ಡಾ. ರಾಮಕೃಷ್ಣ ಭಟ್ ದೈತೋಟ ನಿಧನ

Upayuktha
0


ಮಂಗಳೂರು: ಪಾಣಾಜೆ, ದೈತೋಟ ವೈದ್ಯ ಶಂಕರನಾರಾಯಣ ಭಟ್ಟರ ಪುತ್ರ, ಶಂಪಾ ದೈತೋಟ ಅವರ ಸಹೋದರ ಡಾ. ರಾಮಕೃಷ್ಣ ಭಟ್ (ಮುಕುಂದ) ಅವರು ಸೋಮವಾರ ಸಂಜೆ ಉಡುಪಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.


ಕೆಲವು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಪೆಟ್ಟಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ವೈದ್ಯರು ಹಾಗೂ ಕೃಷಿಕರಾಗಿದ್ದ ಅವರು ಪತ್ನಿ ಶ್ರೀಮತಿ ಭವಾನಿ  ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.


ಡಾ. ರಾಮಕೃಷ್ಣ ಭಟ್ ಅವರು ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕೃಷಿಕರಾಗಿ ತಮ್ಮ ಹುಟ್ಟೂರಿನ ತೋಟವನ್ನು ನೋಡಿಕೊಳ್ಳುತ್ತಿದ್ದರು.


ಹೆಸರಾಂತ ಪಾಣಾಜೆ ದೈತೋಟ ವೈದ್ಯ ಮನೆತನದಲ್ಲಿ ಜನಿಸಿದ್ದ ಅವರು ದಿವಂಗತ ಪಾಣಾಜೆ ಪಂಡಿತ ವೈದ್ಯ ಶಂಕರನಾರಾಯಣ ಭಟ್ಟರ ತೃತೀಯ ಪುತ್ರ. ದಿವಂಗತ ಶಂಪಾ ದೈತೋಟ, ದಿವಂಗತ ಪಿ.ಎಸ್ ವೆಂಕಟರಾಮ ದೈತೋಟ, ಚಂದ್ರಶೇಖರ ದೈತೋಟ ಹಾಗೂ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಇವರ ಸಹೋದರರು. ಹೆಸರಾಂತ ವೈದ್ಯೆ ಡಾ. ಸಾವಿತ್ರಿ ದೈತೋಟ, ದಿವಂಗತ ಡಾ. ವೆಂಕಟೇಶ್ವರಿ ದೈತೋಟ, ಹಾಗೂ ಶಾರದಾ ದೈತೋಟ ಇವರ ಸಹೋದರಿಯರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top