ಮಂಗಳೂರು: ನಗರದ ನ್ಯೂ ಉರ್ವ ಇಂಡೋರ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಯೋನೆಕ್ಸ್ - ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದ ಮೂರನೇ ದಿನವಾದ ಶುಕ್ರವಾರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದವು.
ಇಂದು ಮೊದಲನೇ ಅಂಗಣದಲ್ಲಿ ನಡೆದ ಮೊದಲ ಪಂದ್ಯ ಮಿಕ್ಸೆಡ್ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ತನಾವಿನ್ ಮಾದೀ ಮತ್ತು ನಪಾಪಕೋನ್ ತುಂಗಕಸ್ತಾನ್ ಅವರ ಜೋಡಿಯು ಎದುರಾಳಿ ಭಾರತದ ಆರ್ಯನ್ ಸಫಿಯಾ ಮತ್ತು ಜಿಯಾ ರಾವತ್ ಅವರ ಜೋಡಿಯನ್ನು 21-13, 21-29 ಆಟಗಳಿಂದ ಪರಾಭವಗೊಳಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆಯಿತು.
ಎರಡನೇ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಥಾಯ್ಲೆಂಡಿನ ಪೊಂಗಸ್‌ಕೋನ್ ತೊಂಗಖಾಮ್ ಮತ್ತು ನನಪಾಸ್ ಸುಕ್ಲಾದ್ ಅವರ ಜೋಡಿಯು ಭಾರತದ ಅಗ್ರ ಶ್ರೇಯಾಂಕಿತ ಅಶಿತ್ ಸೂರ್ಯ ಮತ್ತು ಅಮೃತಾ ಪ್ರಮುತೇಶ್ ಅವರ ಜೋಡಿಯನ್ನು 16-21, 21-6, 23-22 ಆಟಗಳಿಂದ ಸೋಲಿಸಿ ಸೆಮಿ ಫೈನಲ್ ಹಂತಕ್ಕೇರಿತು.
ಎರಡನೇ ಅಂಗಣದಲ್ಲಿ ನಡೆದ ಮೊದಲ ಮಿಕ್ಸಡ್ ಡಬಲ್ಸ್‌ನಲ್ಲಿ ಭಾರತದ ಆಯುಷ್ ಮಖಿಜಾ ಮತ್ತು ಲಿಖಿತಾ ಶ್ರೀವಾಸ್ತವ ಅವರ ಜೋಡಿಯು ಸ್ವದೇಶದ ಸಂಜಯ್ ಶ್ರೀವತ್ಸ ಧನರಾಜ್ ಮತ್ತು ಅನಘಾ ಅರವಿಂದ ಪೈ ಜೋಡಿಯನ್ನು 22-20, 21-23, 21-15 ಆಟಗಳಿಂದ ಸೋಲಿಸಿ ಸೆಮಿ ಫೈನಲ್ ಹಂತಕ್ಕೇರಿತು.
ಎರಡನೇ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಭಾರತದ ಧ್ರುವ ರಾವತ್ ಮತ್ತು ಮನೀಶಾ ಕೆ ಅವರ ಜೋಡಿಯು ಸ್ವದೇಶದ ಭವ್ಯಾ ಛಾಬ್ರ ಮತ್ತು ವಿಶಾಖಾ ಟೊಪ್ಪೊ ಜೋಡಿಯನ್ನು 21-19, 21-5 ಆಟಗಳಿಂದ ಸೋಲಿಸಿ ಸೆಮಿ ಫೈನಲ್ ಹಂತಕ್ಕೆ ಅರ್ಹತೆ ಪಡೆಯಿತು.
ಮಹಿಳೆಯರ ಡಬಲ್ಸ್‌ನಲ್ಲಿ 3ನೆ ಶ್ರೇಯಾಂಕಿತ ಅಶ್ವಿನಿ ಭಟ್ ಕೆ ಮತ್ತು ಶಿಖಾ ಗೌತಮ್ ಜೋಡಿಯು ರಶ್ಮಿ ಗಣೇಶ್ ಮತ್ತು ಸನಿಯಾ ಸಿಕಂದರ್ ಜೋಡಿಯನ್ನು 21-17, 21-18 ಆಟಗಳಿಂದ ಸೋಲಿಸಿ ಉಪಾಂತ್ಯಕ್ಕೆ ಅರ್ಹತೆ ಪಡೆಯಿತು.
ಪುರುಷರ ಸಿಂಗಲ್ಸ್‌ನಲ್ಲಿ ಟಾಪ್ ಸೀಡ್ ರಿತ್ವಿಕ್ ಸಂಜೀವಿ ಸತೀಶ್ ಕುಮಾರ್ ಅವರು ಎದುರಾಳಿ ಸನೀತ್ ದಯಾನಂದ್ ಅವರನ್ನು 16-21, 21-15, 21-12 ಆಟಗಳಿಂದ ಸೋಲಿಸಿ ಸೆಮಿ ಫೈನಲ್ ಗೆ ಏರಿದರು.
ಹಾಗೆಯೇ ಭಾರತದ ಆರ್ಯಮಾನ್ ಟಂಡನ್ ಅವರನ್ನು ಎ.ಆರ್ ರೋಹನ್ ಕುಮಾರ್ ಆನಂದಾಸ್ ರಾಜ್‌ಕುಮಾರ್ ಅವರು 21-13, 18-21, 21-23 ಆಟಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದರು.
ಹಾಗೆಯೇ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ರೌನಕ್ ಚೌಹಾಣ್ ಅವರು ಅಂಶ್ ವಿಶಾಲ್ ಗುಪ್ತಾ ಅವರನ್ನು 21-13, 21-14 ಆಟಗಳಿಂದ ಪರಾಭವಗೊಳಿಸಿ ಸೆಮಿ ಫೈನಲ್‌ಗೆ ಏರಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ 14 ವರ್ಷದ ತನ್ವಿ ಪತ್ರಿ ಅಮರಿಕದ ಅಗ್ರ ಶ್ರೇಯಾಂಕಿತ ಇಶಿಕಾ ಜೈಸ್ವಾಲ್ ಅವರನ್ನು 21-19, 21-18 ಆಟಗಳಿಂದ ಸೋಲಿಸಿರುವುದು ದಾಖಲೆಯಾಯಿತು.
3ನೇ ಶ್ರೇಯಾಂಕಿತ ಮಾನ್ಸಿ ಸಿಂಗ್ ಅವರು ರುಜುಲಾ ರಾಮು ಅವರನ್ನು 21-18, 19-21, 21-13 ಆಟಗಳಿಂದ ಸೋಲಿಸಿದರು.
16ನೇ ಶ್ರೇಯಾಂಕಿತ ಸೂರ್ಯ ಚರಿಷ್ಮಾ ತಮಿರಿ ಅವರು 2ನೇ ಶ್ರೇಯಾಂಕಿತ ಶ್ರೇಯಾ ಲೆಲೆ ಅವರನ್ನು 17-21, 21-13, 23-21 ಆಟಗಳಿಂದ ಸೋಲಿಸಿದ್ದು ಮತ್ತೊಂದು ದಾಖಲೆ ಬರೆಯಿತು.
4ನೇ ರ್ಯಾಂಕ್‌ನ ಅಶ್ಮಿತಾ ಚಲಿತ ಅವರ ಎದುರು 8ನೇ ಶ್ರೇಯಾಂಕದ ಮೇಘನಾ ರೆಡ್ಡಿ ಮರೆಡ್ಡಿ 21-19, 21-13 ಆಟಗಳಿಂದ ಸೋಲಿಸಿದರು.
ಪುರುಷರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಥಾಯ್ಲೆಂಡಿನ ಫರಾನ್ಯು ಖೊಸಮಾಂಗ್ ಮತ್ತು ತನದನ್ ಪಂಪನಿಚ್ ಅವರ ಜೋಡಿಯು ರಷ್ಯಾದ ರೋಡಿಯನ್ ಅಲಿಮೊವ್ ಮತ್ತು ಮಕ್ಸಿಂ ಒಗ್ಲಬಿನ್ ಜೋಡಿಯನ್ನು 21-9, 21-18 ಆಟಗಳಿಂದ ಸೋಲಿಸಿತು.
ಥಾಯ್ಲೆಂಡಿನ ಚಲೋಂಪೆನ್ ಚರೊಯೆನ್‌ಕಿಟಮೊರ್ನ್ ಮತ್ತು ವೊರಪೊಲ್ ಥೊಂಗ್ಸಾ ಜೋಡಿಯು ಭಾರತದ ಅಕ್ಷನ್ ಶೆಟ್ಟಿ ಮತ್ತು ಶಂಕರ್ ಪ್ರಸಾದ್ ಉದಯಕುಮಾರ್ ಅವರ ಜೋಡಿಯನ್ನು 21-12, 21-12 ಆಟಗಳಿಂದ ಸೋಲಿಸಿತು.
ಮಹಿಳೆಯರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಥಾಯ್ಲೆಂಡಿನ ಹತಾಯ್‌ತಿಪ್ ಮಿಜಾದ್ ಮತ್ತು ನಪಪೊಕನ್ ತುಂಗಕಸ್ತಾನ್ ಜೋಡಿಯು 21-14, 21-8 ಆಟಗಳಿಂದ ಭಾರತದ ಸಾಕ್ಷಿ ಗಹ್ಲಾವಟ್ ಮತ್ತು ತನೀಶಾ ಸಿಗ್ ಜೋಡಿಯನ್ನು ಸೋಲಿಸಿ ಉಪಾಂತ್ಯ ಪ್ರವೇಶಿಸಿತು.
ಶ್ರೀನಿಧಿ ನಾರಾಯಣ್ ಮತ್ತು ರಿಶಿಕಾ ಉದಯಸೂರ್ಯನ್ ಜೋಡಿಯು ಆರತಿ ಸರಾ ಸುನಿಲ್ ಮತ್ತು ವರ್ಷಿಣಿ ವಿಶ್ವನಾಥ್ ಜೋಡಿಯನ್ನು 21-18, 21-19 ಆಟಗಳಿಂದ ಸೋಲಿಸಿತು.
ಪುರುಷರ ಡಬಲ್ಸ್‌ನಲ್ಲಿ ಸಿಂಗಾಪುರದ ಡೊನೊವಾನ್ ವಿಲಾರ್ಡ್ ವೀ ಮತ್ತು ಜಿಯಾ ಹೋ ಹೊವಿನ್ ವೋಂಗ್ ಜೋಡಿಯು ಥಾಯ್ಲೆಂಡಿನ ತನಾವಿನ್ ಮಾದೀ ಮತ್ತು ಫುತಿಮೆತ್ ಸೆಂಕುಂಟಾ ಜೋಡಿಯನ್ನು 21-19, 21-13 ಆಟಗಳಿಂದ ಪರಾಭವಗೊಳಿಸಿತು.
ಸಿಂಗಾಪುರದ ಟಾಪ್ ಸೀಡ್ ಎಂಗ್ ಕೀಟ್ ವೆಸ್ಲಿ ಕೋಹ್ ಮತ್ತು ಜನ್‌ಸೂಕ್ ಕುಬೊ ಜೋಡಿಯು ಭಾರತದ ಕಾರ್ತಿಕ್ ರಾಜ ಬಾಲಮುರುಗನ್ ಮತ್ತು ಪಿ. ಪಾರ್ಥ ವೈದ್ ಅವರ ಜೋಡಿಯನ್ನು 21-6, 18-21, 21-14 ಆಟಗಳಿಂದ ಪರಾಭವಗೊಳಿಸಿತು.
ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಅದಿತಿ ಭಟ್ ಮತ್ತು ಶರ್ವಾಣಿ ವಾಲೆಕರ್ ಜೋಡಿಯು ಸ್ವದೇಶದ ನೆಯ್ಸಾ ಕಾರಿಯಪ್ಪ ಮತ್ತು ಅನಘಾ ಅರವಿಂದ ಪೈ ಜೋಡಿಯನ್ನು 21-17, 21-10 ಆಟಗಳಿಂದ ಸೋಲಿಸಿ ಉಪಾಂತ್ಯ ಪ್ರವೇಶಿಸಿತು.
ಪುರುಷರ ಸಿಂಗಲ್ಸ್‌ನಲ್ಲಿ 12ನೇ ಶ್ರೇಯಾಂಕದ ತುಷಾರ್ ಸುವೀರ್ ಅವರನ್ನು 16ನೇ ಶ್ರೇಯಾಂಕದ ಪ್ರಣಯ್ ಶೆಟ್ಟಿಗಾರ್ ಅವರು 14-21, 21-14, 21-5 ಆಟಗಳಿಂದ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

