25 ಶಾಲೆಗಳಲ್ಲಿ ಆಹಾರ ಉದ್ಯಾನ

Upayuktha
0


ಮಂಗಳೂರು: ಶಾಲಾ ಮಕ್ಕಳ ಪೌಷ್ಟಿಕತೆಯನ್ನು ಉತ್ತೇಜಿಸುವ ಪ್ರಯತ್ನವಾಗಿ ರಾಜ್ಯದ 25 ಶಾಲೆಗಳಲ್ಲಿ ಅರ್ಬನ್ ಫುಡ್ ಗಾರ್ಡನ್‍ಗಳನ್ನು (ಆಹಾರ ಉದ್ಯಾನ) ಸ್ಥಾಪಿಸಲು ಅಮೆಜಾನ್ ಇಂಡಿಯಾ ನಿರ್ಧರಿಸಿದೆ.


ಈ ಸಂಬಂಧ 'ಐಸಿಎಲ್‍ಇಐ ದಕ್ಷಿಣ ಏಷ್ಯಾ' ಜೊತೆ ಹೊಸ ಪಾಲುದಾರಿಕೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದಾದ್ಯಂತ 2.5 ಲಕ್ಷ ಶಾಲಾ ಮಕ್ಕಳಿಗೆ ಒದಗಿಸಲಾಗುತ್ತಿರುವ ತನ್ನ ಪೌಷ್ಟಿಕಾಂಶ ಉಪಕ್ರಮಗಳನ್ನು ವಿಸ್ತರಿಸುವುದರ ಭಾಗವಾಗಿ ಈ 'ಫುಡ್ ಗಾರ್ಡನ್'ಗಳನ್ನು ಸ್ಥಾಪಿಸಲಿದೆ ಎಂದು ಅಮೆಜಾನ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ಕಾಯಾಚರಣೆಯ ಉಪಾಧ್ಯಕ್ಷ ಅಭಿನವ್ ಸಿಂಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಈ ಪಾಲುದಾರಿಕೆ ಮೂಲಕ, ಅಮೆಜಾನ್ ತನ್ನ 'ರೈಟ್ ನೌ ಕ್ಲೈಮೇಟ್ ಫಂಡ್' ಮೂಲಕ 2028 ರ ವೇಳೆಗೆ ಬೆಂಗಳೂರು, ದೆಹಲಿ ಮತ್ತು ಕೋಲ್ಕತ್ತಾದ ಶಾಲೆಗಳಲ್ಲಿ 75 ನಗರ ಆಹಾರ ಉದ್ಯಾನಗಳನ್ನು (ಅರ್ಬನ್ ಫುಡ್ ಗಾರ್ಡನ್ಸ್) ಸ್ಥಾಪಿಸಲು ಐಸಿಎಲ್‍ಇಐ ದಕ್ಷಿಣ ಏಷ್ಯಾಕ್ಕೆ 1 ದಶಲಕ್ಷ ಡಾಲರ್ ಮೊತ್ತದ ದೇಣಿಗೆ ನೀಡಿದೆ.


ಈ ಫುಡ್ ಪಾರ್ಕ್‍ಗಳು (ಆಹಾರ ಉದ್ಯಾನ) ವಿದ್ಯಾರ್ಥಿಗಳು ಸುಸ್ಥಿರತೆಯ ಬಗ್ಗೆ ಕಲಿಯುವಾಗ ತಾಜಾ ತರಕಾರಿಗಳನ್ನು ಬೆಳೆಯುವ ಪ್ರಾಯೋಗಿಕ ಅನುಭವ  ಒದಗಿಸಲಿವೆ. ಬೆಂಗಳೂರಿನಲ್ಲಿ ಆರಂಭಿಸಿರುವ ಪ್ರಾಯೋಗಿಕ ಫುಡ್ ಉದ್ಯಾನಗಳಲ್ಲಿ ತರಕಾರಿ ಬೆಳೆಯಲು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.  ಈಗಾಗಲೇ ನಾಲ್ಕು ತಿಂಗಳುಗಳಲ್ಲಿ 10 ರಿಂದ 12 ತರಕಾರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಈ ಕಾರ್ಯಕ್ರಮವು ಹೆಚ್ಚುವರಿ 16 ಶಾಲೆಗಳಿಗೆ ವಿಸ್ತರಣೆಯಾಗಲಿದೆ ಎಂದು ಪ್ರಕಟಣೆ ವಿವರಿಸಿದೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top