ಮನುಷ್ಯನ ಮೊದಲ ಶತ್ರು ಮೊಬೈಲ್: ಅರುಣ್ ನಾಗೇಗೌಡ

Upayuktha
0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಿವೇಕ ಚಿಂತನ ಶೀರ್ಷಿಕೆಯಡಿಯಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಮಾಹಿತಿ ತಂತ್ರಜ್ಞಾನ ಭದ್ರತೆಯ  (Cyber security awareness) ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮಾಹಿತಿ ಕಾರ್ಯಾಗಾರವು ನಡೆಯಿತು. 


ಈ ಕಾರ್ಯಕ್ರಮದಲ್ಲಿ  ಇಲಾಖೆಯ ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಮಾತನಾಡುತ್ತಾ ಮನುಷ್ಯನ ಮೊದಲ ಶತ್ರು  ಮೊಬೈಲ್. ಇತ್ತೀಚಿನ ದಿನಗಳಲ್ಲಿ ಯುವಕರು, ಗೃಹಿಣಿಯರು ಹೇಗೆ ಸೈಬರ್ ಕ್ರೈಂಗಳಿಗೆ ಒಳಗಾಗುತ್ತಿದ್ದಾರೆ, ಇದರಿಂದ ನಾವು ಹೇಗೆ ಜಾಗೃತಗೊಳ್ಳಬೇಕು ಎಂದು ತಿಳಿಸುತ್ತಾ  ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ತೊಂದರೆಗಳು, ಮೊಬೈಲ್‌ ಹ್ಯಾಕಿಂಗ್, ಫಿಶಿಂಗ್, ಗುರುತಿನ ಕಳ್ಳತನ, ಮ್ಯಾಲ್ವೇರ್, ಕಾರ್ಡ್ ಪಾವತಿ ವಂಚನೆ, ಆನ್‌ಲೈನ್‌ ವಂಚನೆ ಈ ಕುರಿತಾದ ಮಾಹಿತಿಗಳನ್ನು ನೀಡಿದರು. 


ಕಾರ್ಯಾಗಾರದಲ್ಲಿ ಇನ್ಸ್ ಪೆಕ್ಟರ್ ಕಿರಣ್ ಜಾನ್ಸನ್, ಎಸ್. ಐ ಆಂಜನೇಯ ರೆಡ್ಡಿ ಅವರು ಪಾಲ್ಗೊಂಡರು . ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ದ್ವಿತೀಯ ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ  ಎಸ್. ಐ ಆಂಜನೇಯ ರೆಡ್ಡಿ ಇವರು ಸೈಬರ್ ಕ್ರೈಂ ಅಪರಾಧ ಜಾಗೃತಿಯ ಕುರಿತಾಗಿ ಕಿರು ನಾಟಕ ಪ್ರದರ್ಶನ ಮಾಡಿದರು.  ಕಾರ್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶೈಕ್ಷಣಿಕ ಸಂಯೋಜಕರಾದ  ಶ್ರೀವತ್ಸ ಎನ್. ಇವರು ಸ್ವಾಗತಿಸಿ, ನಿರೂಪಿಸಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top