ಲಘು ಹಾಸ್ಯ: 'ಪಬ್ಲಿಕ್' ಪರೀಕ್ಷೆಯ ಒಂದು ಮಾದರಿ ಪ್ರಶ್ನೆ ಪತ್ರಿಕೆ!

Upayuktha
0

ಪರೀಕ್ಷಾ ಅವಧಿ: ಎರಡು ಬ್ಯಾಚ್‌ಗಳಿಗೆ ತಲಾ ಎರಡುವರೆ ಗಂಟೆಗಳು!






ಸೂಚನೆ: ಇದು ಪಬ್ಲಿಕ್ ಪರೀಕ್ಷೆ ಆಗಿರುವುದರಿಂದ, ಉತ್ತರ ಬರೆಯುವಾಗ ಅಸಂವಿಧಾನಿಕ, ಡಬಲ್ ಮೀನಿಂಗ್ ಮತ್ತು ಅಶ್ಲೀಲ ಪದಗಳನ್ನು ಬಳಸುವ ಸಂದರ್ಭ ಇದ್ದರೆ, ಪದಗಳನ್ನು ಪೂರ್ತಿ ಬಳಸದೆ ***** ಚಿಹ್ನೆ ಬಳಸಿ, ಶಬ್ದದ ಮೊದಲ ಅಥವಾ ಕೊನೆಯ ಅಕ್ಷರ ಮಾತ್ರ ಬಳಸುವುದು. ಉದಾಹರಣೆಗೆ: 'ಉದಾಹರಣೆ' ಶಬ್ದ ಡಬಲ್ ಮೀನಿಂಗ್ ಶಬ್ದ ಅನಿಸುವಂತಿದ್ದರೆ ****ಣೆ ಎಂದು ಬಳಸುವುದು.


****


ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ಬರೆಯಿರಿ: (100 ಅಂಕಗಳು)


1) ರಾಜಕೀಯ ಪ್ರವೇಶಿಸಿದ 15 ಪ್ರಾಣಿಗಳನ್ನು ಸಾಮಾನ್ಯ ಗುಣ ಶಬ್ದದೊಂದಿಗೆ ಹೆಸರಿಸಿ.


2) ರಾಜಕೀಯದ ಯಾವುದಾದರು ಐದು ಪ್ರಾಣಿಗಳ ಜಾತಿ, ಉಪಜಾತಿ, ಅವುಗಳ ಕಾರ್ಯವೈಖರಿ ಮತ್ತು ಅವುಗಳಿಂದ ಮನುಷ್ಯರಿಗೆ ಆಗುವ ಪ್ರಯೋಜನಗಳು ಇದ್ದರೆ, ಸಂಕ್ಷಿಪ್ತವಾಗಿ ವಿವರಿಸಿ.


3) ಡಿವಿಜಿಯವರು ರಚಿಸಿದ ಈ ಕಗ್ಗ ಪದ್ಯಕ್ಕೆ ಸಂದರ್ಭ ಸಹಿತ ಎರಡು ಪುಟಗಳಿಗೆ ಮೀರದಂತೆ ವಿವರಿಸಿ 


*ಕನಲ್ದ ಹುಲಿ ಕೆರಳ್ದ ಹರಿ ಮುಳ್ ‍ಕರಡಿ ಛಲನಾಗ| ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ|

ಸೆಣಸುಮುಸುಡಿಯ ಘೋರ ದುಷ್ಟಚೇಷ್ಟೆಗಳೆಲ್ಲವಣಗಿಹುವು ನರಮನದಿ-ಮಂಕುತಿಮ್ಮ


(ತೇರ್ಗಡೆಗೆ ಕನಿಷ್ಟ ಅಂಕಗಳು ಕೇವಲ 30 !!) 


******


ಮಾದರಿ ಉತ್ತರ ಪತ್ರಿಕೆ


1) ರಾಜಕೀಯ ಪ್ರವೇಶಿಸಿದ 15 ಪ್ರಾಣಿಗಳನ್ನು ಸಾಮಾನ್ಯ ಗುಣ ಶಬ್ದದೊಂದಿಗೆ ಹೆಸರಿಸಿ.



ಉತ್ತರ:


1) ಕರಡಿ (ಕತ್ತಲಲ್ಲಿ ಕಾಣಿಸದ)


2) ಟಗರು (ಗುಟುರುವ)


3) ಹುಲಿ (ಅರಚುವ)


4) ಮುಳ್ಳು ಹಂದಿ (ತೀಕ್ಷ್ಣವಾಗಿ ಚುಚ್ಚುವ)


5) ಹೆಗ್ಗಣ (ಭೂಗತ ಬಿಲದ)


6) ಬೀದಿ ನಾಯಿ/ಸೀಳ್ನಾಯಿ (ಬಾಡೂಟ ತಿನ್ನುವ)


7) ಎತ್ತುಗಳು (ಜೋಡೆತ್ತು)


8) ನರಿ (ಗುಳ್ಳೆ ಇರುವ)


9) ಕಪಿ (ಅಣಕಿಸುವ)


10) ಕತ್ತೆ (ಒದೆಯುವ)


11) ಎಮ್ಮೆ (ಕೆಸರಲ್ಲಿ ಬಿದ್ದೆದ್ದ)


12) ಕುದುರೆ (ವ್ಯಾಪಾರಕ್ಕಿರುವ)


13) ಕಾಳಿಂಗ ಸರ್ಪ (ಬುಸುಗುಟ್ಟುವ)


14) ಕಳ್ಳ ಬೆಕ್ಕು (ಕದ್ದು ಹಾಲು ಕುಡಿಯುವ)


15) ತೋಳ (ಮೋಸಗಾರ)



*****


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top