ಸಂಶೋಧನಾ ಪ್ರಬಂಧ ಪ್ರಕಟಣೆ - ಕಾರ್ಯಾಗಾರ

Chandrashekhara Kulamarva
0



ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇದರ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಮತ್ತು ಐಕ್ಯುಎಸಿ ವಿಭಾಗದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 'ಸಂಶೋಧನಾ ಪ್ರಬಂಧ ಪ್ರಕಟಣೆ' ವಿಷಯದ ಕುರಿತಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

 

ಸಂಪನ್ಮೂಲ ವ್ಯಕ್ತಿಯಾದ ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ, ಡಾ. ಉಷಾ ರವರು ಸಂಶೋಧನಾ ಪ್ರಬಂಧ ರಚನೆಯ ವಿವಿಧ ಆಯಾಮಗಳ ಕುರಿತಾಗಿ ಚರ್ಚಿಸಿ, ಪ್ರಕಟಣೆಯ ಅವಕಾಶಗಳ ಕುರಿತು ವಿವರವಾಗಿ ತಿಳಿಸಿದರು. 


ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ ಗಾಂವ್ಕರ್ ರವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ಐಕ್ಯುಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿಭಾಗದ ಮುಖ್ಯಸ್ಥರಾದ ಬಿಂದು, ಎಂ.ಕಾಂ ಸಂಯೋಜಕ ಡಾ. ದತ್ತ ಕುಮಾರ್, ಸಹ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ, ಉಮೇಶ್ ಪೈ ಮತ್ತು ವಿಭಾಗದ ವತಿಯಿಂದ ಮರ್ವಿನ್ ಡಿಸೋಜಾ, ಸೋನಿಯಾ ನೊರೊನ್ಹಾ ಮತ್ತು ಸ್ಮಿತಾ ರವರು ಉಪಸ್ಥಿತರಿದ್ದರು. 


ಕಾರ್ಯಕ್ರಮದ ಅತಿಥಿಗಳಿಗೆ ನಿಕಿತಾ ಸ್ವಾಗತಿಸಿದರೆ, ಅಕ್ಷಿತಾ ರವರು ಪರಿಚಯಿಸಿದರು, ಅಬ್ದುಲ್ ವಂದಿಸಿದರು ಮತ್ತು ಸುದೇಶ್ ನಿರೂಪಿಸಿದರು.



Post a Comment

0 Comments
Post a Comment (0)
To Top