ಕಾಸರಗೋಡು: ನವರಾತ್ರಿ ಹಬ್ಬದ ಪ್ರಯುಕ್ತ ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 128ನೇ ವೈವಿಧ್ಯಮಯ ನಿತ್ಯ ನೂತನ ಅತ್ಯಾಕರ್ಷಕ ಸಾಹಿತ್ಯ ಗಾನ ನೃತ್ಯ ವೈಭವ ವಿವಿಧ ಕಲಾ ಪ್ರಕಾರ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರಗಿತು.
ಡಾ. ವಾಣಿಶ್ರೀ ಸಾಹಿತ್ಯ ಪ್ರಸ್ತುತ ಪಡಿಸಿದರು. ಮಧುಲತಾ ಪುತ್ತೂರು ಅವರ ಸುಮಧುರವಾದ ಗಾಯನದೊಂದಿಗೆ ಪೂಜಾಶ್ರೀ, ಶ್ರದ್ಧಾ, ನವ್ಯಶ್ರೀ ಕುಲಾಲ್ ಯಶಿಕಾ ಸಂದೀಪ್, ಮೇಧಾ, ಖುಷಿ, ಶಿವಪ್ರಿಯ, ಗೌತಮಿ, ರಶ್ಮಿತಾ, ಮನೀಶ್, ಮುಂತಾದ ಸಂಸ್ಥೆಯ ಅಪ್ರತಿಮ ಕಲಾದೀಪಗಳು ಶ್ರೀ ದೇವಿಯ ಸಾನಿಧ್ಯದಲ್ಲಿ ಜನಸಾಗರದ ಮುಂದೆ ಕಲಾಪ್ರದರ್ಶನ ನೀಡಿ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾದರು.
ಮಾತೃ ಮಂಡಳಿಯ ಅಧ್ಯಕ್ಷೆ ಲಲಿತಾ ಗೋಸಾಡ, ಅನಂತ್ ಭಟ್ ಗೋಸಾಡ, ಪ್ರಭಾಕರ ರೈ ಮಠದ ಮೂಲೆ, ಕಾರ್ಯಕಾರಿಣಿ ಸದಸ್ಯರಾದ ಸೀತಾರಾಮ ರೈ ಪಿಂಚಾರ ಇವರ ದಿವ್ಯಹಸ್ತದಿಂದ ಸಂಸ್ಥೆಯ ವತಿಯಿಂದ ಕೊಡುವ ಗೌರವ ಸ್ಮರಣಿಕೆಯನ್ನು ಕಲಾವಿದರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರವೀಂದ್ರ ರೈ, ಅಚ್ಯುತ ಭಟ್, ಶಾಂತಾ, ಪ್ರಮೀಳಾ, ಸತೀಶ್ ಭಟ್, ಮೋಹಿನಿ, ಅಶ್ವಿನಿ, ವನಿತಾ, ಮಧುಮತಿ, ಮುಂತಾದ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ವಾಣಿಶ್ರೀ ಕಾಸರಗೋಡು ಇವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ದೇವರ ಪ್ರಸಾದ ಕೊಟ್ಟು ಸನ್ಮಾನಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


