ಕನ್ನಡ ನಾಡು ನುಡಿಗೆ ಪೂರ್ಣ ಸಹಕಾರ : ರಾಜೇಶ್ ಖನ್ನಾ

Upayuktha
0

 ಕ ಸಾ ಪ ಮಂಗಳೂರು ತಾಲೂಕು ಘಟಕ - ಬ್ಯಾಂಕ್ ಆಫ್ ಬರೋಡಾ ಗೆ ಮನವಿ



ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಮುಂದಿನ ಹಲವು ಕನ್ನಡ ಪರ  ಕಾರ್ಯಕ್ರಮಗಳಿಗೆ  ಸಹಕಾರ ನೀಡುವಂತೆ ಬ್ಯಾಂಕ್ ಆಫ್ ಬರೋಡಾ , ವಲಯ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.


ಮನವಿ ಸ್ವೀಕರಿಸಿದ ಮಹಾ ಪ್ರಬಂಧಕ ಮತ್ತು ವಲಯ ಮುಖ್ಯಸ್ಥ ರಾಜೇಶ್ ಖನ್ನಾ ಮಾತನಾಡಿ , ನಮ್ಮ ಬ್ಯಾಂಕ್ ನಲ್ಲಿ ಕನ್ನಡ ಬಳಕೆಗೆ ಬಹಳಷ್ಟು ಉತ್ತೇಜನ ಕೊಡುತ್ತಿದ್ದೇವೆ , ಕರ್ಣಾಟಕದಲ್ಲಿ ನಮ್ಮ ಬ್ಯಾಂಕ್ ಕಾರ್ಯಾಚರಿಸುತ್ತಿರುವಾಗ , ಇಲ್ಲಿ ನಮ್ಮ ಮಾತೃಭಾಷೆ ಕನ್ನಡವೇ ಎಂಬ ಪ್ರೀತಿಯಿದೆ. ಕನ್ನಡ ನಾಡು ನುಡಿಯ ಸೇವೆಗೆ ಸದಾ ಬದ್ಧ ಎಂದರು. 


ಉಪ ಮಹಾ ಪ್ರಬಂಧಕ ರಮೇಶ ಕಾನಡೆ ಮಾತನಾಡಿ , ಕನ್ನಡ ಸಾಹಿತ್ಯ ಪರಿಷತ್ತಿನ ಆಶಯ ಮತ್ತು ಉದ್ದೇಶಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ , ಸರ್ವ ಸಹಕಾರದ ಭರವಸೆ ನೀಡಿದರು. ಮನವಿ ಸಲ್ಲಿಸಿ ಮಾತನಾಡಿದ ಘಟಕದ ಕಾರ್ಯದರ್ಶಿ ಡಾ. ಮುರಲೀಮೋಹನ್ ಚೂಂತಾರು , ಪರಿಷತ್ತಿನ ಕಾರ್ಯಕ್ರಮಗಳು , ಮುಂದಿನ ಯೋಜನೆಗಳ ಬಗೆಗೆ ಮಾಹಿತಿ ನೀಡುತ್ತಾ ಪುಸ್ತಕ ಸ್ಮರಣಿಕೆಯೊಂದಿಗೆ ಅವರನ್ನು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಜೊತೆಗಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top