ದೇಶ ಕಟ್ಟುವ ವಿಶ್ವದ ಅತಿ ದೊಡ್ಡ ರಾಜಕೀಯೇತರ ಸಂಘಟನೆ
ಬೆಂಗಳೂರು: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವಾತಂತ್ರ್ಯದ ಮೊದಲು ಭಾರತವನ್ನು ಏಕೀಕರಿಸಿ, ರಾಷ್ಟ್ರೀಯ ಚಿಂತನೆ ಮತ್ತು ಸಂಸ್ಕೃತಿಯ ಪ್ರಗತಿಯಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದು ಶತಮಾನೋತ್ಸವದ ಗರಿಮೆಯನ್ನು ಮುಟ್ಟಿದೆ.
ಭ್ರಾತೃತ್ವವೇ ಮಂತ್ರವಾಗಿ, ಪ್ರಸಿದ್ಧಿಗಲ್ಲ, ಸೇವೆಗೆ ಬದ್ಧವಾಗಿದೆ, ಕಸರತ್ತು- ಶಿಸ್ತು ದಿನನಿತ್ಯ ಇಲ್ಲಿದೆ. ಮೌಲ್ಯಗಳ ಬೃಹತ್ ಖಜಾನೆಯಾಗಿದೆ, ರಾಷ್ಟ್ರೀಯತೆ ನರನಾಡಿಯಲ್ಲಿದೆ, ಹಿಂದುತ್ವದಲ್ಲಿ ದೃಢ ನಂಬಿಕೆ ಇದೆ, ಸಂಸ್ಕೃತಿಯ ರಾಯಭಾರಿಯಾಗಿ, ಭಾರತೀಯರಿಗೆ ಆರಾಧ್ಯವಾಗಿ, ಯುವಕರಿಗೆ ಸ್ಫೂರ್ತಿಯಾಗಿ, ಸಂಘಟನಾ ಶಕ್ತಿಗೆ ಇನ್ನೊಂದು ಹೆಸರಾಗಿದೆ ಎಂದು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯಪಟ್ಟರು.
ಬೆಂಗಳೂರು ಶಂಕರಪುರಂ ನಗರದ ರಾಘವೇಂದ್ರ ವಸತಿ ವತಿಯಿಂದ ಚಾಮರಾಜಪೇಟೆಯ ಆದರ್ಶ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕ ಸುಧಾಕರ್ ವಿಶೇಷ ಬೌದ್ಧಿಕ ನಡೆಸಿಕೊಟ್ಟರು. ಡಾ. ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗಣವೇಷಧಾರಿಗಳಾದ ಸ್ವಯಂಸೇವಕರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)
