ಗುಂಪೆ ವಲಯದ ಅಕ್ಟೋಬರ್ ತಿಂಗಳ ಸಭೆ

Upayuktha
0


ಕಾಸರಗೋಡು: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಅಕ್ಟೋಬರ್ ತಿಂಗಳ ಸಭೆಯು ಭಾನುವಾರ (ಅ.5) ಸಂಜೆ 4.00 ಗಂಟೆಗೆ ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು. ಧ್ವಜಾರೋಹಣ, ಗುರುವಂದನೆ, ಗೋಸ್ತುತಿ, ಗುರುಪಾದುಕಾ ಸ್ತೋತ್ರ ಪಠನದೊಂದಿಗೆ ಸಭೆ ಆರಂಭವಾಯಿತು.


ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿಯನ್ನು ನೀಡಿದರು. 


ಮಂಡಲದಿಂದ ಬಂದ ವಿವಿಧ ಸೂಚನೆಗಳನ್ನು ಕಾರ್ಯದರ್ಶಿ ವಾಚಿಸಿದರು. ಮುಳ್ಳೇರಿಯ ಮಂಡಲದ ಕೋಶಾಧ್ಯಕ್ಷ ಪರಮೇಶ್ವರ ಭಟ್ ಪೆರ್ಮುಂಡ ಅವರು ಸಭೆಯಲ್ಲಿ ಭಾಗವಹಿಸಿ ವಿವಿಧ ಮಾಹಿತಿಗಳನ್ನು ನೀಡಿದರು. 


ಶ್ರೀ ಮಠದ ವಿವಿಧ ಯೋಜನೆಗಳಾದ ವಿಷ್ಣು ಸಹಸ್ರನಾಮ ಲೇಖನ ಯಜ್ಞ, ಬುತ್ತಿ ಯೋಜನೆ, ವೇದನಾದೋ ಗೃಹೇ ಗೃಹೇ, ಮುಷ್ಠಿಭಿಕ್ಷೆ ಇತ್ಯಾದಿಗಳ ಬಗ್ಗೆ ಹಾಗೂ ಮಾಡಬಹುದಾದ ವಿವಿಧ ಸೇವೆಗಳ ಕುರಿತು ಮಾಹಿತಿಯನ್ನು ನೀಡಲಾಯಿತು.


ಶಿಷ್ಯ ಹಿತಮ್ ಯೋಜನೆಯ ಮಾಹಿತಿ ಸಂಗ್ರಹಣೆಯನ್ನು ಶೀಘ್ರವಾಗಿ ಪೂರ್ತಿಗೊಳಿಸವುದು. ಮತ್ತು ಧೂಳೀ ಪೂಜೆಯ ಸಂದರ್ಭದಲ್ಲಿ ಸಮರ್ಪಣೆ ಮಾಡುವುದು ಎಂದುತೀರ್ಮಾನಿಸಲಾಯಿತು



16.10.2025 ರ ಗುರುವಾರ ಸ್ವರ್ಣ ಪಾದುಕಾ ಸಂಚಾರ ಗುಂಪೆ ಉಮೇಶ ಭಟ್ ಮನೆಗೆ ಬಂದು 17.10.2025 ಮನೆ ಮನೆ ಸಂಚಾರದ ಯಶಸ್ಸಿನ ಕುರಿತು ಚರ್ಚಿಸಿ ಸಮಯ ಸಾರಿಣಿಯನ್ನು ನಿರ್ಣಯಿಸಿ ತೀರ್ಮಾನ ಕೈಗೊಳ್ಳಲಾಯಿತು.


28-11 2025 ರಂದು ಗುರುವಾಯನಕೆರೆಯ ನಮ್ಮ ಮನೆಯಲ್ಲಿ ನಡೆಯಲಿರುವ ಆರಾಧನಾ ಮಹೋತ್ಸವದ ಕುರಿತು ಮಾಹಿತಿಯನ್ನು ನೀಡಲಾಯಿತು.


ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top