ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗೃತಿ ವಾರಾಚರಣೆ

Chandrashekhara Kulamarva
0

 



ಮಂಗಳೂರು: ಜೀವನದಲ್ಲಿ ಅಚಲತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವ ಪ್ರಯತ್ನವಾಗಿ, ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ ಸಮಿತಿಯ ವತಿಯಿಂದ ಜಾಗೃತಿ ವಾರಾಚರಣೆ-2025ರ ಅಂಗವಾಗಿ ಶುಕ್ರವಾರ ಅಕ್ಟೋಬರ್ 31ರಂದು ಕಾಲೇಜು ಆವರಣದಲ್ಲಿ ಜಾಗೃತಿ ವಾರಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್, ಮಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕರಾದ ಸುದೇಶ್ ಕುಮಾರ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ತಮ್ಮ ಪ್ರಾಸಂಗಿಕ ಭಾಷಣದಲ್ಲಿ ಅವರು ನೈತಿಕ ನಡವಳಿಕೆ ಮತ್ತು ಸಮೂಹ ಹೊಣೆಗಾರಿಕೆಯ ಮಹತ್ವವನ್ನು ಹೇಳಿದರು.


"ಜಾಗೃತಿ ನಮ್ಮ ಸಯುಕ್ತ ಹೊಣೆಗಾರಿಕೆ" ಎಂಬ ಈ ವರ್ಷದ ವಿಷಯ ವಸ್ತುವಿಗೆ ಅನುರೂಪವಾಗಿ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಭಾಗಿತ್ವ ಅಗತ್ಯವೆಂದು ತಿಳಿಸಿದರು. ಕೆನರಾ ಬ್ಯಾಂಕ್ ಎಂ.ಜಿ ರೋಡ್ ಶಾಖೆಯ ವ್ಯವಸ್ಥಾಪಕ ಡ್ಯಾನಿ ಬಾಬು ಅವರು ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ  ಪಾಲ್ಗೊಂಡರು. ಗಣಕ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕರು ಆಗಿರುವ ಶ್ರೀ ಮಾಧವ.ಕೆ ಅವರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ನೈತಿಕ ಪ್ರತಿಜ್ಞಾ ವಚನ ಸ್ವೀಕರಿಸುವಂತೆ ಮಾಡಿದರು. ಇದರ ಮೂಲಕ ಎಲ್ಲರೂ ತಮ್ಮ ವೈಯುಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಪಾಲಿಸುವ ಬದ್ಧತೆಯನ್ನು ಮರುಸ್ಥಾಪಿಸಿದರು.


ಫ್ಯಾಶನ್ ಡಿಸೈನ್ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮಾರ್ಗದರ್ಶಕಿ ಆಗಿರುವ ಶ್ರೀಮತಿ ಅಶ್ವಿನಿ ಎಸ್ ಅವರು ಭಾರತದ  ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಂದ ಬಂದ ಜಾಗೃತಿ ವಾರಾಚರಣೆ ಸಂದೇಶವನ್ನು ವಾಚಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಗಳ ನೈತಿಕ ಪ್ರತಿಜ್ಞಾ ವಚನ ಸ್ವೀಕರಿಸುವಂತೆ ಮಾಡಿದರು. 

ಅವರು ಸಂಸ್ಥೆ ಸದಾ ನೈತಿಕ ಮಂಡಳಿ, ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯುತ ನಡವಳಿಕೆಯನ್ನು ಉತ್ತೇಜಿಸುವ ಬದ್ಧತೆಯುಳ್ಳ ಸಂಸ್ಥೆಯೆಂದು ತಿಳಿಸಿದರು.


ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಜಾಯಿನ್ ರವೆನೋ ಪಿಂಟೊ, ವಿದ್ಯಾರ್ಥಿ ಕಲ್ಯಾಣ ಸಮಿತಿ ಉಪಾಧ್ಯಕ್ಷೆ ಅತಿಥಿಗಳನ್ನು ಸ್ವಾಗತಿಸಿದರು.  ಕಲಾ ಸಂಘದ ಕಾರ್ಯದರ್ಶಿ ರಿತೇಶ್ ಪೂಜಾರಿ ವಂದಿಸಿದರು. ಕು. ಶಮ ಕೆ ಪ್ರಥಮ ಬಿಬಿಎ ವಿದ್ಯಾರ್ಥಿನಿ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top