ಅಯೋಧ್ಯೆಯಲ್ಲಿ ಶ್ರೀಪುರಂದರದಾಸರ ಪ್ರತಿಮೆ ಅನಾವರಣ

Chandrashekhara Kulamarva
0


ಅಯೋಧ್ಯೆ: ಅಯೋಧ್ಯೆಯ ತೀಡಿ ಬಜಾರ್ ಛೇದಕದಲ್ಲಿರುವ ಪ್ರಾಚೀನ ಬೃಹಸ್ಪತಿ ಕುಂಡವನ್ನು ರಾಜ್ಯ ಸರ್ಕಾರ ನವೀಕರಿಸಿದೆ. ಈ ಕುಂಡದಲ್ಲಿ ಮೂವರು ಶ್ರೇಷ್ಠ ದಕ್ಷಿಣ ಭಾರತದ ಸಂಗೀತಗಾರರಾದ ತ್ಯಾಗರಾಜ ಸ್ವಾಮಿಗಳು, ಪುರಂದರ ದಾಸ ಮತ್ತು ಅರುಣಾಚಲ ಕವಿ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಈ ಪ್ರತಿಮೆಗಳನ್ನು ಇಂದು ಬುಧವಾರ ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನಾವರಣಗೊಳಿಸಿದರು.‌ ರಾಮ ಮಂದಿರ ಸಂಕೀರ್ಣದೊಳಗೆ ಕರ್ನಾಟಕದ ಕಲಾವಿದರಿಂದ ಕಲಾ ಪ್ರದರ್ಶನವೂ ನೆರವೇರಿತು.


ಅಯೋಧ್ಯೆಯ ಮಹಾನಗರಪಾಲಿಕೆ ಹಾಗೂ ಉ.ಪ್ರ ರಾಜ್ಯ ಪ್ರವಾಸೋದ್ಯಮ‌ ಇಲಾಖೆಗಳು ಈ ನಿರ್ಮಾಣವನ್ನು ಮಾಡಿವೆ.


ಹುಟ್ಟೂರು ಕರ್ನಾಟಕದಲ್ಲಿ ಏಕಿಲ್ಲ...?

ಕರ್ನಾಟಕದಲ್ಲಿ ದಾಸ ಶ್ರೇಷ್ಠ ಪುರಂದರದಾಸರ ಪ್ರತಿಮೆ ಇಲ್ಲ. ಆಗ್ರಹಿಸಿದರೂ ಯಾರಿಂದಲೂ ಸ್ಪಂದನೆ ಇಲ್ಲ, ಯಾಕಂದ್ರೆ ಜಾತಿ ಬಲ‌ ಇಲ್ಲ. ಕರ್ನಾಟಕದ ಈಗಿನ ಕಾಂಗ್ರೆಸ್ ಸರಕಾರಕ್ಕಂತೂ ಹಿಂದುತ್ವ, ಹಿಂದು ಸಂತ ಶ್ರೇಷ್ಠರು, ಕನ್ನಡ ವಾಗ್ಗೇಯಕಾರರು- ಇವರೆಲ್ಲರ ಬಗ್ಗೆ ಪರಮ ನಿರ್ಲಕ್ಷ್ಯ.


-ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top