"ReSOEnance 2025" ಮತ್ತು ವಿಜ್ಞಾನ ಪ್ರದರ್ಶನ
ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಶಾಲೆಯು ಅಕ್ಟೋಬರ್ 10, 2025 ರಂದು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಮಟ್ಟದ ಉತ್ಸವ ReSOEnance 2025 ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಸೃಜನಶೀಲತೆ, ನಾವೀನ್ಯತೆ ಮತ್ತು ಸಹಯೋಗವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ.
ಈ ಉತ್ಸವದಲ್ಲಿ ಬ್ರೈನ್ವೇವ್ (ಕ್ವಿಜ್), ಐಡಿಯಾಜಾಮ್ (ಐಡಿಯಾಥಾನ್), Ctrl+Alt+Esc (ಎಸ್ಕೇಪ್ ರೂಮ್), ರೀಲ್ಗೇರ್ (ರೀಲ್ ಮೇಕಿಂಗ್), ಟ್ರಾಶ್ಫಾರ್ಮರ್ಸ್ (ವೆಲ್ತ್ ಔಟ್ ಆಫ್ ವೇಸ್ಟ್), ಕಾರ್ಟ್ಕ್ರಾಫ್ಟ್ (ಬಿಲ್ಡ್-ಎ-ಕಾರ್), ಮತ್ತು ಎನ್ಕೋರ್ (ವೆರೈಟಿ ಎಂಟರ್ಟೈನ್ಮೆಂಟ್) ಮುಂತಾದ ಸ್ಪರ್ಧೆಗಳಿವೆ.
"ReSOEnance ಕೇವಲ ಒಂದು ಉತ್ಸವವಲ್ಲದೆ ಇದು ವಾತಾವರಣ. ನಾವೀನ್ಯತೆ ಕಲ್ಪನೆಯನ್ನು ಪೂರೈಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು www.soefest.com ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಉತ್ಸವ ಸಂಯೋಜಕಿ ಡಾ. ಗೀತಾ ಪಿಂಟೋ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಗೀತಾ ಪಿಂಟೋ – 9448105267 ಇವರನ್ನು ಸಂಪರ್ಕಿಸಬಹುದಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ