ಸ್ವಉದ್ಯಮದೆಡೆಗೆ ಹೆಚ್ಚಿನ ಆದ್ಯತೆ ಅಗತ್ಯ

Upayuktha
0


ಉಜಿರೆ: ಸ್ವ ಉದ್ಯಮ ಮೂಲಕ ವೃತ್ತಿ ಮಾರ್ಗ ಕಂಡುಕೊಳ್ಳುವುದರ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಉಜಿರೆಯ ಕ್ಲೌಡ್ ಕ್ಯಾಸಲ್ ಕೆಫೆಯ ಸಂಸ್ಥಾಪಕಿ ಶ್ರೇಯಾ ಶೆಟ್ಟಿ ಅಭಿಪ್ರಾಯಪಟ್ಟರು.


ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಬಿ. ವೋಕ್ ಇನ್ ರಿಟೇಲ್ ಮತ್ತು ಚೈನ್ ಸಪ್ಲೈ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ಆಯೋಜಿಸಲಾದ 'ಸ್ಟಿಮುಲೇಟಿಂಗ್ ಎಂಟರ್ಪ್ರೆನ್ಯೂರಿಯಲ್ ಸ್ಪಿರಿಟ್ 4.0' ಎಂಬ ಒಂದು ದಿನದ ಬೂಟ್ ಕ್ಯಾಂಪ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಅಳವಡಿಸಿಕೊಳ್ಳಬೇಕು, ಅದಕ್ಕನುಗುಣವಾಗಿ ಮುನ್ನಡೆಯುವದರೆಡೆಗೆ ಸದಾ ಗಮನಹರಿಸುತ್ತಿರಬೇಕು. ಹಲವು ಜವಾಬ್ದಾರಿಗಳನ್ನು ಒಟ್ಟಿಗೆ ನಿಭಾಯಿಸುವ ಕೌಶಲ್ಯಗಳನ್ನು ರೂಪಿಸಿಕೊಳ್ಳಬೇಕು. ಮಹಿಳೆಯರು ಉದ್ಯಮ ಸ್ಥಾಪಿಸುವಾಗ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಹಲವು ಮಂದಿ ಕುಗ್ಗಿಸಲು ಪ್ರಯತ್ನಿಸುತ್ತಾರೆ. ಆದರೆ ಅವೆಲ್ಲವನ್ನು ಲೆಕ್ಕಿಸದೆ ಮಹಿಳೆಯರು ಹೆಚ್ಚಾಗಿ ಸ್ವಉದ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ್ ಪಿ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ. ವೋಕ್ಇ ನ್ ರಿಟೇಲ್ ಮತ್ತು ಚೈನ್ ಸಪ್ಲೈ ಮ್ಯಾನೇಜ್ಮೆಂಟ್ ವಿಭಾಗದ ವಿಧ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸುವ ಈ ವಿಶೇಷ ಪ್ರಯತ್ನವು ನಿಜಕ್ಕೂ ಮೆಚ್ಚುವಂಥದ್ದು. ಜಗತ್ತಿನಲ್ಲಿರುವ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸಲು ತಮ್ಮ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉಜಿರೆಯ ರುಡ್‌ಸೆಟ್  ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಮಾತನಾಡಿ ಭಾರತದಲ್ಲಿ ನವೋದ್ಯಮಗಳಿಗೆ ಸರ್ಕಾರ ಮತ್ತು ಬ್ಯಾಂಕಿಂಗ್ ವಲಯಗಳಿಂದ ಹಲವಾರು ಹಣಕಾಸು ಸೌಲಭ್ಯಗಳು ಲಭ್ಯವಿದೆ ಎಂದರು.


ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಬೆಳೆಯುವಂತಾಗಬೇಕು ಎಂದು ಹೇಳಿದರು. ಒಂದು ದಿನದ ಈ ಕಾರ್ಯಕ್ರಮವು ಹಲವು ಯಶಸ್ವಿ ಉದ್ಯಮಿಗಳ ಮಾತುಗಳನ್ನು ಒಳಗೊಂಡಿತ್ತು, ವಿದ್ಯಾರ್ಥಿಗಳಿಗೆ ವ್ಯಾಪಾರ ಜಗತ್ತಿನ ಪ್ರಾಯೋಗಿಕ ಮಾಹಿತಿಗಳನ್ನು ನೀಡಲಾಯಿತು. ಶ್ರೀಮತಿ ಮೋನಿಕಾ ನೀಲೋಫರ್ ಡಿಸೋಜಾ, ಮರಿಕೆ ಸ್ವೀಟ್ಸ್ ಅಂಡ್ ಐಸ್ ಕ್ರೀಮ್ಸ್ ಸಂಸ್ಥಾಪಕ ಸುಹಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು.


ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥರಾದ ಅಶ್ವಿತ್ ಹೆಚ್.ಆರ್. ಕಾರ್ಯಕ್ರಮದ ಸಂಯೋಜಕರಾಗಿದ್ದರು. ಬಿ. ವೋಕ್ ವಿಭಾಗದ ವಿದ್ಯಾರ್ಥಿಗಳಾದ ದರ್ಶಿನಿ ಮತ್ತು ವರ್ಷ ಕಾರ್ಯಕ್ರಮ ನಿರೂಪಿಸಿ, ಪೂಜಿತ್ ಎನ್ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top