ಮಂಗಳೂರಿನಲ್ಲಿ ಧರ್ಮನಿಷ್ಠ ಉದ್ಯಮಿಗಳ ಕಾರ್ಯಾಗಾರ

Upayuktha
0
ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜನೆ


ಮಂಗಳೂರು: ಮೊದಲು ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಇತ್ತು, ಈ ಶಿಕ್ಷಣ ಪದ್ಧತಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಧರ್ಮದ 4 ಪುರುಷಾರ್ಥಗಳ ಬೋಧನೆ ನೀಡಲಾಗುತ್ತಿತ್ತು. ಅದರಿಂದಾಗಿ ಎಲ್ಲರ ಜೀವನವೂ ಸಮತೋಲನವಾಗಿತ್ತು. ಆದರೆ ಪ್ರಸ್ತುತ ಕಾಲದಲ್ಲಿ ಧರ್ಮ ಮತ್ತು ಮೋಕ್ಷದ  ಕುರಿತು ಯಾರೂ ಹೇಳುತ್ತಿಲ್ಲ, ಕೇವಲ ಅರ್ಥ ಅಂದರೆ ಹಣ ಗಳಿಸುವುದು ಮತ್ತು ಕಾಮ ಅಂದರೆ ಇಚ್ಛೆ ಪೂರ್ಣಗೊಳಿಸುವುದು ಇದನ್ನೇ ಕಲಿಸಲಾಗುತ್ತಿದೆ. ಇದರ ಪರಿಣಾಮವಾಗಿ ಸಮಾಜಕ್ಕೆ ನೈತಿಕ ಶಿಕ್ಷಣ ಸಿಗದೆ ಅಧೋಗತಿಗೆ ಸಾಗುತ್ತಿದೆ. 


ಉದ್ಯಮ ಕ್ಷೇತ್ರದಲ್ಲಿ ಇದ್ದುಕೊಂಡು ಧರ್ಮಾಚರಣೆ ಮತ್ತು ಸಾಧನೆ ಮಾಡುವುದು, ಸಮಾಜದಲ್ಲಿ ಧರ್ಮಶಿಕ್ಷಣ ನೀಡುವುದು ಆವಶ್ಯಕವಿದೆ. ಇಂತಹ ಧರ್ಮಶಿಕ್ಷಣ ನೀಡಲು ರಾಷ್ಟ್ರ ಮತ್ತು ಧರ್ಮಪ್ರೇಮಿ ಉದ್ಯಮಿಗಳ ಸಂಘಟನೆಯಾಗಬೇಕಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಕರೆ ನೀಡಿದರು. 


ಅವರು ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ 6 ಮತ್ತು 7 ಅಕ್ಟೋಬರ 2025 ರಂದು ಧರ್ಮನಿಷ್ಠ ಉದ್ಯಮಿಗಳ ಕಾರ್ಯಾಗಾರದ ಆಯೋಜನೆ ಮಾಡಲಾಯಿತು. ಈ ಕಾರ್ಯಾಗಾರದಲ್ಲಿ ವಿವಿಧ ಕೈಗಾರಿಕೋದ್ಯಮಿಗಳು, ಬಸ್ ಮಾಲೀಕರು, ಮೀನುಗಾರಿಕೆ, ತೈಲ ಮತ್ತು ಜವಳಿ ಉದ್ಯಮಿಗಳು ಸೇರಿದಂತೆ ಹಲವು ಕ್ಷೇತ್ರಗಳ ಉದ್ಯಮಿಗಳು ಸಹಭಾಗ ಮಾಡಿದ್ದರು.


ಕಾರ್ಯಗಾರದ ಪ್ರಸ್ತಾವನೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಮಾತನಾಡಿ, ವೃತ್ತಿ ಜೀವನವನ್ನು ಸಮತೋಲಿತಗೊಳಿಸುವುದು ಮತ್ತು ಒತ್ತಡಮುಕ್ತ ಜೀವನ ನಡೆಸಲು ಆಧ್ಯಾತ್ಮಿಕ ಸಾಧನೆ ಮುಖ್ಯವಾಗಿದೆ. ಎಲ್ಲಕ್ಕಿಂತ ಶ್ರೇಷ್ಠ ಜ್ಞಾನ ಆತ್ಮಜ್ಞಾನವಾಗಿದೆ, ಅಂತಹ ಆತ್ಮಜ್ಞಾನವು ಆಧ್ಯಾತ್ಮಿಕ ಸಾಧನೆಯಿಂದ ಸಿಗಲಿದೆ. ನಾವೆಲ್ಲರೂ ಧರ್ಮದ ಆಧಾರದಲ್ಲಿಯೇ ಅರ್ಥ ಗಳಿಸಬೇಕು. ಜೀವನದಲ್ಲಿ ಉದ್ಯಮವನ್ನು ನಿಷ್ಕಾಮ ಭಾವದಿಂದ ಮಾಡಬೇಕು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಇದರೊಂದಿಗೆ ಉದ್ಯಮ ಕ್ಷೇತ್ರದಲ್ಲಿದ್ದುಕೊಂಡು ನಾವೆಲ್ಲರೂ ಧರ್ಮರಕ್ಷಣೆಯ ಸಂಕಲ್ಪ ಮಾಡಬೇಕಿದೆ, ಅದಕ್ಕಾಗಿ ಸಮಯವನ್ನು ಮೀಸಲಿಡಬೇಕು ಎಂದು ಕರೆ ನೀಡಿದರು. 


ಉದ್ಯಮ ಕ್ಷೇತ್ರದ ಮೇಲೆ ಹಲಾಲ್ ಅರ್ಥವ್ಯವಸ್ಥೆ ಅರ್ಥಾತ್ ಇಸ್ಲಾಮಿಕ್ ಅರ್ಥ ವ್ಯವಸ್ಥೆ ಗಂಭೀರವಾದ ಪ್ರಭಾವ ಬೀರುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಉದ್ಯಮಗಳು ಕುಸಿಯುತ್ತಿವೆ. ಹಿಂದೂಗಳ ವಂಶ ಪಾರಂಪರಿಕ ವೃತ್ತಿಗಳು ನಶಿಸಿ ಅನ್ಯ ಸಮುದಾಯದ ಪಾಲಾಗುತ್ತಿದೆ. ಇದು ಅತ್ಯಂತ ಕಳವಳಕಾರಿಯಾಗಿದೆ. 


ಭಾರತದ ಔದ್ಯೋಗಿಕ ಕ್ಷೇತ್ರ ಮತ್ತು ಮಹತ್ವಪೂರ್ಣ ಉದ್ಯಮ ಕ್ಷೇತ್ರದಲ್ಲಿ ಅನ್ಯ ಸಮುದಾಯದ ಪ್ರಾಬಲ್ಯವನ್ನು ತಡೆಯಲು ಮತ್ತು ಹಿಂದೂ ಸಮುದಾಯದ ಹಿತಾಸಕ್ತಿಯನ್ನು ಸಂರಕ್ಷಣೆ ಮಾಡಲು ಹಿಂದೂ ಉದ್ಯಮಿಗಳು ಸಂಘಟಿತರಾಗುವುದು ಅತ್ಯಂತ ಅನಿವಾರ್ಯವಾಗಿದೆ ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಹಿಂದೂ ಉದ್ಯಮಿಗಳ ಸಂಘಟನೆಯನ್ನು ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ ಇವರು ತಿಳಿಸಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ  ಗುರುಪ್ರಸಾದ ಗೌಡ,   ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top