ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಎಂ ಸುಬ್ರಹ್ಮಣ್ಯ ಭಟ್ ಅವರಿಗೆ ನುಡಿನಮನ

Chandrashekhara Kulamarva
0


ಕೋಟೂರು: ಇತ್ತೀಚೆಗೆ ನಿಧನರಾದ ನಿವೃತ್ತ ಅಧ್ಯಾಪಕ, ಯಕ್ಷಗಾನದ ಹಿರಿಯ ಶ್ರೇಷ್ಠ ಕಲಾವಿದರೂ ಶೈಕ್ಷಣಿಕ ಕ್ಷೇತ್ರದ ಸಕ್ರಿಯ ಕಾರ್ಯಕರ್ತರೂ ಮತ್ತು ಸಾಮಾಜಿಕ ಮುಂದಾಳುವೂ ಆಗಿದ್ದ ಪರಯಂಗೋಡು ಎಂ. ಸುಬ್ರಹ್ಮಣ್ಯ ಭಟ್ ಅವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಕಾರ್ಯಕ್ರಮವು ಭಾನುವಾರ (ಅ.26) ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಜರಗಿತು. 


ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷತೆ ವಹಿಸಿ ನುಡಿನಮನ ಮಾತುಗಳನ್ನಾಡಿದರು. ಸೀತಾರಾಮ ಬಳ್ಳುಳ್ಳಾಯ, ಮಹಾಲಿಂಗೇಶ್ವರ ಭಟ್ ಪೆರ್ನೆ, ವೆಂಕಟ ಭಟ್ ಎಡನೀರು, ಗೋವಿಂದ ಬಳ್ಳಮೂಲೆ, ಕೃಷ್ಣ ಭಟ್ ಅಡ್ಕ ನುಡಿನಮನಗಳನ್ನು ಅರ್ಪಿಸಿದರು.


ಹರಿಕೃಷ್ಣ ಪೆರಡಂಜಿ, ಹರಿಪ್ರಸಾದ್ ಕರಣಿ, ಕೃಷ್ಣಮೂರ್ತಿ. ಕೆ.ಆರ್ ಬೆಂಗಳೂರು, ಸರಸ್ವತಿ ಬಳ್ಳಮೂಲೆ, ಗಾಯತ್ರಿದೇವಿ, ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ, ಹರಿಕೃಷ್ಣ ಭಟ್. ಎಂ.ಎಸ್, ಬಾಲಕೃಷ್ಣ ಚರವು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಭಾಗವತ ದಿವಂಗತ ದಿನೇಶ ಅಮ್ಮಣ್ಣಾಯ ಅವರಿಗೂ ನುಡಿ ನಮನ ಸಲ್ಲಿಸಲಾಯಿತು.  ಮುರಳಿಕೃಷ್ಣ ಸ್ಕಂದ ಸ್ವಾಗತಿಸಿ ಡಾ. ಶಿವಕುಮಾರ್ ಅಡ್ಕ ನುಡಿನಮನ ಮಾತುಗಳನ್ನಾಡಿ ಧನ್ಯವಾದವಿತ್ತರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top