90 ವರ್ಷದ ತಾತನಿಗೆ ಹೊಸ ಜೀವ- ರೋಬೋಟಿಕ್ ಶಸ್ತ್ರಚಿಕಿತ್ಸೆ ತಂದ ಹೊಸ ಆಶಾಕಿರಣ

Upayuktha
0

 



ಬೆಂಗಳೂರು, ವೈಟ್‌ ಫೀಲ್ಡ್‌: ಮಾನವೀಯತೆ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದ ಸಹಾಯದಿಂದ  90 ವರ್ಷದ ವೃದ್ದನಿಗೆ ಮರು ಜೀವ ನೀಡಲಾಯಿತು. ವೃದ್ದನಿಗೆ ಜೀವಕ್ಕೆ ಅಪಾಯ ಉಂಟುಮಾಡುತ್ತಿದ್ದ ಗಂಭೀರ ಪಿತ್ತಕೋಶದ ಸೋಂಕನ್ನು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಸಹಾಯದಿಂದ, ಶಸ್ತ್ರಚಿಕಿತ್ಸೆ ನಡೆಸಿ ಸಂಪೂರ್ಣವಾಗಿ ಗುಣಮುಖ ಮಾಡಲಾಯಿತು. 


ಕಳೆದ ಒಂದು ತಿಂಗಳಿನಿಂದ ಹೊಟ್ಟೆನೋವು ಮತ್ತು ವಾಂತಿಯ ತೊಂದರೆಗಳಿಂದ ಬಳಲುತ್ತಿದ್ದ ವೃದ್ಧರನ್ನು ವೈಟ್‌ ಫೀಲ್ದ್‌ ನಲ್ಲಿರುವ ಮೆಡಿಕವರ್‌  ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.  ಎಲ್ಲಾ ರೀತಿಯ ತಪಾಸಣೆಗಳನ್ನು ಮಾಡಿದ ಬಳಿಕ  ವೃದ್ದನಿಗೆ  ಕಿಡ್ನಿ ಸ್ಟೋನ್‌ ನಿಂದಾಗಿ ಪಿತ್ತಕೋಶದ ರಂಧ್ರ  ಮತ್ತು ಗ್ಯಾಂಗ್ರೀನ್ ಸೋಂಕು ಕಂಡುಬಂದಿತ್ತು. ತಕ್ಷಣ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಾಗುವ ಪರಿಸ್ಥಿತಿ ಇತ್ತು.


ಅಲ್ಲದೇ ವೃದ್ದನೂ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದು ಮಾತ್ರವಲ್ಲದೇ ವಯಸ್ಸಿನ ಆಧಾರದಲ್ಲಿ ಶಸ್ತ್ರಚಿಕಿತ್ಸೆ ಅಪಾಯಕರವಾಗಿದ್ದರೂ, ಕನ್ಸಲ್ಟೆಂಟ್ ರೋಬೋಟಿಕ್ ಮತ್ತು ಜನರಲ್ ಸರ್ಜನ್ ಡಾ. ಜಾವೇದ್ ಹುಸೇನ್ ಅವರ ನೇತೃತ್ವದಲ್ಲಿ ವೈದ್ಯಕೀಯ ತಂಡವು ಡಾ ವಿನ್ಸಿ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಬಳಸಿ ಶಸ್ತ್ರಚಿಕಿತ್ಸೆ ನಡೆಸಿದರು.


“90 ವರ್ಷದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯ. ಆದರೆ ರೋಬೋಟಿಕ್ ತಂತ್ರಜ್ಞಾನವು ನಮಗೆ ನಿಖರತೆ ಮತ್ತು ಸುರಕ್ಷತೆ ನೀಡಿತು” ಎಂದು ಡಾ. ಜಾವೇದ್ ಹುಸೇನ್ ಹೇಳಿದರು. 


ಈ ಘಟನೆ ಕೇವಲ ವೈದ್ಯಕೀಯ ಸಾಧನೆಯಲ್ಲ-  ವಯಸ್ಸು ಅಡೆತಡೆ ಆಗದಂತೆ ಆಧುನಿಕ ರೋಬೋಟಿಕ್ ತಂತ್ರಜ್ಞಾನವು ಜೀವ ಉಳಿಸುವಲ್ಲಿ ಮಾಡಬಹುದಾದ ಅದ್ಭುತದ ಸಾಕ್ಷ್ಯವಾಗಿದೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top