ಜೀವನದಲ್ಲಿ ಏನೇ ಕಷ್ಟ ಸುಖಗಳು ಬಂದರೂ ನಮ್ಮ ಸಂಬಂಧಿಕರು ನಮ್ಮೊಂದಿಗೆ ಇರುತ್ತಾರೆ. ಜೀವನದಲ್ಲಿ ಸಂಬಂಧಿಕರು ಮೊದಲ ಆಸರೆಯಾಗಿರುತ್ತಾರೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುತ್ತಾರೆ ನಮ್ಮ ಹಿರಿಯರು. ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೂಡು ಕೊಳ್ಳುವಿಕೆ ಮತ್ತು ಬಾಂಧವ್ಯ ಒಂದೂ ರೀತಿಯ ಸಂತೋಷ.
"ಸಂಬಂಧಿಕರು " ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ. ತನ್ನ ಒಡಹುಟ್ಟಿದವರು ಸಹಾಯವನ್ನು ಕೇಳದೆ ಇದ್ದರೂ ಸಹಾಯ ಮಾಡುವೂದುಂಟು...
ಆದರೆ ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆ ಇಲ್ಲ...ಸಂಬಂಧಗಳಲ್ಲಿ ಶ್ರೀಮಂತ –ಬಡವ ಎಂಬ ಇಬ್ಬರು ಶತ್ರುಗಳು ಬಂದಿದ್ದಾರೆ...ತಕ್ಕಮಟ್ಟಿನ ಶ್ರೀಮಂತ ಸಹಾಯ ಕೇಳಿದರೆ ಹಿಂದು –ಮುಂದು ನೋಡದೆ ಸಹಾಯ ಮಾಡುವೂದುಂಟು. ಆದರೆ ಬಡವ ಸಹಾಯ ಕೇಳಿದರೆ ತನ್ನ ಬಳಿ ಹಣವಿಲ್ಲ ಅಥವಾ ಇನ್ನೇನಾದರೂ ಸುಳ್ಳು ಹೇಳುತ್ತಾರೆ. ಆದರೆ ಒಂದಂತೂ ಸತ್ಯ. ಸಂಬಂಧಿಕರು ಆಸ್ತಿ ಇರುವ ತನಕ! ಆಸ್ತಿ ಹೆಚ್ಚು ಇರುವವರಿಗೆ ಸಂಬಂಧಿಕರು ಸಹಾಯಕರು ಹೆಚ್ಚು ಹೆಚ್ಚು! ಏ ......ಮಾನವ! ನೀನು ಎಂದಿಗೂ ಸಂಬಂಧಿಕರ ಮುಂದೆ ಯಾವತ್ತೂ ಕೈ ಚಾಚಬೇಡಿ. ಏಕೆಂದರೆ, ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆ ಇಲ್ಲ.
ಸಂಬಂಧಗಳು ನಮ್ಮದಾದರೂ ಸಂಬಂಧಿಕರು ನಮ್ಮವರಲ್ಲ. ಬಹಳಷ್ಟು ಬಾರಿ ಸಂಬಂಧಿಕರು, ಆತ್ಮೀಯರು ನಿಮ್ಮ ಕಷ್ಟಕ್ಕೆ ಸ್ಪಂದಿಸದೇ ಹೋದಾಗ, ದೇವರು ನಿಮ್ಮನ್ನು ಕಾಯುತ್ತಾರೆ. ಇಲ್ಲವೇ ನಿಮ್ಮ ಒಳ್ಳೆತನ ನಿಮ್ಮನ್ನು ಕಾಯುವುದು.
- ಸಂಜನಾ ವಾಲ್ತಾಜೆ
ದ್ವಿತೀಯ ಎಂಸಿಜೆ, ಎಸ್‌ಡಿಎಂ ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


.jpg)
