ಕ್ಯೂಪಿಎಲ್ ಸೀಸನ್-2 ಚಾಲನೆಗೆ ವೇದಿಕೆ ಸಜ್ಜು

Chandrashekhara Kulamarva
0


ಮಂಗಳೂರು: ಬಹು ನಿರೀಕ್ಷಿತ ಕ್ರೀಡೆ ಮತ್ತು ಮನರಂಜನೆಯ ಮಹೋತ್ಸವ ಕೆಎನ್‍ಎಸ್ ಕ್ವೀನ್ಸ್ ಪ್ರೀಮಿಯರ್ ಲೀಗ್ (ಕ್ಯೂಪಿಎಲ್) ಸೀಸನ್ 2 ಆರಂಭಕ್ಕೆ ವೇದಿಕೆ ಸಜ್ಜಾಗಿದೆ.


ನವೆಂಬರ್ 11ರಿಂದ 15ರವರೆಗೆ ಬೆಂಗಳೂರಿನ ಕೊರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯ ಪಂದ್ಯಗಳು ನಡೆಯಲಿದ್ದು, ವಿಶೇಷ ಪೂರ್ವ ಕಾರ್ಯಕ್ರಮವನ್ನು ನವೆಂಬರ್ 10ರಂದು ಮಾರತ್‍ಹಳ್ಳಿಯ ಇ-ಝೋನ್‍ನಲ್ಲಿ ಆಯೋಜಿಸಲಾಗಿದೆ.


ಈ ಬಾರಿ ಕ್ಯೂಪಿಎಲ್ ನಲ್ಲಿ 12 ವಿಭಿನ್ನ ಕ್ರೀಡೆಗಳು ನಡೆಯಲಿವೆ. ಜೊತೆಗೆ ಈ ಸೀಸನ್‍ನಲ್ಲಿ ಫ್ರೀಸ್ಟೈಲ್ ಡ್ಯಾನ್ಸ್ ಮತ್ತು ಫ್ಯಾಷನ್ ಸ್ಪರ್ಧೆಗಳು ಸಹ ಆಯೋಜಿಸಲಾಗಿದೆ. ಸಿನಿಮಾ, ಟೆಲಿವಿಷನ್, ಮಾಧ್ಯಮ, ಮಾಡೆಲಿಂಗ್ ಹಾಗೂ ಇನ್‍ಫ್ಲುವೆನ್ಸರ್ ಜಗತ್ತಿನ ಪ್ರಮುಖ ಮಹಿಳಾ ಸೆಲೆಬ್ರಿಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರು ಕ್ವೀನ್ಸ್‍ನ ಸ್ಟಾರ್ ಕ್ಯಾಪ್ಟನ್ ಪಾರ್ವತಿ ನಾಯರ್, ಉಪನಾಯಕಿ ಅರೋಚಿತಾ ಗೌಡ, ವಿಜಯಶ್ರೀ ಕಲ್ಬುರ್ಗಿ, ನಿತ್ಯಶ್ರೀ ಪ್ರಮುಖ ಆಕರ್ಷಣೆಯಾಗಿರುತ್ತಾರೆ.


ಸೀಸನ್ 2 ರ ಪ್ರಚಾರ ರಾಯಭಾರಿಯಾಗಿ ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಈ ಸೀಸನ್‍ನ್ನು ಅಕ್ಟೋಬರ್ 25ರಂದು ನಡೆದ ಪ್ಲೇಯರ್ ಆಕ್ಷನ್ ಮೂಲಕ ಅಧಿಕೃತವಾಗಿ ಆರಂಭಿಸಲಾಯಿತು. ಆ ಸಂದರ್ಭದಲ್ಲಿ 10 ಫ್ರಾಂಚೈಸ್ ತಂಡಗಳ ಮಾಲೀಕರು ಮತ್ತು ಟೈಟಲ್ ಸ್ಪಾನ್ಸರ್ ಕೆಎನ್‍ಎಸ್ ಇನ್ಫ್ರಾ ವ್ಯವಸ್ಥಾಪಕ ನಿರ್ದೇಶಕ, ಕೆ.ಎನ್. ಸುರೇಂದ್ರ ಅವರು ಉಪಸ್ಥಿತರಿದ್ದರು. ಶಾನ್ವಿ ಶ್ರೀವಾಸ್ತವ, ಆಶಾ ಭಟ್, ಧನ್ಯ ರಾಮಕುಮಾರ್, ನಿಧಿ ಸುಬ್ಬಯ್ಯ, ರಚನಾ ಇಂಡರ್, ನೇಹಾ ಸಕ್ಸೇನಾ, ಭಾವನಾ ರಾವ್, ರಾಧಿಕಾ ನಾರಾಯಣ್, ಪಾರ್ವತಿ ನಾಯರ್ ಮತ್ತು ಸಪ್ತಮಿ ಗೌಡ ಅವರು ತಮ್ಮ ತಮ್ಮ ತಂಡಗಳ ಕ್ಯಾಪ್ಟನ್‍ಗಳಾಗಿ ಭಾಗವಹಿಸಿದ್ದಾರೆ. ಒಟ್ಟಾರೆ 150ಕ್ಕೂ ಹೆಚ್ಚು ಮಹಿಳಾ ಕಲಾವಿದರು ಮತ್ತು ಟೆಲಿವಿಷನ್ ಸ್ಟಾರ್‍ಗಳು ಈ ಸೀಸನ್‍ನಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಕಟಣೆ ಹೇಳಿದೆ.


ಈ ಕಾರ್ಯಕ್ರಮಕ್ಕೆ ಕರ್ನಾಟಕ ಓಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಮತ್ತು ಭಾರತದ ಖ್ಯಾತ ಅಥ್ಲೀಟ್ ಪದ್ಮಶ್ರೀ ಅಂಜು ಬಾಬಿ ಜಾರ್ಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕ್ಯೂಪಿಎಲ್ ಸೀಸನ್ 2 ಕ್ರೀಡಾ ಮನೋಭಾವ, ಮಹಿಳಾ ಶಕ್ತಿ, ಫ್ಯಾಷನ್, ಡ್ಯಾನ್ಸ್ ಸ್ಪರ್ಧೆಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಸಂಯೋಜನೆಯಾದ ಸ್ಫೂರ್ತಿದಾಯಕ ಕಾರ್ಯಕ್ರಮವಾಗಿದ್ದು- ಮಹಿಳೆಯರು ತಮ್ಮ ಶಕ್ತಿ, ಪ್ರತಿಭೆ ಮತ್ತು ತಂಡ ಕಾರ್ಯದ ಸಾಮಥ್ರ್ಯವನ್ನು ಮರುನಿರ್ಮಿಸುತ್ತಿರುವ ವೇದಿಕೆಯಾಗಲಿದೆ ಎಂದು ಪ್ರಕಟಣೆ ಹೇಳಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top