‘ಕನಕ ಕೀರ್ತನ ಗಂಗೋತ್ರಿ’ ಗಾಯನ ಕಾರ್ಯಕ್ರಮಕ್ಕೆ ಆಹ್ವಾನ

Upayuktha
0



ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ʻಕನಕ ಜಯಂತಿ ಪ್ರಯುಕ್ತʼ ಕನಕದಾಸರ ಕೀರ್ತನೆಗಳ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮವು 12 ನವೆಂಬರ್ 2025 ರಂದು ಬುಧವಾರ ಪೂರ್ವಾಹ್ನ 10.00 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆಯಲಿದೆ ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.


ಪ್ರೌಢಶಾಲಾ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳು, ಅಧ್ಯಾಪಕ, ಅಧ್ಯಾಪಕೇತರ ಹಾಗೂ ಸಾರ್ವಜನಿಕ ಒಟ್ಟು ಏಳು ವಿಭಾಗಗಳಲ್ಲಿ ನಡೆಯುವ ʻಸಾಮುದಾಯಿಕ ಪಾಲ್ಗೊಳ್ಳುವಿಕೆʼಯ ಆಶಯದ ಈ ಕಾರ್ಯಕ್ರಮದಲ್ಲಿ ಉಳ್ಳಾಲ, ಮಂಗಳೂರು, ಬಂಟ್ವಾಳ, ಪುತ್ತೂರು, ಮೂಲ್ಕಿ, ಮೂಡಬಿದ್ರೆ ಹಾಗೂ ಗಡಿನಾಡು ಪ್ರದೇಶವಾದ ಮಂಜೇಶ್ವರ, ಕಾಸರಗೋಡು ತಾಲೂಕು ವ್ಯಾಪ್ತಿಯ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳು, ದಕ್ಷಿಣ ಕನ್ನಡ ಉಡುಪಿ, ಕೊಡಗು ಜಿಲ್ಲೆಯ ವಿಶ್ವೇಶ್ವರಯ್ಯ ತಾಂತ್ರಿಕ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ, ಕಣ್ಣೂರು ವಿಶ್ವವಿದ್ಯಾನಿಲಯ, ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಇಲ್ಲಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.


ವೈಯಕ್ತಿಕ ಗಾಯನ ವಿಭಾಗದಲ್ಲಿ ಪ್ರೌಢಶಾಲೆ, ಪದವಿಪೂರ್ವ, ಸ್ನಾತಕೋತ್ತರ, ಅಧ್ಯಾಪಕ ಮತ್ತು ಸಮೂಹ ಗಾಯನ ವಿಭಾಗದಲ್ಲಿ ಪದವಿ, ಸಿಬ್ಬಂದಿ, ಸಾರ್ವಜನಿಕ ವಲಯದಿಂದ ಕನಕದಾಸರ ಕೀರ್ತನೆಗಳನ್ನು ಹಾಡಲು ಅವಕಾಶವಿದೆ.                                                         


ಆಸಕ್ತರು ನವೆಂಬರ್-10ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಕೋರಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.


ಕೀರ್ತನ ಗಾಯನ ಕಾರ್ಯಕ್ರಮದ ವೈಯಕ್ತಿಕ ಗಾಯನ ಪ್ರತೀ ವಿಭಾಗದಲ್ಲಿ ಆಯ್ಕೆಯಾದ ಮೂವರು ಅಭ್ಯರ್ಥಿಗಳಿಗೆ ಮತ್ತು `ಕನಕ ಸಮೂಹ ಗಾಯನ’ದಲ್ಲಿ ಆಯ್ಕೆಯಾದ ಮೂರು ತಂಡಗಳಿಗೆ ತಲಾ ರೂ. 2,000/- ನಗದು, ಕನಕ ಪುರಸ್ಕಾರ ಹಾಗೂ ಪ್ರಮಾಣ ಪತ್ರಗಳನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು.  Office Email Id : kanakadasaresearchcenter2008@gmail.com ಅಥವಾ  WhatsApp No: 8310300875 / 9632346126 ಈ ಸಂಖ್ಯೆಯ ಮೂಲಕ ತಮ್ಮ  ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.


ಕನಕ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕನಕದಾಸರ ಕೀರ್ತನೆಯನ್ನು ಮಾತ್ರ ಹಾಡಬೇಕು. ಒಬ್ಬರು ಒ೦ದು ಹಾಡನ್ನು ಹಾಡಲು ಮಾತ್ರ ಅವಕಾಶ; ಪದವಿ, ಸಿಬ್ಬಂದಿ, ಸಾರ್ವಜನಿಕ ವಿಭಾಗದಲ್ಲಿ ಸಮೂಹ ಗಾಯನಕ್ಕೆ ಮಾತ್ರ ಅವಕಾಶ; ಹಾಡಲು ಗರಿಷ್ಠ ಕಾಲಾವಧಿ 4 ನಿಮಿಷಗಳು. ಹೆಚ್ಚು ಪ್ರಚಲಿತದಲ್ಲಿಲ್ಲದ ಮತ್ತು ಜನಪ್ರಿಯವಲ್ಲದ ಕೀರ್ತನೆಗಳಿಗೆ ಪ್ರಾಧಾನ್ಯತೆ. ಸಮೂಹ ಗಾಯನ ವಿಭಾಗದಲ್ಲಿ ತಂಡದಲ್ಲಿ ಕನಿಷ್ಠ ಮೂರು ಗರಿಷ್ಠ ಆರು (ಹಿಮ್ಮೇಳನ ಸೇರಿ) ಜನರಿಗೆ ಮಾತ್ರ ಅವಕಾಶ. ಶಾಸ್ತ್ರೀಯ ಮಟ್ಟು ಅಲ್ಲದೆ, ಇನ್ನಿತರ ಜನಪದೀಯ, ಜನಪ್ರಿಯ ಹಾಗೂ ಸುಗಮ ಸಂಗೀತದ ಮಟ್ಟುಗಳಲ್ಲೂ ಕೀರ್ತನೆಗಳನ್ನು ಹಾಡಬಹುದಾಗಿದೆ. ಆಧುನಿಕ ಸಂಗೀತ ಸಾಧನಗಳನ್ನು ಬಳಸಿ ಹೊಸ ರಾಗಗಳಲ್ಲಿಯೂ ಕನಕದಾಸರ ಕೀರ್ತನೆಗಳನ್ನು ಹಾಡಬಹುದಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top