ವಿವೇಕಾನಂದ ಕಾಲೇಜ್; ಪತ್ರಿಕೋದ್ಯಮ ವಿದ್ಯಾರ್ಥಿಗಳ "ಕಣ್ಣೀರ ಛಾಯೆ "ಕಿರುಚಿತ್ರ ಬಿಡುಗಡೆ

Upayuktha
0



ಪುತ್ತೂರು: ಒಂದು ಸಿನಿಮಾ ಮೆಚ್ಚುಗೆ ಗಳಿಸಬೇಕಾದರೆ ಅದರ ಹಿಂದೆ ಹಲವರ ಶ್ರಮವಿರುತ್ತದೆ. ವಿದ್ಯಾರ್ಥಿ ಜೀವನದಲ್ಲೇ ನಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಬೇಕು. ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನ ಅಗತ್ಯ. ಜವಾಬ್ದಾರಿ ಇದೆ ಎಂದು ಕನಸನ್ನು ದೂರ ಮಾಡಿಕೊಳ್ಳಬಾರದು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ, ಯೂಟ್ಯೂಬರ್  ಅಚಲ್ ಉಬರಡ್ಕ ನುಡಿದರು.


ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ) ಇದರ ಪತ್ರಿಕೋದ್ಯಮ ವಿಭಾಗ, ನಯನ ಫೋಟೋಗ್ರಫಿ ಕ್ಲಬ್ ಹಾಗೂ ಐಕ್ಯೂ ಎಸಿ ಸಹಯೋಗದೊಂದಿಗೆ ನಡೆದ "ಕಣ್ಣೀರ ಛಾಯೆ" ಕಿರು ಚಿತ್ರ ಬಿಡುಗಡೆಗೊಳಿಸಿ ಇವರು ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ. ಶ್ರೀಧರ್ ಎಚ್. ಈ, ಕನ್ನಡದಲ್ಲಿ ಕಿರು ಚಿತ್ರಕ್ಕೆ ದೊಡ್ಡ ಪರಂಪರೆ ಇದೆ. ಕೆಲವೇ ನಿಮಿಷಗಳಲ್ಲಿ ಕಥೆಯೊಂದನ್ನು ಕಟ್ಟಿಕೊಡುವ ಕಿರು ಚಿತ್ರಗಳು ಅದ್ಭುತ ಅನುಭವವನ್ನು ನೀಡುತ್ತದೆ. ಇವುಗಳು ಒಳ್ಳೆಯ ಸಂದೇಶವನ್ನು ನೀಡುತ್ತದೆ ಎಂದರು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಹಾಗೂ ಪ್ರಾಂಶುಪಾಲ  ಡಾ. ಶ್ರೀಧರ್ ನಾಯಕ್.ಬಿ. ಶುಭ ಹಾರೈಸಿದರು.


ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ "ವಿಕಸನ "ವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ "ಕಣ್ಣೀರ ಛಾಯೆ" ಕಿರುಚಿತ್ರದ ನಿರ್ಮಾಪಕ ಹಾಗು ನಿರ್ದೇಶಕ ಅಶ್ವಿನ್ ಸಾಜಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್ ನಿಡ್ಪಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಭೂಮಿಕಾ ವಂದಿಸಿದರು. ಚೈತನ್ಯ ನಿರೂಪಿಸಿದರು. ಉಪನ್ಯಾಸಕಿ ಹವ್ಯಾ ಪುರ ಹಾಗೂ ಸುತನ್ ಕೇವಳ ಸಹಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top