ಜೆಕೆ ಟೈರ್‌ ಬೆಂಬಲದೊಂದಿಗೆ ಡ್ರಿಫ್ಟಿಂಗ್ನಲ್ಲಿ ಗಿನ್ನಿಸ್ ದಾಖಲೆ ಬರೆದ ಸನಂ ಸೇಖೋನ್

Upayuktha
0


ಬೆಂಗಳೂರು, ಅ. 8: ಸನಂ ಸೇಖೋನ್ 2025ರ ಜುಲೈ 31ರಂದು ಲಡಾಖ್‌ನ ಉಮ್ಲಿಂಗ್ ಲಾ ಪಾಸ್‌ನಲ್ಲಿ 5,798 ಮೀಟರ್ (19,023 ಅಡಿ) ಎತ್ತರದಲ್ಲಿ ಕಾರು ಚಾಲನೆಯ ಅತ್ಯುನ್ನತ ಎತ್ತರದ ಡ್ರಿಫ್ಟ್ ನಡೆಸಿ ಹೊಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿ ಮೋಟಾರ್ ಸ್ಪೋರ್ಟ್ಸ್ ಇತಿಹಾಸದಲ್ಲೇ ಮಹತ್ತರ ಸಾಧನೆ ಮಾಡಿದ್ದಾರೆ.


ಭಾರತದ ‘ಡ್ರಿಫ್ಟ್ ಕಿಂಗ್’ ಎಂದು ಖ್ಯಾತಿ ಪಡೆದಿರುವ ಸನಂ ಸೇಖೋನ್, ತನ್ನ ಧೈರ್ಯ ಮತ್ತು ಸಾಮರ್ಥ್ಯದಿಂದ ಭಾರತೀಯ ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೆಸರು ಮಾಡಿದ್ದಾರೆ.


2023ರಲ್ಲಿ ನಡೆದ ಪ್ರಥಮ ಜೆಕೆ ಟೈರ್ ಡ್ರಿಫ್ಟ್ ಚಾಲೆಂಜ್‌ನ ವಿಜೇತರಾದ ಸನಂ ಮಾತನಾಡಿ 'ಈ ದಾಖಲೆ ಮಾಡಿದ್ದಕ್ಕೆ ನಾನು ತುಂಬಾ ಸಂತೋಷವಾಗಿದ್ದೇನೆ ಹಾಗು ನನ್ನ ತಂಡವಿಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ನಾವು ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧರಾಗಿದ್ದರೂ, ಆಮ್ಲಜನಕದ ಮಟ್ಟ ಮತ್ತು ಎತ್ತರವು ನಮಗೆ ದೊಡ್ಡ ಸವಾಲಾಗಿತ್ತು. ಅಲ್ಲಿ ಸುತ್ತಾಡಿ ಎಲ್ಲಾ ಕೆಲಸಗಳನ್ನು ನಿರ್ವಹಿಸುವುದೇ ಕಷ್ಟವಾಗಿತ್ತು. 20–21 ಸದಸ್ಯರ ತಂಡ, ಥೈಲ್ಯಾಂಡಿನಿಂದ ಬಂದ ಟ್ಯೂನರ್ ಮತ್ತು ನಿರಂತರ ಇಂಧನ ಸರಬರಾಜು ಇವೆಲ್ಲವನ್ನೂ ಸಮನ್ವಯಗೊಳಿಸುವುದೇ ಒಂದು ಸವಾಲಾಗಿತ್ತು. ಡ್ರಿಫ್ಟಿಂಗ್‌ನಲ್ಲಿ ಟೈರ್‌ಗಳೇ ಎಲ್ಲ, ಶಕ್ತಿಶಾಲಿ ಎಂಜಿನ್ ಹಾಗೂ ಪರಿಪೂರ್ಣ ಸೆಟಪ್ ಇದ್ದರು ಕೂಡ ರಸ್ತೆಯನ್ನು ಮುಟ್ಟುವದು ಟೈರ್‌ಗಳೇ ಎಂದರು.


ಜೆಕೆ ಟೈರ್‌ನ ಲೆವಿಟಾಸ್ ಎಕ್ಸ್‌ಟ್ರೀಮ್‌ನಲ್ಲಿ ಈ ದಾಖಲೆ ಸಾಧ್ಯವಾಯಿತು, ಇದು ಪ್ರೀಮಿಯಂ ಲೆವಿಟಾಸ್ ಶ್ರೇಣಿಯ ಭಾಗವಾಗಿದ್ದು, ಇದು ಕಂಪನಿಯ ಕಾರ್ಯಕ್ಷಮತೆ ಮತ್ತು ನಾವೀನ್ಯತೆಗೆ ಭವಿಷ್ಯದ ಬದ್ಧತೆಯನ್ನು ಪ್ರತಿನಿಧಿಸುತ್ತದೆ.


ಈ ಬಗ್ಗೆ ಮಾತನಾಡಿದ 'ಜೆಕೆ ಟೈರ್ & ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ, “ಈ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಭಾರತೀಯ ಮೋಟಾರ್‌ ಸ್ಪೋರ್ಟ್ಸ್‌ಗಾಗಿ ಹೆಮ್ಮೆಯ ಕ್ಷಣವಾಗಿದ್ದು, ಜೆಕೆ ಟೈರ್‌ನ ಆವಿಷ್ಕಾರಾತ್ಮಕ ಮನೋಭಾವದ ಪ್ರತೀಕವಾಗಿದೆ. ಸನಂ ಸೇಖೋನ್ ಅವರಂತಹ ಅದ್ಭುತ ಚಾಲಕರನ್ನು ಬೆಂಬಲಿಸುವ ಮೂಲಕ ಮತ್ತು ನಮ್ಮ ತಂತ್ರಜ್ಞಾನವನ್ನು ಪರೀಕ್ಷಿಸುವ ಮೂಲಕ ಭಾರತೀಯ ಪ್ರತಿಭೆ ಮತ್ತು ಎಂಜಿನಿಯರಿಂಗ್ ಜಾಗತಿಕ ವೇದಿಕೆಯಲ್ಲಿ ಎತ್ತರದಿಂದ ನಿಲ್ಲಬಹುದು ಎಂಬುದನ್ನು ನಾವು ತೋರಿಸಿದ್ದೇವೆ ಎಂದರು.

 

ಈ ಮೈಲಿಗಲ್ಲು ಸಾಧನೆಯು ಮೋಟಾರ್‌ ಸ್ಪೋರ್ಟ್ ನಾವೀನ್ಯತೆಯಲ್ಲಿ ಜೆಕೆ ಟೈರ್‌ನ ಸ್ಥಾನವನ್ನು ಭದ್ರಪಡಿಸುವುದರ ಜೊತೆಗೆ ಜಾಗತಿಕವಾಗಿ ಭಾರತೀಯ ಚಾಲಕರ ಹೆಚ್ಚುತ್ತಿರುವ ನಿಲುವನ್ನು ಪ್ರದರ್ಶಿಸುತ್ತದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top