* ಗೋಸಂರಕ್ಷಣೆ- ಲೋಕಕಲ್ಯಾಣಕಾಗಿ ವಿಶ್ವಜನನಿಯ ವಿಶಿಷ್ಟ ಪೂಜೆ.
* ಶ್ರೀಗಳಿಂದ ಗೋ ಸಂದೇಶ- ಗಣ್ಯ ಮಾನ್ಯರಿಂದ ವಿಶೇಷ ಗೋಪೂಜೆ.
* ಗೋ ಗಾನಾಮೃತ - ಗೋಸೂಕ್ತ ಪಾರಾಯಣ- ಗೋಸೂಕ್ತ ಹವನ.
ಬೆಂಗಳೂರು: ಗೋಸಂರಕ್ಷಣೆ ಹಾಗೂ ಲೋಕಕಲ್ಯಾಣದ ಮಹಾಸಂಕಲ್ಪದೊಂದಿಗೆ ದೀಪಾವಳಿಯ ಪುಣ್ಯಪರ್ವದಲ್ಲಿ ವಿಶ್ವಜನನಿಯ ವಿಶಿಷ್ಟ ಪೂಜಾ ಕಾರ್ಯಕ್ರಮ 'ಗೋದೀಪ- ದೀಪಾವಳೀ ವಿಶೇಷ ಗೋಪೂಜೆ'ಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಾದ ಶ್ರೀರಾಮಾಶ್ರಮದಲ್ಲಿ ಅ. 22.ರಂದು ಬುಧವಾರ ಸಂಜೆ 5 ಗಂಟೆಯಿಂದ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೀಪಾವಳಿ ಗೋಪೂಜೆಯ ಗೋಸಂದೇಶವನ್ನು ಶ್ರೀಗಳು ಅನುಗ್ರಹಿಸಲಿದ್ದಾರೆ.
ಆಹ್ವಾನಿತ ಗಣ್ಯ-ಮಾನ್ಯ ದಂಪತಿಗಳಿಂದ ಏಕಕಾಲಕ್ಕೆ ವಿಶೇಷ ರೀತಿಯಲ್ಲಿ ಸಾಲಂಕೃತ ಗೋವುಗಳಿಗೆ ಪೂಜೆ ನಡೆಯಲಿದ್ದು, ಗೋಮಾತೆಯ ಅನುಗ್ರಹ ಪ್ರಾಪ್ತಿಗಾಗಿ ಗೋಸೂಕ್ತ ಪಾರಾಯಣ, ಗೋಸೂಕ್ತ ಹವನ ನಡೆಯಲಿದೆ. ಶಿವಶ್ರೀ ಸ್ಕಂದಪ್ರಸಾದ್ ಹಾಗೂ ತಂಡದವರಿಂದ 'ಗೋ ಗಾನಾಮೃತ' ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ನೂರಾರು ಮಾತೆಯರಿಂದ ಗೋಮಯ ಹಣತೆಯಲ್ಲಿ ಗೋ ಆರತಿ ನಡೆಯಲಿದ್ದು, ಬೆಳಗಿನಿಂದಲೇ ಸಾರ್ವಜನಿಕರಿಗೆ ಸಾಮೂಹಿಕ ಗೋಪೂಜೆಯನ್ನು ನಡೆಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಪಾರಂಪರಿಕ ರೀತಿಯಲ್ಲಿ ಗೋಪೂಜೆ ನಡೆಯಲಿದೆ.
ಶ್ರೀರಾಮಚಂದ್ರಾಪುರ ಮಠವು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಹತ್ತಾರು ಗೋಜಾಗರಣದ ಕಾರ್ಯಕ್ರಮಗಳನ್ನು ನಡೆಸಿದ್ದು, ದೇಶಾದ್ಯಂತ ಲಕ್ಷಾಂತರ ಗೋಪ್ರೇಮಿಗಳಿಗೆ ಪ್ರೇರಣೆಯನ್ನೂ, ಮಾರ್ಗದರ್ಶನವನ್ನೂ ಮಾಡಿದೆ. ಶ್ರೀಮಠದಿಂದ ನಡೆದ 'ವಿಶ್ವ ಗೋಸಮ್ಮೇಳನ'ವು ಗೋಜಾಗರಣಕ್ಕೆ ವೇದಿಕೆಯನ್ನು ಕಲ್ಪಿಸಿದರೆ, 'ವಿಶ್ವ ಮಂಗಲ ಗೋಗ್ರಾಮ ಯಾತ್ರೆ'ಯು ದೇಶಾದ್ಯಂತ 9 ಕೋಟಿ ಸಹಿಗಳನ್ನು ಸಂಗ್ರಹಿಸಿ, ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. 'ಮಂಗಲ ಗೋಯಾತ್ರೆ'ಯು ನಾಡಿನಾದ್ಯಂತ ಸಂಚರಿಸಿ ಕೋಟಿಗೂ ಅಧಿಕ ಗೋಸಂರಕ್ಷಣೆಯ ಹಕ್ಕೊತ್ತಾಯ ಪತ್ರಗಳನ್ನು ಸಂಗ್ರಹಿಸಿತ್ತು. ಇದಲ್ಲದೇ ಶ್ರೀಮಠದಿಂದ ನಡೆದ ಹತ್ತಾರು ಕಾರ್ಯಕ್ರಮಗಳು, ಗೋಸಂರಕ್ಷಣೆಗೆ ನಿರಂತರವಾಗಿ ನಡೆಯುತ್ತಿರುವ ಹತ್ತಾರು ಯೋಜನೆಗಳು, ಗವ್ಯೋತ್ಪನ್ನಗಳ ಮೂಲಕ ರೈತರಿಗೆ ಆರ್ಥಿಕ ಬಲ ತುಂಬುವ ಕಾರ್ಯಗಳು, ಗೋಸಂರಕ್ಷಣೆಯಲ್ಲಿ ನಿರತವಾಗಿರುವ ಶ್ರೀಮಠದ ಹತ್ತಾರು ಗೋಶಾಲೆಗಳು, ವಿಶ್ವದ ಪ್ರಥಮ ಗೋಬ್ಯಾಂಕ್, ವಿಶಿಷ್ಟ ಗೋಸ್ವರ್ಗ, ೩೦ಕ್ಕೂ ಅಧಿಕ ವಿಶಿಷ್ಟ ಭಾರತೀಯ ಗೋತಳಿಗಳ ಸಂರಕ್ಷಣಾ ವ್ಯವಸ್ಥೆ ಮುಂತಾದವುಗಳು ಶ್ರೀರಾಮಚಂದ್ರಾಪುರ ಮಠದ ವಿಶೇಷತೆಗಳಾಗಿದ್ದು, ಇದೀಗ ದೀಪಾವಳಿಯಂದು ವಿಶೇಷವಾಗಿ ಗೋಪೂಜೆಯ ಮೂಲಕ ಗೋಸಂರಕ್ಷಣೆಯ ಸಂದೇಶವನ್ನು ಸಾರಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗೋದೀಪ - ದೀಪಾವಳೀ ವಿಶೇಷ ಗೋಪೂಜೆಯ ಆಮಂತ್ರಣ ಪತ್ರಿಕೆಯನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿ, ಗೋಸಂರಕ್ಷಣೆಯ ಪುಣ್ಯಕಾರ್ಯದಲ್ಲಿ ಎಲ್ಲಾ ಗೋಪ್ರೇಮಿಗಳು ವಿಶೇಷವಾಗಿ ಭಾಗಿಗಳಾಗುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಅರುಣ್ ಶ್ಯಾಮ್, ಶ್ರೀಮಠದ ವಿತ್ತಾಧ್ಯಕ್ಷ ಗಣೇಶ್ ಜಿ.ಎಲ್, ಯೋಜನಾ ಖಂಡದ ಶ್ರೀಸಂಯೋಜಕ ವಿದ್ವಾನ್ ಜಗದೀಶ ಶರ್ಮಾ ಸಂಪ, ಲೋಕಸಂಪರ್ಕ ಖಂಡದ ಶ್ರೀಸಂಯೋಜಕ ರಾಮಚಂದ್ರ ಭಟ್ಟ ಕೆಕ್ಕಾರು ಮುಂತಾದವರು ಉಪಸ್ಥಿತರಿದ್ದರು. ಗೋದೀಪ ಕಾರ್ಯಕ್ರಮದ ಸಂಚಾಲಕ ವಾದಿರಾಜ ಸಾಮಗ ಮಾತನಾಡಿ, ವಿವಿಧ ಕ್ಷೇತ್ರಗಳ 10 ಗಣ್ಯ ದಂಪತಿಗಳಿಂದ ಗೋಪೂಜೆ ನಡೆಯಲಿದ್ದು, 10 ವಿವಿಧ ಭಾರತೀಯ ಗೋತಳಿಗಳಿಗೆ ಪೂಜೆ ಸಲ್ಲಲಿದೆ. ಆನಂತರ ನೂರಾರು ಮಾತೆಯರಿಂದ ಗೋ ಆರತಿ ನಡೆಯಲಿದ್ದು, ಶಿವಶ್ರೀ ಸ್ಕಂದಪ್ರಸಾದ್ ಹಾಗೂ ತಂಡದವರಿಂದ 'ಗೋ ಗಾನಾಮೃತ' ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಅಂದು ಬೆಳಗ್ಗೆಯಿಂದಲೇ ಸಾರ್ವಜನಿಕ ಗೋಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗಾಗಿ 9449595215 / 9483787215 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ ಆಮಂತ್ರಿತ ಗಣ್ಯರು
ಶ್ರೀಮತಿ ಜಯಶ್ರೀ ಪ್ರತಿನಿಧಿ
ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಪಿ.ಎಸ್. ದಿನೇಶ್ ಕುಮಾರ್
ವಿಶ್ರಾಂತ ಮುಖ್ಯ ನ್ಯಾಯಾಧೀಶರು, ಕರ್ನಾಟಕ ಉಚ್ಚನ್ಯಾಯಾಲಯ
ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದ
ಶ್ರೀ ತೇಜಸ್ವೀ ಸೂರ್ಯ
ಮಾನ್ಯ ಸಂಸದರು, ಬೆಂಗಳೂರು ದಕ್ಷಿಣ
ಶ್ರೀಮತಿ ಮಂಜುಳಾ ರವಿಸುಬ್ರಹ್ಮಣ್ಯ
ಶ್ರೀ ರವಿಸುಬ್ರಹ್ಮಣ್ಯ ಎಲ್. ಎ.
ಮಾನ್ಯ ಶಾಸಕರು
ಶ್ರೀಮತಿ ಸುಷ್ಮಾ ಅರುಣ್ ಶ್ಯಾಮ್, ನ್ಯಾಯವಾದಿಗಳು
ಡಾ| ಅರುಣ್ ಶ್ಯಾಮ್ ಎಮ್.
ಹಿರಿಯ ನ್ಯಾಯವಾದಿಗಳು
ಶ್ರೀಮತಿ ಬಿ. ವಿ. ರುಕ್ಮಾವತಿ
ಡಾ. ನಾ. ಸೋಮೇಶ್ವರ
ಖ್ಯಾತ ಲೇಖಕರು, ಚಿಂತಕರು
ಡಾ| ಆರತಿ ವಿ. ಬಿ.
ಸಂಸ್ಕೃತಿ ಚಿಂತಕರು
ಶ್ರೀ ಶಶಿಕುಮಾರ
ಶ್ರೀಮತಿ ರಾಗಿಣಿ ಶಾಸ್ತ್ರೀ
ವಿದ್ವಾನ್ ಶ್ರೀಕಂಠ ಶಾಸ್ತ್ರೀ
ವಿದ್ವಾಂಸರು
ಶ್ರೀಮತಿ ಶೃತಿ
ಶ್ರೀ ರಮೇಶ್ ದೊಡ್ಡಪುರ, ಸಂಪಾದಕರು, ವಿಕ್ರಮ ಪತ್ರಿಕೆ
ಶ್ರೀಮತಿ ಜಯಂತಿ
ಶ್ರೀ ಕುಮಾರ ಸುಬ್ರಹ್ಮಣ್ಯ ಜಾಗೀರ್ದಾರ್,
ಗೋ ಸೇವಕರು
ಶ್ರೀಮತಿ ಜಯಶ್ರೀ ಪ್ರಸಾದ
ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ಪಕಳಕುಂಜ
_______
ಗೋ ಗಾನಾಮೃತ - ಸಂಗೀತ ಕಾರ್ಯಕ್ರಮ
ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದ ಮತ್ತು ತಂಡದವರಿಂದ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ