ಹಲೋ, ಹೇಗಿದ್ದೀರಾ?
ನಾವು ದಿನ ನಿತ್ಯ ಜೀವನದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತೇವೆ. ಕೆಲವೊಂದು ಸಾರೆ ನಾವು ಕೆಲ ವಿಷಯಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಆದರೆ ಇವು. ನಮ್ಮ ಮೇಲೆ ಅಷ್ಟೇ ಪ್ರಭಾವ ಬೀರುತ್ತವೆ.
ತುಂಬ ಸಲ ಸಕಾರಾತ್ಮಕ ಭಾವನೆಗಳು ನಮ್ಮ ಜೀವನವನ್ನು ನಿರ್ಧರಿಸುತ್ತವೆ. ಒಂದು ಲೋಟದಲ್ಲಿ ಅರ್ಧ ನೀರಿದ್ದರೆ, ಅರ್ಧ ಆದ್ರೂ ಇದೆಯಲ್ಲ, ಎಂಬುದು ಸಕಾರಾತ್ಮಕ ಭಾವನೆ ಆದರೆ, ಬರೀ ಅರ್ಧ ಲೋಟ ನೀರು ಎನ್ನುವ ಅಸಂತೃಪ್ತಿ ನಕಾರಾತ್ಮಕ ಭಾವನೆಯನ್ನು ಎತ್ತಿ ತೋರಿಸುತ್ತದೆ.
ಜೀವನದಲ್ಲಿ ಬಿದ್ದಾಗ ಫೀನಿಕ್ಸ್ ಹಕ್ಕಿಯಂತೆ ಏಳಲು ನಮಗೆ ಸಕಾರಾತ್ಮಕ ಭಾವನೆ ಪ್ರಚೋದಿಸಿದರೆ, ಏನು ಬಿಡು ಜೀವನ, ಹೇಗೋ ಕಳೆದು ಹೋಗುತ್ತದೆ ಎಂಬ ಉದಾಸೀನತೆ ನಮ್ಮನ್ನು ಸೋಮಾರಿಯನ್ನಾಗಿ ಮಾಡುತ್ತದೆ.
ಬದುಕಿನಲ್ಲಿ ಸಕಾರಾತ್ಮಕ ಭಾವನೆಗಳು ನಮಗೆ ಯಾವ ಪರಿಸ್ಥಿತಿಯಲ್ಲೂ ಜಗ್ಗದೇ ಕೆಲಸ ಮಾಡುವ ಗುಣ ಕಲಿಸಿ ಕೊಡುತ್ತದೆ. ಎಡಿಸನ್ 99 ಬಾರಿ ಫೇಲಾದರೂ, 100ನೇ ಬಾರಿ ಬಲ್ಬ್ ಕಂಡು ಹಿಡಿದಿದ್ದು ಸಕಾರಾತ್ಮಕ ಭಾವನೆಗೆ ಹಿಡಿದ ಕೈಗನ್ನಡಿ.
ರಾಜಕಾರಣಿಗಳು, ಒಮ್ಮೆ ಚುನಾವಣೆಯಲ್ಲಿ ಸೋತರೂ, ಮತ್ತೊಮ್ಮೆ ಕಣಕ್ಕೆ ಧುಮುಕುವಂತೆ, ಒಲಿಂಪಿಕ್ ನಲ್ಲಿ ಸೋತರೂ ಮತ್ತೊಮ್ಮೆ ಪೋಡಿಯಂನಲ್ಲಿ ನಿಲ್ಲುವ ಕನಸು ಹೊತ್ತು ಪ್ರಾಕ್ಟೀಸ್ ಮಾಡುವುದು, ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡರೂ ಮತ್ತೆ
ಇಡೀ ವರ್ಷ ಪ್ರಯತ್ನಿಸಿ ಸೀಟು ತೆಗೆದು ಕೊಳ್ಳುವುದು ಸಕಾರಾತ್ಮಕ ಭಾವನೆಗಳ ಉತ್ತಮ ಉದಾಹರಣೆಗಳು.
ಸಕಾರಾತ್ಮಕ ಭಾವನೆಗಳು ಏಣಿಯ ಮೆಟ್ಟಿಲು, ಮೀಟರ್ ಬೋರ್ಡಿನಲ್ಲಿ ಇರುವ ಕರೆಂಟ್ ಇದ್ದ ಹಾಗೆ. ನಮ್ಮ ಜೀವನದ ಸರ್ವಿಸ್ ಕೇಬಲ್ ಇದ್ದ ಹಾಗೆ. ಏನಂತೀರಾ...?
- ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

