ಪುವೆಂಪು ನೆನಪು 2025: ಸಾಹಿತ್ಯ ಗಾನ ನೃತ್ಯ ವೈಭವ

Upayuktha
0


ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ ಹಾಗೂ ಕೇರಳ ತುಳು ಅಕಾಡೆಮಿ ಜಂಟಿ ಆಶ್ರಯದಲ್ಲಿ ನಡೆದ ಪುವೆಂಪು ನೆನಪು 2025 ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ 129ನೆಯ ಸಾಹಿತ್ಯ ಗಾನ ನೃತ್ಯ ವೈಭವ ನಡೆಯಿತು.


ಸಂಸ್ಥೆಯ ಅಪ್ರತಿಮ ಕಲಾಮಾಣಿಕ್ಯಗಳಾದ ವಿನಂತಿ, ತೃಪ್ತಿ, ಅವನಿ, ಜಿಶನ್ವಿ, ತನ್ವಿ, ವರ್ಣಿತ, ಋತ್ವಿ ಮುಂತಾದವರು ತುಳು ಬ್ರಹ್ಮ ಪುವೆಂಪು ರಚಿಸಿದ ಹಾಡಿಗೆ ನೃತ್ಯ ಮಾಡುವುದರ ಮೂಲಕ ಹೊಸ ದಾಖಲೆ ಮಾಡಿದರು.


ಡಾ. ವಾಣಿಶ್ರೀ ಅವರಿಂದ ಪುವೆಂಪು ವಿರಚಿತ ಕೃತಿಯ ಸಾಹಿತ್ಯ ಪ್ರಸ್ತುತಿ ನಡೆಯಿತು. ಸಂಸ್ಥೆಯ ವಿಶ್ವದಾಖಲೆ ಮಾಡಿದ ಕಲಾವಿದೆ ವಿನಂತಿ ಮಂಗಳೂರು ಪುವೆಂಪು ರಚಿತ ಹಾಡಿಗೆ ರಿಂಗ್ ಡಾನ್ಸ್ ಮೊಳೆ ಮೇಲೆ ನಿಂತು ನೃತ್ಯ ಮಾಡಿ ಹೊಚ್ಚ ಹೊಸ ದಾಖಲೆ ಮಾಡಿದರು. ಕೊನೆಯಲ್ಲಿ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.


ಪುವೆಂಪು ಪ್ರತಿಷ್ಠಾನದ ವತಿಯಿಂದ ಸಂಸ್ಥೆಗೆ ಹಾಗೂ ಎಲ್ಲಾ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಗಣ್ಯರಾದ ಪುವೆಂಪು ಪ್ರತಿಷ್ಠಾನದ ಅಧ್ಯಕ್ಷ ಶ್ರೀನಾಥ್ ಕಾಸರಗೋಡು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯ ಕಟ್ಟೆ, ಪುವೆಂಪು ಪ್ರತಿಷ್ಠಾನದ ಟ್ಟಸ್ಟಿ ವಿಜಯರಾಜ್ ಪುಣಿಂಚತ್ತಾಯ, ರವಿ ನಾಯ್ಕಾಪು, ವಿದುಷಿ ರೇಖಾ ದಿನೇಶ್, ಅಚ್ಯುತ ಭಟ್ ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top