ದೀಪಾವಳಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಇದು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯುವ ಈ ಬೆಳಕು ಚೆಲ್ಲುವ ಒಂದು ಹಬ್ಬ. ಪ್ರತಿಯೊಬ್ಬರೂ ತಮ್ಮ ಮನೆಯ ಸದಸ್ಯರ ಇಷ್ಟಾರ್ಥ ಸಿದ್ಧಿಗಾಗಿ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಹಬ್ಬದಂದು ಗೂಡುದೀಪ ತಯಾರಿಸಿ ಮನೆ ತುಂಬಾ ಅಲಂಕಾರ ಮಾಡುತ್ತಾರೆ, ಬಣ್ಣಬಣ್ಣದ ಗೂಡುದೀಪಗಳನ್ನು ತಯಾರಿಸಿ ಮನೆ ಬೆಳಕಿನಿಂದ ಕೂಡಿರುತ್ತದೆ.
ಮೊದಲನೆಯ ದಿನ ಧನ್ ತೇರಸ್ ದೀಪಾವಳಿ ಆರಂಭದ ದಿನ. ಜನರು ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಎರಡನೆಯ ದಿನ: ನರಕಚತುರ್ದಶಿ
ಜನರು ಬೇಗನೆ ಎದ್ದು ಸ್ನಾನ ಮಾಡುವ ಮೊದಲು ಸುಗಂಧದ್ರವ್ಯವನ್ನು ಹಚ್ಚುತ್ತಾರೆ, ಎಣ್ಣೆ ಸ್ನಾನ ಮಾಡುತ್ತಾರೆ. ಈ ದಿನದಂದು ಪಟಾಕಿ (ಮದ್ದು ಗುಂಡು) ಸ್ವಲ್ಪ ಪ್ರಮಾಣದಲ್ಲಿ ಬಳಸಿ ಆಚರಿಸಲಾಗುತ್ತದೆ.
ಮೂರನೇ ದಿನ: ಲಕ್ಷ್ಮೀ ಪೂಜೆ.
ಲಕ್ಷ್ಮೀ ಪೂಜೆಯನ್ನು ಅತ್ಯಂತ ಮುಖ್ಯವಾಗಿ ಮೂರನೆದಿನ ಮಾಡಲಾಗುತ್ತದೆ. ಲಕ್ಶ್ಮೀ ದೇವಿಯನ್ನು ಆರಾಧಿಸಿ ನಮ್ಮ ಕಷ್ಟಗಳನ್ನು ದೂರ ಮಾಡುವಲ್ಲಿ ಪೂಜೆಯನ್ನು ಇಟ್ಟುಕೊಳ್ಳುತ್ತಾರೆ, ಎಣ್ಣೆ ಸ್ನಾನ ಮಾಡಿ ಹೂವು ಹಣ್ಣು ದ್ರವ್ಯಗಳನ್ನು ನೀಡಿ ದೇವಿಯನ್ನು ಆರಾಧಿಸುತ್ತಾರೆ.
ನಾಲ್ಕನೆಯ ದಿನ:
ಬಲಿಪಾಡ್ಯಮಿ ಎಲ್ಲರೂ ಮನೆಮನೆಗಳಲ್ಲಿ ದೀಪ ಬೆಳಕನ್ನು ನೀಡಿ ಶಾಂತಿ ನೆಮ್ಮದಿಯಿಂದ ಬಾಳುವಂತೆ ಆಗಲಿ. ವಿಶಿಷ್ಟವಾಗಿ ಗೋವುಗಳನ್ನು ಪೂಜಿಸುತ್ತಾರೆ. ದೀಪಾವಳಿಯ ನಂತರ ಬರುವ ಹಬ್ಬವೇ ಬಲಿಪಾಡ್ಯಮಿ. ಆ ದಿನ ಅಂಗಡಿಯನ್ನು ಬಹಳ ಅಲಂಕಾರದಿಂದ ಪೂಜೆಯನ್ನು ಮಾಡುತ್ತಾರೆ. ಬಲಿಪಾಡ್ಯಮಿ ಎಂದರೆ ಅಮಾವಾಸ್ಯೆ ಮರುದಿನ ಭಗವಾನ್ ವಿಷ್ಣು, ವಾಮನನು ರೂಪದಲ್ಲಿ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ದಿನವನ್ನು ಬಲಿಪಾಡ್ಯಮಿ ಎಂದು ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬ ಹಿಂದೂ ಧರ್ಮದಲ್ಲಿ ಆಚರಿಸುವ ಬೆಳಕಿನ ಹಬ್ಬ. ಈ ಬೆಳಕು ನಮ್ಮ ಬಾಳನ್ನು ಬೆಳಗಿಸುತ್ತದೆ. ದೀಪಾವಳಿ ಹಬ್ಬ ಎಂದರೆ ಪ್ರತಿಯೊಬ್ಬರಿಗೂ, ಮುದುಕರಿಂದ ಮಕ್ಕಳವರೆಗೂ ಬಹಳ ಇಷ್ಟವಾದ ಹಬ್ಬವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಧರ್ಮವೂ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ. ಮನೆಯನ್ನು ಅಲಂಕರಿಸಿ ಮನೆಯೆದುರು ರಂಗೋಲಿ ಹಾಕಿ ದೀಪದಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ನಂತರ ಈ ಬೆಳಕು ನಮ್ಮ ಬಾಳನ್ನು ಬೆಳಗಿಸುತ್ತದೆ. ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಖ್ಯವಾಗಿ ಪಟಾಕಿ ಇಲ್ಲದೆ ಎಲ್ಲೂ ಹಬ್ಬವನ್ನು ಆಚರಿಸುವುದಿಲ್ಲ.
ಮಕ್ಕಳು ಪಟಾಕಿ ತಂದು ಇನ್ನಷ್ಟು ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸಿ ಮನೆ ತುಂಬಾ ನಗುತ್ತಾ ಓಡಾಡುತ್ತಾರೆ. ಮನೆ ತುಂಬಾ ದೀಪದಿಂದ ಅಲಂಕರಿಸಿದರೆ ಸಮೃದ್ಧಿ, ಶಾಂತಿ, ಆರೋಗ್ಯ ಸಿದ್ಧಿಯಾಗುತ್ತದೆ ಎಂಬುದು ಹಿರಿಯರ ಅಭಿಪ್ರಾಯ. ದೀಪಾವಳಿ ಹಬ್ಬದಂದು ಗೂಡುದೀಪ ತಯಾರಿಸಿ ಮನೆ ಬೆಳಕಿನಿಂದ ಕೂಡಿರುತ್ತದೆ. ಕರ್ನಾಟಕದಲ್ಲಿ ದೀಪಾವಳಿ ಹಬ್ಬದಂದು ಸಿಹಿ ಖಾರ ತಿಂಡಿಗಳನ್ನು ಮಾಡುತ್ತಾರೆ. ಮೈಸೂರು ಪಾಕ್, ಲಡ್ಡು, ಪಾಯಸ ತಯಾರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಗಿನಕಾಯಿ ತುರಿ ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅವಲಕ್ಕಿ ಒಗ್ಗರಣೆ ಮಾಡುತ್ತಾರೆ. ಅಕ್ಕಿಯನ್ನು ಬಳಸಿ ಮಾಡುವ ತಿಂಡಿಯೇ ವಿಶೇಷವಾಗಿದೆ.
ದೀಪಾವಳಿಯನ್ನು ಆಚರಿಸುವುದು ಯಾಕೆಂದರೆ ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದು ಮೇಲೆ ಒಳ್ಳೆಯದನ್ನು ಕಾಣಬೇಕು.
ಅಜ್ಞಾನವನ್ನು ಕಳೆದು ಜ್ಞಾನದ ಕಡೆಗೆ ಬೆಳಗುವುದು. ಇದು ಸಮೃದ್ಧಿಯ ಸಂಕೇತವಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆ: ಹಿರಣ್ಯಾಕ್ಷ ಎಂಬ ಅಸುರನು ಭೂದೇವಿಯನ್ನು ಅಪಹರಿಸಿ ಅವಳನ್ನು ಸಮುದ್ರದ ಅಡಿಯಲ್ಲಿ ಬಂಧಿಸಿದ. ಇದರಿಂದ ಭೂದೇವಿಯು ತನ್ನನ್ನು ರಕ್ಷಿಸಿಕೊಳ್ಳಲು ವಿಷ್ಣುವನ್ನು ಬೇಡಿಕೊಂಡಳು. ವಿಷ್ಣು ಭೂಮಿಯನ್ನು ರಕ್ಷಿಸುವುದಕ್ಕೆ ಮತ್ತೊಂದು ವರಾಹ ರೂಪವನ್ನು ತಾಳುತ್ತದೆ. ಇದು ಸಮುದ್ರಕ್ಕೆ ಹಾರಿ ನರಕಾಸುರನ ವಧೆಯನ್ನು ಮಾಡುತ್ತದೆ.ನರಸಿಂಹನ ಅವತಾರದಲ್ಲಿ ಶ್ರೀ ವಿಷ್ಣುವಿನಿಂದ ಹತನಾದ ಹಿರಣ್ಯಕಷಿಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಮಹಾಬಲಿ.
ಅಸುರ ಕುಲದಲ್ಲಿ ಹುಟ್ಟಿದ ವಿಷ್ಣುಭಕ್ತ ಪ್ರಹ್ಲಾದನಂತೆಯೇ ಮಹಾಬಲಿಯೂ ಕೂಡ ವಿಷ್ಣುಭಕ್ತನೇ ದೇವಾನುದೇವತೆಗಳನ್ನು ಸೋಲಿಸಿ ಮೂರು ಲೋಕಗಳನ್ನು ಆಳತೊಡಗುತ್ತಾನೆ. ಆ ಸಂದರ್ಭದಲ್ಲಿ ಮಹಾವಿಷ್ಣುವಿನ ಮೊರೆಹೋಗುತ್ತಾರೆ. ಬಲಿಚಕ್ರವರ್ತಿಯು ತುಳುನಾಡನ್ನು ಆಳಿದ್ದ ಚಕ್ರವರ್ತಿ, ವರ್ಷಕ್ಕೊಮ್ಮೆ ಬರುವ ಬಲಿಯನ್ನು ಕರೆಯುವ ಚರಣಯೇ "ಬಲೀಂದ್ರ ಲೆಪ್ಪು" ಕತ್ತಲಾಗುತ್ತಿದ್ದಂತೆ ಅಂಗಳದ ಸುತ್ತಲೂ ತೆಂಗಿನ ಗೆರಟೆಗೆ ಎಣ್ಣೆ ಹಾಕಿ ದೀಪವನ್ನು ಬೆಳಗಲಾಗುತ್ತದೆ.
ಮನೆಯ ಗಂಡಸರು ಗದ್ದೆಯಬದಿ ಬಿದಿರಿನ ಕೋಲಿಗೆ ಬಟ್ಟೆಯನ್ನು ಸಹ ಎಣ್ಣೆನ್ನು ಹಚ್ಚಿದ ದೊಂದಿಯನ್ನು ಉರಿಸುತ್ತಾರೆ. ನಂತರ ಬಲೆಕಿ ಮರದ ಅಡಿಯಲ್ಲಿ ಗೆರಸೆಯಲ್ಲಿ ತೆಂಗಿನಕಾಯಿ, ಅವಲಕ್ಕಿ ಗಟ್ಟಿ ಹಾಕಿ ಬಲೀಂದ್ರ ಕೂ... ಕೂ...ಕೂ... ಎಂದು ಮೂರು ಬಾರಿ ಬಲೀಂದ್ರನನ್ನು ಕರೆಯುತ್ತಾರೆ. ನಂತರ ಗೋವಿನ ಹಟ್ಟಿಗೆ ತೆರಳಿ ಗೋವಿಗೆ, ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡುತ್ತಾರೆ. ಎಲ್ಲಾ ಹಸುಗಳ ಮ್ಯೆತೊಳೆದು ಹೂಹಾರ ಹಾಕಿ ಪೂಜಿಸುತ್ತಾರೆ. ಗೋವಿಗೆ ಅಕ್ಕಿಯಲ್ಲಿ ತಯಾರಿಸಿದ ದೋಸೆ ಅಥವಾ ಗಟ್ಟಿಯನ್ನು ನೀಡಲಾಗತ್ತದೆ.
- ಶಿವಾನಿ ಕೊಡಂಗಾಯಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


