ಮಂಗಳೂರು: "ಸಮಾಜ ಸಮರ್ಪಿತ ಬದುಕನ್ನು ಸಾಧಿಸಿದ ಡಾ.ಎ.ಆರ್. ನಾಸಿರ್ ರ ಅಕಾಲಿಕ ನಿಧನದಿಂದ ನವಭಾರತ ಶಿಕ್ಷಣ ಸಂಸ್ಥೆಗಳಿಗೆ ತುಂಬಲಾರದ ನಷ್ಟ. ಬಡ ಕುಟುಂಬಗಳಿಗೆ ಮಿಡಿಯುವ ಹೃದಯವಂತಿಕೆ ಅವರದ್ದಾಗಿತ್ತು. ತಮ್ಮ ತಂದೆ ಹಾಗೂ ನವಭಾರತ ರಾತ್ರಿ ಪ್ರೌಢಶಾಲೆಯ ಸಂಸ್ಥಾಪಕ ದಿ. ಹಾಜಿ ಖಾಲಿದ್ ಮಹಮ್ಮದರ ಹೆಸರನ್ನು ಸ್ಥಾಯಿಯಾಗಿಸುವಲ್ಲಿ ಶಾಲೆಗಾಗಿ ತಮ್ಮ ಯೋಗದಾನ ಮಾಡಿದ್ದಾರೆ. ಹೊರದೇಶದಲ್ಲಿದ್ದರೂ ತನ್ನ ಶಾಲೆ ಎಂಬಂತೆ ತಿಳಿಯುತ್ತಾ ಸೊಸೈಟಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಬೆಂಬಲ ನೀಡುತ್ತಿದ್ದರು. ಇಂತಹಾ ಚೇತನಕ್ಕೆ ಚಿರಶಾಂತಿ ದೊರಕಲಿ" ಎಂದು ನವಭಾರತ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಪಿ.ವಾಮನ್ ಶೆಣೈ ಡಾ. ನಾಸಿರ್ ರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ನವಭಾರತ ರಾತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವರ್ಕಾಡಿ ರವಿ ಅಲೆವೂರಾಯ ಡಾ. ನಾಸಿರ್ ರ ಬಗ್ಗೆ ನುಡಿನಮನ ಸಲ್ಲಿಸಿದರು. ಬಳಿಕ ಮೌನ ಪ್ರಾರ್ಥನೆ ನಡೆಸಲಾಯಿತು.
ನವಭಾರತ ಎಜ್ಯುಕೇಶನ್ ಸೊಸೈಟಿಯ ಡಾ.ಸತೀಶ್ ರಾವ್, ಬಸವರಾಜ್, ಆನಂದ ಸುವರ್ಣ, ಜಯಂತಿ ರಾಮಚಂದ್ರ, ಸತೀಶ್ ಜೋಗಿ, ಬಿ.ದಿನೇಶ್ ಕುಮಾರ್, ಬಾಲಕೃಷ್ಣ ನುಡಿನಮನದಲ್ಲಿ ಪಾಲ್ಗೊಂಡರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


