ಮಂಗಳೂರು: ಪೇಸ್ ಗ್ರೂಪ್ ನ ಬೆಳ್ಳಿಹಬ್ಬ 'ಪೇಸ್ ಸಿಲ್ವಿಯೋರಾ 2025'ರ ಅಂಗವಾಗಿ ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ನಡಿ ಕಾರ್ಯನಿರ್ವಹಿಸುತ್ತಿರುವ ಪಿ.ಎ. ಪ್ರಥಮ ದರ್ಜೆ ಕಾಲೇಜು ವತಿಯಿಂದ 'ಕ್ಯಾಂಪಸ್ ಕ್ರೋಮಾ 2025' ಎಂಬ ರಾಷ್ಟ್ರ ಮಟ್ಟದ ಉತ್ಸವ ಮತ್ತು ಆಹಾರ ಮೇಳ ಅ.30ರಂದು ಕೊಣಾಜೆಯ ಮಂಗಳೂರು ವಿವಿ ಬಳಿಯ ಪೇಸ್ ಜ್ಞಾನ ನಗರದಲ್ಲಿ ನಡೆಯಿತು.
ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸರ್ ಮುಖ್ಯ ಅಥಿತಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ‘ಪಿ.ಎ ಪ್ರಥಮ ಕಾಲೇಜು ಯಾವತ್ತಿದ್ದರು ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಹೊಸ ಜಗದೆಡೆಗೆ ಕರಕೊಂಡು ಹೋಗುವುದು’ ಎಂದು ಮಾತನಾಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರ್ಫಾಝ್ ಜೆ. ಹಾಶಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಯುವ ಶಕ್ತಿ, ಸೃಜನಶೀಲತೆ, ನಾವೀನ್ಯತೆಯ ಉತ್ಸವ ಇದಾಗಿದ್ದು, ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು ಹಂಚಿಕೊಳ್ಳಲು, ಆಸಕ್ತಿಗಳನ್ನು ಅನ್ವೇಷಿಸಲು ಉತ್ತಮ ವೇದಿಕೆ ಒದಗಿಸಿ ಕೊಡಲಾಯಿತು. ಡಯಟೆಕ್ 7.0 ನಡಿ ಹಣ್ಣು ಕೆತ್ತನೆ ಸ್ಪರ್ಧೆ, ಪೋಸ್ಟರ್ ತಯಾರಿ, ಕುಕ್ಕಿಂಗ್ ವಿದ್ ಫೈರ್ ಸ್ಪರ್ಧೆ ನಡೆಯಿತು. ಕ್ಯಾಮಿಯೋ 3.0ನಡಿ ಟ್ರೆಝರ್ ಹಂಟ್, ಬ್ರಾಂಡ್ ರಂಗೋಲಿ, ಕಾರ್ಪೊರೇಟ್ ವಾಕ್, ಹಾಗೂ ಹೂಮನಿಸ್ಟ್ 3.0 ನಡಿ ಕೊಲಾಜ್ ತಯಾರಿಕೆ, ಡಾಕ್ಯುಮೆಂಟರಿ ಸ್ಪರ್ಧೆ, ಮತ್ತು ಟೆಕ್ಟೋನಿಕ್ 3.0ನಡಿ ಐಟಿ ಕ್ವಿಝ್, ಕ್ಯಾನ್ವಾಸ್ ಬಳಸಿ ಪೋಸ್ಟರ್ ತಯಾರಿ ಸ್ಪರ್ಧೆಗಳು ನಡೆಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಫುಡ್ ಬ್ಲಾಗರ್ ಅಬ್ದುಲ್ ಬಾಸೀಮ್ ನಳಕತ್ ಭಾಗವಹಿಸಿದರು ಮತ್ತು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಹಾರ ಮೇಳದ ಅತ್ಯುತ್ತಮ ಸ್ಟಾಲ್ ನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎ.ಜಿ.ಎಂ ಕ್ಯಾಂಪಸ್ ಶರಪುದ್ಧೀನ್ ಪಿ.ಕೆ, ವಿದ್ಯಾರ್ಥಿ ವ್ಯವಹಾರ ಮುಖ್ಯಸ್ಥರಾದ ಸಯ್ಯದ್ ಅಮೀನ್ ಅಹಮದ್, ಪಿ ಎ ಇ ಟಿ ಯ ಪ್ರಾಂಶುಪಾಲರಾದ ಫ್ರೋ. ಇಸ್ಮಾಯಿಲ್ ಖಾನ್, ಪಿ ಎ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಜಿ ಹರಿಕೃಷ್ಣನ್, ಪೇಸ್ ದೈಹಿಕ ನಿರ್ದೇಶಕರಾದ ಡಾ ಇಕ್ಬಾಲ್, ಪರ್ಚೆಸ್ ಮ್ಯಾನೇಜರ್ ಹಾರಿಸ್ ಟಿ.ಡಿ, ಪೇಸ್ ಕಾಲೇಜು ಪ್ರವೇಶಾತಿ ಅಧಿಕಾರಿ ಶಫಿನಾಝ್, ಐ.ಕ್ಯೂ.ಎ.ಸಿ ನಿರ್ದೇಶಕಿ ವಾಣಿಶ್ರೀ ವೈ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಅಬ್ದುಲ್ ಸಮೀರ್, ಗುರುರಾಜ್ ಹಾಗೂ ಆಹಾರ ಮೇಳದ ಸಂಯೋಜಕರಾದ ಸಾಜಿರ್ ಅಹ್ಮದ್ ಉಪಸ್ಥಿತರಿದ್ದರು.
ಸ್ಪರ್ಧೆಯ ಭಾಗವಾಗಿ ವಿವಿಧ ವಿಭಾಗಗಳಿಂದ 10 ಕ್ಕೂ ಅಧಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು 15 ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸದರು ಮತ್ತು ಅದರಲ್ಲಿ ವಿಜೇತರಾದವರ ವಿವರ ಇಂತಿದೆ. ಟೆಕ್ಟೋನಿಕ್ 3.0ರ ಭಾಗವಾಗಿ ಬ್ರೈನ್ ಬ್ಲಾಸ್ಟ್ ಐಟಿ ಕ್ವಿಝ್ ನಲ್ಲಿ ಪ್ರಥಮ ಎಕ್ಸ್ ಪರ್ಟ್ ಪಿ.ಯು ಕಾಲೇಜ್ ಮತ್ತು ದ್ವಿತೀಯ ಪ್ರಸ್ಟೀಜ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು.
ಪೋಸ್ಟರ್ ಕ್ವಿಸ್ಟ್ ಅಲ್ಲಿ ಪ್ರಥಮ ಮತ್ತು ದ್ವಿತೀಯ ಕಣಚೂರ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು. ಹ್ಯೂಮನಿಸ್ಟ್ 3.0 ರ ಭಾಗವಾಗಿ ಟ್ರಾಂಕ್ಯುಲ್ ಫ್ಲಾಶ್ ನಲ್ಲಿ ಪ್ರಥಮ ಕನಚೂರ್ ಪಿ ಯು ಕಾಲೇಜ್ ಮತ್ತು ದ್ವಿತೀಯ ಕುನಿಲ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು. ಕ್ರೋಮ ರೀಲ್ಸ್ ಅಲ್ಲಿ ಪ್ರಥಮ ಕುನಿಲ್ ಪಿ ಯು ಕಾಲೇಜ್ ಮತ್ತು ದ್ವಿತೀಯ ಕಣಚೂರ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು.
ಡಯಟೆಕ್ 7.0 ರ ಭಾಗವಾಗಿ ಫ್ರೂಟ್ ಆರ್ಟ್ ಗ್ಯಾಲರಿಯಲ್ಲಿ ಪ್ರಥಮ ವಿಶ್ವಮಂಗಳ ಪಿ ಯು ಕಾಲೇಜ್ ಹಾಗೂ ದ್ವಿತೀಯ ಕಣಚೂರ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ನ್ಯೂಟ್ರಿ ಕಾನ್ವಾಸ್ ಅಲ್ಲಿ ಪ್ರಥಮ ವಿಶ್ವಮಂಗಳ ಪಿ ಯು ಕಾಲೇಜ್ ಹಾಗೂ ದ್ವಿತೀಯ ಎಕ್ಸ್ ಪರ್ಟ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು. ಟೇಸ್ಟೀ ಟಾಸ್ಕ್ ಅಲ್ಲಿ ಪ್ರಥಮ ಮತ್ತು ದ್ವಿತೀಯ ಕಣಚೂರ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು.
ಕಾಮಿಯೋ 3.0 ಭಾಗವಾಗಿ ಮಿಸ್ಟರಿ ಟ್ರೈಲ್ಸ್ ಅಲ್ಲಿ ಪ್ರೆಸ್ಟೀಜ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ಸ್ಪೆಕ್ಟ್ರಂ ಆಫ್ ಆರ್ಟ್ ಅಲ್ಲಿ ಪ್ರಥಮ ಎಕ್ಸ್ ಪರ್ಟ್ ಪಿ ಯು ಕಾಲೇಜ್ ಮತ್ತು ದ್ವಿತೀಯ ವಿಶ್ವಮಂಗಳ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ಸ್ಟ್ರೈಡ್ ಫಾರ್ ಸಕ್ಸಸ್ ಅಲ್ಲಿ ಪ್ರಥಮ ಕಣಚೂರು ಪಿ ಯು ಕಾಲೇಜ್ ಮತ್ತು ದ್ವಿತೀಯ ಕೆನರಾ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ಒಟ್ಟು ಸ್ಪರ್ಧೆಯ ಚಾಂಪಿಯನ್ ಆಗಿ ಕಣಚೂರ್ ಪಿ ಯು ಕಾಲೇಜ್ ಹೊರಹೊಮ್ಮಿದರೆ ರನ್ನರ್ ಆಗಿ ಎಕ್ಸ್ ಪರ್ಟ್ ಪಿ.ಯು ಕಾಲೇಜ್ ಮತ್ತು ವಿಶ್ವಮಂಗಳ ಪಿ.ಯು ಕಾಲೇಜ್ ತನ್ನ ಮುಡಿಗೇರಿಸಿಕೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
