ನಮಸ್ತೇ ಸದಾ ವತ್ಸಲೇ ಮಾತೃಭೂಮೇ | ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ ||
ಇತ್ತೀಚೆಗೆ ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ RSS ಗೀತೆ ಹಾಡಿದ್ದು ದೊಡ್ಡ ಸುದ್ದಿಗೆ ಆಗಿತ್ತು. ಇದರ ಬೆನ್ನಲ್ಲೇ, ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಸಹ RSS ಗೀತೆ ಹಾಡಿ, ಅದು ದೇಶಭಕ್ತಿಯಿಂದ ಕೂಡಿದೆ ಎಂದಿದ್ದೂ ಸುದ್ದಿಯಾಗಿತ್ತು. ಕಾಂಗ್ರೆಸ್ ಶಾಸಕರಾದ ಎಚ್.ಡಿ.ರಂಗನಾಥ್ "ಈ ಗೀತೆ ಜಾತ್ಯತೀತವಾಗಿದ್ದು, ಒಳ್ಳೆಯದನ್ನು ಸ್ವೀಕರಿಸಬೇಕು" ಎಂದು ಹೇಳಿದ್ದಾರೆ.
***
RSS ಪ್ರಾರ್ಥನಾ ಗೀತೆಯನ್ನು ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನ ಶೈಲಿಯಲ್ಲಿ ಹಾಡಿದ್ದಾರೆ ರವಿ ಮುರೂರ್. ಹಾಡಿಗೆ ಹಿಮ್ಮೇಳ ಅನಿರುಧ್ ಹೆಗ್ಡೆ ಮತ್ತು ಪ್ರಸನ್ನ ಹೆಗ್ಗಾರ್.
ಮಾತೃಭೂಮಿಯಾದ ಭಾರತಕ್ಕೆ ಪ್ರೀತಿ ಮತ್ತು ಭಕ್ತಿಯನ್ನು ಸಮರ್ಪಿಸುವ, ರಾಷ್ಟ್ರದ ವೈಭವ ಮತ್ತು ಯೋಗಕ್ಷೇಮದ ಬಯಕೆಯನ್ನು ಹೇಳುವ, ರಾಷ್ಟ್ರ ಸೇವೆ ಮಾಡಲು ಶಕ್ತಿಗಾಗಿ ಆಶೀರ್ವಾದವನ್ನು ಬೇಡುವ, ದೇಶಭಕ್ತಿಯನ್ನು ಉದ್ದೀಪನಗೊಳಿಸುವ, ರಾಷ್ಟ್ರೀಯತೆಯ ಭಾವನೆಯನ್ನು ತುಂಬುವ ಯಕ್ಷಗಾನ ಶೈಲಿಯ ಸುಶ್ರಾವ್ಯ RSS ಪ್ರಾರ್ಥನಾ ಗೀತೆಯನ್ನು ಕೇಳಲು ಈ ಲಿಂಕ್ ಬಳಸಿ :
ರಾಷ್ಟ್ರೀಯ ಸ್ವಯಂಸೇವಕ ಸಂಘ RSS ಸ್ಥಾಪನೆಯಾಗಿದ್ದು 1925 ಸೆಪ್ಟೆಂಬರ್ 27. 100 ವರ್ಷಗಳನ್ನು ಪೂರೈಸಿ ಶತಮಾನೋತ್ಸವದಲ್ಲಿರುವ RSS ಗೆ
ನಮಸ್ತೇ ಸದಾ ವತ್ಸಲೇ ಮಾತೃಭೂಮೇ |
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ ||
ಗೀತೆಯು ಪ್ರಾರ್ಥನಾ ಗೀತೆಯಾಗಿ 85 ವರ್ಷಗಳಾಗಿವೆ. ಮೇ 18, 1940 ರಂದು ನಾಗಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ RSS ಪ್ರಚಾರಕ್ ಯಾದವ್ ರಾವ್ ಜೋಶಿ ಅವರು ಸಂಘ ಪ್ರಾರ್ಥನಾವನ್ನು ಸಾರ್ವಜನಿಕವಾಗಿ ಹಾಡಿದರು. ಇದೇ ಅವಧಿಯಲ್ಲಿ ಪುಣೆಯಲ್ಲಿ ನಡೆದ ಇನ್ನೊಂದು ಸಂಘ ಶಿಕ್ಷಾ ವರ್ಗದಲ್ಲಿ ಆರೆಸ್ಸೆಸ್ ಪ್ರಚಾರಕ ಅನಂತ್ ರಾವ್ ಕಾಳೆ ಅವರಿಂದ ಸಂಘದ ಪ್ರಾರ್ಥನೆಯನ್ನು ಹಾಡಲಾಯಿತು. ಈ ಪ್ರಾರ್ಥನೆಯು ಹಿಂದಿಯಲ್ಲಿರುವ ಕೊನೆಯ ಸಾಲಿನ 'ಭಾರತ್ ಮಾತಾ ಕೀ ಜಯ್' ಹೊರತುಪಡಿಸಿ ಉಳಿದೆಲ್ಲವು ಸಂಸ್ಕೃತದಲ್ಲಿದೆ.
RSS ಪ್ರಾರ್ಥನಾ ಗೀತೆಯನ್ನು ಸಂಸ್ಕೃತದ ಪ್ರಾಧ್ಯಾಪಕರಾಗಿದ್ದ ನರಹರ್ ನಾರಾಯಣ್ ಭಿಡೆ ಅವರು, RSS ಸಂಸ್ಥಾಪಕ ಡಾ. ಕೆ. ಬಿ. ಹೆಡ್ಗೆವಾರ್ ಮತ್ತು ಮಾಧವ್ ಸದಾಶಿವ್ ಗೋಲ್ವಾಲ್ಕರ್ ಅವರ ಮಾರ್ಗದರ್ಶನದಲ್ಲಿ ಬರೆದಿದ್ದಾರೆ.
RSS ಎಲ್ಲಾ ಕಾರ್ಯಕ್ರಮಗಳಲ್ಲಿ ಈ ಪ್ರಾರ್ಥನೆಯನ್ನು ಹಾಡುವುದು ಕಡ್ಡಾಯವಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ₹100 ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
ಇನ್ನೊಂದು ವಿಶೇಷ ಅಂದರೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ನಾಣ್ಯದ ಮೇಲೆ ಮುದ್ರಿಸಲಾಗಿದೆ. ಇದು ಬಹಳ ಹೆಮ್ಮೆ ಮತ್ತು ಐತಿಹಾಸಿಕ ಮಹತ್ವವನ್ನು ಸೂಚಿಸುತ್ತದೆ.
ಕುವೆಂಪುರವರ ರಚನೆಯ ಕರ್ನಾಟಕದ ನಾಡಗೀತೆಯಲ್ಲಿ ಭಾರತವನ್ನು ಜೈ ಭಾರತ ಮಾತೆ ಎಂದು ಸಂಭೋದಿಸಿ ಮಾತೃ ಸ್ಥಾನ ಕೊಟ್ಟಿದ್ದಕ್ಕೆ....
ವಂದೇ ಮಾತರಂ ರೀತಿಯ ಹಲವಾರು ದೇಶ ಭಕ್ತಿ ಗೀತೆಗಳಲ್ಲಿ ಭಾರತವನ್ನು ತಾಯಿ ಸ್ವರೂಪಿಣಿಯಾಗಿ ಕಂಡಿದ್ದಕ್ಕೆ....
RSS ಪ್ರಾರ್ಥನಾ ಗೀತೆಯಲ್ಲಿ ನಮಸ್ತೇ ಸದಾ ವತ್ಸಲೇ ಮಾತೃಭೂಮೇ ಎಂದು ಭಾರತದ ನೆಲವನ್ನು ಮಾತೃ ಭೂಮಿ ಎಂದು ಕರೆದಿದ್ದಕ್ಕೆ....
ಮೊದಲ ಬಾರಿ ಭಾರತ ಮಾತೆಯ ಚಿತ್ರವನ್ನು ನಾಣ್ಯದ ಮೇಲೆ ಮುದ್ರಿಸಿರುವುದು ಸಾಂದರ್ಭಿಕವಾಗಿ ವಿಶೇಷತೆಯನ್ನು ಪಡೆದಿದೆ. ಇಷ್ಟು ದಿನ ರುಪಾಯಿ ನಾಣ್ಯವನ್ನು ಲಕ್ಷ್ಮೀ ಎಂದು ಪೂಜಿಸಲಾಗುತ್ತಿತ್ತು, ಇನ್ನು ಮುಂದೆ ಲಕ್ಷ್ಮೀ ಜೊತೆಗೆ ರುಪಾಯಿ ನಾಣ್ಯ ಭಾರತ ಮಾತೆಯೂ ಹೌದು.
RSS ನಡೆದು ಬಂದ ದಾರಿಯ ಬಗ್ಗೆ ಒಂದು ಸಿಂಹಾವಲೋಕನಕ್ಕೆ ಈ ವೀಡಿಯೋ ಗಮನಿಸೋಣ:
RSS ಪ್ರಾರ್ಥನಾ ಗೀತೆಯ ಪೂರ್ಣ ಪಾಠ:
ನಮಸ್ತೇ ಸದಾ ವತ್ಸಲೇ ಮಾತೃಭೂಮೇ |
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ || ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||೧||
ಪ್ರಭೋ ಶಕ್ತಿಮನ್ ಹಿಂದುರಾಷ್ಟ್ರಾಂಗಭೂತಾ ಇಮೇ ಸಾದರಂ ತ್ವಾಂ ನಮಾಮೋವಯಮ್ | ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್ ಶುಭಾಮಾಶಿಷಂ ದೇಹಿ ತತ್ಪೂರ್ತಯೇ || ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್ ಸುಶೀಲಂ ಜಗದ್ಯೇನ ನಮ್ರಂ ಭವೇತ್ | ಶ್ರುತಂ ಚೈವ ಯತ್ ಕಂಟಕಾಕೀರ್ಣಮಾರ್ಗಮ್ ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್ ||೨||
ಸಮುತ್ಕರ್ಷನನಿಃಶ್ರೇಯಸಸ್ಯೈಕಮುಗ್ರಮ್
ಪರಂ ಸಾಧನಂ ನಾಮ ವೀರವ್ರತಮ್ |
ತದಂತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ
ಹೃದಂತಃ ಪ್ರಜಾಗರ್ತು ತೀವ್ರಾನಿಶಮ್ ||
ವಿಜೇತ್ರಿ ಚ ನಃ ಸಂಹತಾ ಕಾರ್ಯಶಕ್ತಿರ್
ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್ |
ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್ ಸಮರ್ಥಾ ಭವತ್ವಾಶಿಷಾ ತೇ ಭೃಶಮ್ ||೩||
|| ಭಾರತ್ ಮಾತಾ ಕಿ ಜಯ್ ||
***
ಇನ್ನು RSS ಗೀತೆಯ ಭಾವಾರ್ಥ ತಿಳಿಯಲು ಈ ಲಿಂಕ್ ಬಳಸಬಹುದು:
ಕನ್ನಡ ಭಾವಾರ್ಥ:
ಹಿಂದಿ ಭಾವಾರ್ಥ:
|| ಭಾರತ್ ಮಾತಾ ಕಿ ಜಯ್ ||
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


