಘಟಕರು ಹೃತ್ತೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು. ಸಮಾಜ ಹಿತಕ್ಕಾಗಿ ಇಂತಹ ಮಾನವೀಯ ಕಾರ್ಯಗಳನ್ನು ಮುಂದುವರಿಸುವ ಬದ್ಧತೆಯನ್ನು ಅಭಯ ಫೌಂಡೇಶನ್ ಪುನರ್ ದೃಢಪಡಿಸಿದೆ.
ಈ ಸಂಧರ್ಭದಲ್ಲಿ ಅಭಯ ಫೌಂಡೇಶನ್ ತಂಡ ಬಳ್ಳಾರಿ- ಅಧ್ಯಕ್ಷ ರಾಮ್ ರೇಣಿಗುಂಟ್ಲ, ಉಪಾಧ್ಯಕ್ಷ ನಮ ಕಾರ್ತಿಕ್, ಕಾರ್ಯದರ್ಶಿ ಎಚ್.ಆರ್ ಬಾಲನಾಗರಾಜ್, ಜಂಟಿ ಕಾರ್ಯದರ್ಶಿ ಅಜಯ್, ಖಜಾಂಚಿ ಕಿಶೋರ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


