ಸಿರಿಬಾಗಿಲು ಪ್ರತಿಷ್ಠಾನದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Upayuktha
0


ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಆಶ್ರಯದಲ್ಲಿ, ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ, ಮಂಗಳೂರು ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು ಇವರ ಸಹಯೋಗದೊಂದಿಗೆ ನಡೆದ ತಪಾಸಣಾ ಶಿಬಿರವನ್ನು ಮಣಿಪಾಲದ ಕೆ. ಎಂ. ಸಿ. ಆಸ್ಪತ್ರೆಯ ಮಕ್ಕಳ ರೋಗ ತಜ್ಞರು, ಹಿರಿಯ ವೈದ್ಯ ಡಾಕ್ಟರ್ ಸುನಿಲ್ ಮುಂಡ್ಕೂರು ಅವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.


ಗ್ರಾಮೀಣ ಪ್ರದೇಶದ ಜನರಿಗೆ ಇಂತಹ ಶಿಬಿರಗಳು ಅಗತ್ಯ. ಇಂತಹ ಶಿಬಿರದಲ್ಲಿ ಭಾಗವಹಿಸುವುದ ರಿಂದಾಗಿ ಅವಶ್ಯ ವಿದ್ದರೆ ಮುಂದಿನ ದಿನಗಳಲ್ಲಿ ನಗರ ಪ್ರದೇಶದ ದೊಡ್ಡ ಆಸ್ಪತ್ರೆಯಿಂದ ಪ್ರಯೋಜನವನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು. ಯಕ್ಷಗಾನದ ಪ್ರಧಾನ  ಕೇಂದ್ರವಾಗಿರುವಂತಹ ಸಿರಿಬಾಗಿಲು ಪ್ರತಿಷ್ಠಾನ ಈ ರೀತಿ ಚಟುವಟಿಕೆ ನಡೆಸುತ್ತಿರುವುದು ಸಂತೋಷ ವಿಷಯ. ಮುಂದೆಯೂ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು ಶುಭ ಹಾರೈಸಿದರು.


ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯ ಡಾ. ಜೋಹಾನ್ ಸನ್ನಿ, ಕನ್ಸಲೆಂಟ್ ಅಂಕಾಲಜಿಸ್ಟ್ ಇವರು ಕ್ಯಾನ್ಸರ್ ರೋಗದ ಲಕ್ಷಣಗಳು, ಯಾವ ರೀತಿ ಜಾಗ್ರತೆ ವಹಿಸಬೇಕು, ಯಾರು ಭಯಪಡಬೇಕಾದ ಅಗತ್ಯವಿಲ್ಲ, ಇಂದಿನ ದಿನಗಳಲ್ಲಿ ಚಿಕಿತ್ಸೆ ಲಭ್ಯ. ರೋಗಿಗಳು ಸ್ಪಂದಿಸಿದಲ್ಲಿ  ಗುಣಪಡಿಸಲು ಸಾಧ್ಯ ಎಂದರು.


ಮುಖ್ಯ ಅಥಿತಿಗಳಾಗಿ ಗೋಪಾಲಕೃಷ್ಣ, ಮೇಲ್ವಿಚಾರಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಸರಗೋಡು ವಲಯ ಮತ್ತು  ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅವರು ಭಾಗವಹಿಸಿ ಶುಭ ಹಾರೈಸಿದರು. ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ  ಸಾರ್ವಜನಿಕ ಸಂಪರ್ಕ ಅಧಿಕಾರಿ ಉದಯ ಜೆ. ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಮಂಗಳೂರು ಇದರ ಕಾಸರಗೋಡು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಿಷ್ಣುಪ್ರಸಾದ್, ರಂಜನ್ ರವರು ನೇತೃತ್ವ ವಹಿಸಿದರು. 150ಕ್ಕೂ ಹೆಚ್ಚು ನಾಗರಿಕರು ಈ ಶಿಬಿರದ ಪ್ರಯೋಜನವನ್ನು ಪಡೆದರು.


ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಫಲಾನುಭವಿಗಳಿಗೆ ಉಚಿತ ಔಷಧ ವಿತರಣೆ ನಡೆಯಿತು. ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಪ್ರಗತಿ ಬಂದು ಸ್ವಸಹಾಯ ಸಂಘಗಳು ಒಕ್ಕೂಟ ಕಾಸರಗೋಡು ವಲಯ, ಎಫ್. ಎಚ್.ಸಿ. ಮಧೂರು, ಕುತ್ಯಾಳ ನವ ಜೀವನ ಸಮಿತಿ ಕೂಡ್ಲು, ಶ್ರೀ ಮಹೇಶ್ವರಿ ಮಹಿಳಾ ಮಂಡಲ ಪುಳ್ಕೂರು ಸಿರಿಬಾಗಿಲು, ಶಿವನಾರಾಯಣ ವಾಟ್ಸಪ್ ಬಳಗ ಮುಂತಾದವರು ಸಹಕಾರವಿತ್ತರು. ಪ್ರತಿಷ್ಠಾನದ ಅದ್ಯಕ್ಷರಾದ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀರಾಜ ಮಯ್ಯ ನಿರೂಪಿಸಿದರು, ಜಗದೀಶ ಕೆ. ಕೂಡ್ಲು ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top