ಉಜಿರೆ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಮತ್ತು ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಂಸ್ಕೃತ ವಿಭಾಗದ ಜಂಟಿ ಸಹಯೋಗದಲ್ಲಿ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧೆ ಎಸ್.ಡಿ.ಎಂ. ಕಾಲೇಜಿನಲ್ಲಿ ಅ.25ರಂದು ನಡೆಯಿತು.
ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಭಗವದ್ಗೀತೆಯ 700 ಶ್ಲೋಕವನ್ನು ಕಂಠಪಾಠ ಮಾಡಿ ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿ ಸಮರ್ಪಿಸಿ ಅವರಿಂದ ಸುವರ್ಣ ಮಂತ್ರಾಕ್ಷತೆ ಪಡೆದ ವಿದ್ಯಾರ್ಥಿನಿ ಅದ್ವಿತೀ ರಾವ್ ದೀಪ ಪ್ರಜ್ವಲನ ನಡೆಸಿದರು.
ಎಸ್.ಡಿ.ಎಂ. ಕಾಲೇಜಿನ ಆಡಳಿತಾಂಗ ಕುಲಸಚಿವ ಹಾಗೂ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಎನ್. ಭಟ್ ಮಾತನಾಡಿ, ಪ್ರತಿನಿತ್ಯ ಭಗವದ್ಗೀತೆ ಕಂಠಪಾಠ ಮಾಡಬೇಕು. ಇದರಿಂದ ಜೀವನದಲ್ಲಿ ಸಾತ್ವಿಕ ಮನೋಭಾವ ಬೆಳೆಯುತ್ತದೆ. ಭಗವದ್ಗೀತೆ ಪಠಿಸುವುದರಿಂದ ಮಾನವನಲ್ಲಿ ಸ್ಥಿರಬುದ್ಧಿ ಮತ್ತು ದೃಢಮನಸ್ಸು ಬೆಳೆಯುತ್ತದೆ ಎಂದರು.
ಸ್ಥಳೀಯ ಎಸ್ ಡಿ ಎಂ ಶಾಲಾ ಕಾಲೇಜುಗಳ ಸಂಸ್ಕೃತ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು. ಮೂರು ಪ್ರಕಾರಗಳ (ರಸಪ್ರಶ್ನೆ, ಭಾಷಣ ಮತ್ತು ಭಗವದ್ಗೀತೆ ಕಂಠಪಾಠ) ಸ್ಪರ್ಧೆಗಳು ನಡೆದವು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ದಿವಾಕರ ಕೊಕ್ಕಡ ಮತ್ತು ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಎನ್. ಭಟ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ಫಲಿತಾಂಶ
ರಸಪ್ರಶ್ನೆ ಸ್ಪರ್ಧೆ
ಎಸ್ ಡಿ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೇತ್ರಾವತಿ ಮತ್ತು ಚಿನ್ಮಯ್ ಪ್ರಥಮ, ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ (ಸಿ ಬಿ ಎಸ್ ಸಿ) ಶಾಲೆಯ ಅನಿರುದ್ಧ ಎ. ಮತ್ತು ನಿನಾದ ಅನಂತ್ ದ್ವಿತೀಯ ಸ್ಥಾನ.
ಭಾಷಣ ಸ್ಪರ್ಧೆ
ಪ್ರಾಥಮಿಕ ವಿಭಾಗ: ಧರ್ಮಸ್ಥಳ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ಆರಾಧ್ಯ ಪಿ. ಜೋಷಿ ಪ್ರಥಮ, ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ (ಸಿ ಬಿ ಎಸ್ ಸಿ) ಶಾಲೆಯ ಗಾನಪ್ರಿಯ ದ್ವಿತೀಯ.
ಪ್ರೌಢಶಾಲಾ ವಿಭಾಗ: ಧರ್ಮಸ್ಥಳ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಿ ಭಟ್ ಪ್ರಥಮ, ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ (ಸಿ ಬಿ ಎಸ್ ಸಿ) ಶಾಲೆಯ ಸಿದ್ಧಾಂತ ಸಪ್ರೇ ದ್ವಿತೀಯ.
ಪದವಿಪೂರ್ವ ವಿಭಾಗ: ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಹಂಸಿನಿ ಭಿಡೆ ಪ್ರಥಮ, ನಿಜ ಕುಲಾಲ್ ದ್ವಿತೀಯ.
ಭಗವದ್ಗೀತೆ ಕಂಠಪಾಠ ಸ್ಪರ್ಧೆ
ಪ್ರಾಥಮಿಕ ವಿಭಾಗ: ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಅದ್ವಿತೀ ರಾವ್ ಪ್ರಥಮ, ಬಂಡಿಹೊಳೆ ಸರಕಾರಿ ಶಾಲೆಯ ಪ್ರಣತಿ ತುಳುಪುಳೆ ದ್ವಿತೀಯ.
ಪ್ರೌಢಶಾಲಾ ವಿಭಾಗ: ಧರ್ಮಸ್ಥಳದ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯ ತ್ರಿವೇಣಿ ಪ್ರಥಮ, ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ (ಸಿ ಬಿ ಎಸ್ ಸಿ) ಶಾಲೆಯ ಸಾನ್ವಿ ದ್ವಿತೀಯ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


