ಬರವಣಿಗೆಯು ಹೊಸತನದೊಂದಿಗೆ ಕಲಾತ್ಮಕತೆಯಿಂದ ಕೂಡಿರಲಿ : ಡಾ. ವಿಜಯ ಸರಸ್ವತಿ

Chandrashekhara Kulamarva
0



ಪುತ್ತೂರು: ಪ್ರತಿಯೊಂದು ವಿಷಯಗಳು ಸಹ ಕಲಿಯುವವರೆಗೆ ಬ್ರಹ್ಮವಿದ್ಯೆ, ಕಲಿತ ಮೇಲೆ ಸರಳ ವಿದ್ಯೆ. ಕಲ್ಪನೆ ಮಾಡಿಕೊಳ್ಳುವುದು ಪ್ರತಿಭೆಗೆ ಒಂದು ಮೂಲವಾಗಿದೆ. ನಮ್ಮ ಆಲೋಚನೆಗೆ ತಕ್ಕಂತೆ ಭಾಷೆಯ ಶೈಲಿಯೂ ತನ್ನ ರೂಪವನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಯೋಚನೆಯು ಹೊಸತನದೊಂದಿಗೆ ವಿಶಾಲವಾಗಿ ಕಲಾತ್ಮಕವಾಗಿರಲಿ. ಇಲ್ಲಿಯವರೆಗೆ ಬರವಣಿಗೆಯನ್ನು ಆರಂಭಿಸಿದವರು ಇಂದೇ ಬರೆಯುವೆ ಎಂಬ ಸವಾಲನ್ನು ಸ್ವೀಕರಿಸಿ ಎಂದು ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಧುಕುಮಾರ್ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ಇದರ ಆಶ್ರಯದಲ್ಲಿ ನಡೆದ ‘ಬರವಣಿಗೆಯ ಭಾಷೆ ಮತ್ತು ಹೊಸತನದ ಚಿಂತನ’ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.


ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಅಧ್ಯಕ್ಷೀಯ ನುಡಿಗಳನ್ನಾಡಿ, ಭಾಷೆಯೊಂದಿಗೆ ಭಾಷಾ ಶುದ್ಧತೆಯು ಎಲ್ಲರಿಗೂ ಅತಿಮುಖ್ಯವಾಗಿದೆ. ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೆ ಭಾಷಾ ಶುದ್ಧತೆ ತುಂಬಾ ಮುಖ್ಯವಾದ ಅಂಶವಾಗಿದೆ. ಬರವಣಿಗೆಯ ಕೌಶಲ್ಯದ ಜೊತೆಗೆ ಭಾಷಾಸ್ಪಷ್ಟತೆ ಇರಬೇಕು. 


ಬರವಣಿಗೆಯು ಸರಳ ಭಾಷೆಯಲ್ಲಿದ್ದು ಅದರ ವಸ್ತು ವಿಷಯವನ್ನು ಎಲ್ಲರೂ ಅರ್ಥೈಸುವಂತಿರಬೇಕು. ಬರಹಗಾರನ ಬರವಣಿಗೆಯ ಕನಸು ಯೋಚನೆಯಾಗಿ, ನಿರ್ಣಯಸಿ, ನಿರ್ಧಾರಕ್ಕೆ ತಲುಪಿ ಸಂಕಲ್ಪ ಮಾಡಿದ ನಂತರವೇ ಕಾರ್ಯಗತವಾಗುತ್ತದೆ ಎಂದು ನುಡಿದರು. ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಸುತನ್ ಕೇವಳ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕಿ ಹವ್ಯಶ್ರೀ ಪಾಲ್ತಾಡಿ ಧನ್ಯವಾದ ಸಮರ್ಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top