ಮಂಗಳೂರು: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕೇತರ ಸಾಲ ಪೂರೈಕೆ ಸಂಸ್ಥೆಯಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್ ಕಳೆದ ಹಬ್ಬದ ಋತುವಿನಲ್ಲಿ ಕಂಪೆನಿ ಗ್ರಾಹಕ ಸಾಲದ ಪ್ರಮಾಣದಲ್ಲಿ ಶೇ 27ರಷ್ಟು ಹೆಚ್ಚಳ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 29 ರಷ್ಟು ಏರಿಕೆ ದಾಖಲಾಗಿತ್ತು.
ಕಳೆದ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 26ರ ನಡುವೆ ಬಜಾಜ್ ಫೈನಾನ್ಸ್ ಸುಮಾರು 63 ಲಕ್ಷ ರೂಪಾಯಿಗಳ ಸಾಲ ವಿಲೇವಾರಿ ಮಾಡಿದೆ. ಈ ಅವಧಿಯಲ್ಲಿ ಕಂಪೆನಿ 23 ಲಕ್ಷ ಹೊಸ ಗ್ರಾಹಕರನ್ನು ಪಡೆದಿದೆ. ಈ ಪೈಕಿ ಶೇ 53ರಷ್ಟು ಮಂದಿ ಮೊದಲ ಬಾರಿಗೆ ಸಾಲ ಪಡೆಯುತ್ತಿರುವವರಾಗಿದ್ದಾರೆ. ಇದು ಆರ್ಥಿಕ ಸಮಗ್ರತೆಯ ವಿಸ್ತರಣೆಯನ್ನು ಸೂಚಿಸುತ್ತದೆ ಎಂದು ಅಧ್ಯಕ್ಷ ಸಂಜೀವ್ ಬಜಾಜ್ ಹೇಳಿದ್ದಾರೆ.
ಟೆಲಿವಿಷನ್ ಮತ್ತು ಏರ್ ಕಂಡೀಷನರ್ಗಳ ಮೇಲಿನ ಜಿಎಸ್ಟಿ ಕಡಿಮೆಯಾಗಿರುವುದರಿಂದ ಸಾಲದ ಸರಾಸರಿ ಪ್ರಮಾಣ ಶೇ 6 ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಅಧಿಕ ಗುಣಮಟ್ಟದ ಉತ್ಪನ್ನಗಳಿಗೆ ಗ್ರಾಹಕರು ಆದ್ಯತೆ ನೀಡುತ್ತಿದ್ದಾರೆ. ಟೀವಿ ಖರೀದಿಗೆ ನೀಡುತ್ತಿರುವ ಆರ್ಥಿಕ ನೆರವಿನಲ್ಲಿ ಪ್ರೀಮಿಯಂ 40 ಇಂಚಿನ ಟೀವಿ ಖರೀದಿಗೆ ಹೆಚ್ಚು ವ್ಯಯವಾಗಿದೆ. ಕಳೆದ ವರ್ಷ ಟೀವಿ ಖರೀದಿಗೆ ಶೇ 67ರಷ್ಟು ಸಾಲ ಬಳಕೆಯಾಗಿದ್ದರೆ ಈ ವರ್ಷ ಆ ಪ್ರಮಾಣ ಶೇ 71ರಷ್ಟಿದೆ ಎಂದು ವಿವರಿಸಿದ್ದಾರೆ.
ವೈವಿಧ್ಯಮಯ ಮತ್ತು ಟೆಕ್ ಆಧಾರಿತ ಬ್ಯಾಂಕಿಂಗ್ಯೇತರ ಸಂಸ್ಥೆಯಾದ ಬಜಾಜ್ ಫೈನಾನ್ಸ್ ಸಾಲ ಲಭ್ಯತೆಯನ್ನು ಹೆಚ್ಚಿಸಲು ತಂತ್ರಜ್ಞಾನ ನಾವೀನ್ಯತೆಗೆ ಒತ್ತು ನೀಡುತ್ತಲೇ ಬಂದಿದೆ. ಇದರಿಂದ ಗ್ರಾಹಕರ ಮತ್ತು ಉದ್ಯಮಗಳ ಅನುಭವವನ್ನು ಬದಲಾಯಿಸುತ್ತಿದೆ. ಗ್ರಾಹಕ ಸಾಲ ನೀಡಿಕೆಯ ಮುಂಚೂಣಿಯ ಸಂಸ್ಥೆಯಾಗಿ ಕಂಪೆನಿಯು ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಉತ್ಪನ್ನಗಳು, ಪೀಠೋಪಕರಣಗಳು, ಸೋಲಾರ್ ಪ್ಯಾನೆಲ್ ಮತ್ತು ಇನ್ನೂ ಅನೇಕ ಗ್ರಾಹಕ ಕ್ಷೇತ್ರದ ಉತ್ಪನ್ನಗಳ ಖರೀದಿಗೆ ನೆರವು ನೀಡುತ್ತಿದೆ.




