ಸಂಸ್ಕೃತಿ, ವಿಜ್ಞಾನಕ್ಕೆ ಮಹತ್ವ: ದೀಪಕ್ ರೈ ಪಾಣಾಜೆ
ನಂತೂರು: ಇಂದು ಸಂಸ್ಕೃತಿ ಮತ್ತು ವಿಜ್ಞಾನಕ್ಕೆ ಮಹತ್ವ ನೀಡಲಾಗಿದೆ. ಕಲಾ ಪ್ರದರ್ಶನವೂ ಅಗತ್ಯ. ಈ ನಿಟ್ಟಿನಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆ ಶಿಕ್ಷಣ, ಸಂಸ್ಕೃತಿ, ಕಲೆ, ವಿಜ್ಞಾನಕ್ಕೆ ಮಹತ್ವ ನೀಡಿದೆ ಎಂದು ಚಲನಚಿತ್ರ ನಟ ದೀಪಕ್ ರೈ ಪಾಣಾಜೆ ಹೇಳಿದರು.
ಅವರು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಅಂತರ್ ಶಾಲೆ ಸಾಂಸ್ಕೃತಿಕ, ವಿಜ್ಞಾನ ಉತ್ಸವ ಉದ್ಘಾಟಿಸಿ, ಮಾತನಾಡಿದರು.
ಬಿಎಎಸ್.ಎಫ್.ನಿವೃತ್ತ ಜನರಲ್ ಮೆನೇಜರ್ ರಾಜಶೇಖರ ಭಟ್ ಕಾಕುಂಜೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ಗೆಲುವು ಸಾಧಿಸಿದರೆ ಸಾಲದು. ಸೋತವರನ್ನು ಕಡೆಗಣಿಸಬಾರದು. ಈ ವೇದಿಕೆಯಲ್ಲಿ ಸೋಲು ಗೆಲುವಿನ ಚಿಂತೆ ಬಿಟ್ಟು ಮುಂದಿನ ಜೀವನಕ್ಕೆ ಅಳವಡಿಸಬಹುದಾದ ಅಂಶಗಳನ್ನು ಅರಿತುಕೊಳ್ಳಬೇಕು ಎಂದರು.
ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶಕೀಲಾ ಕಾವ, ಪಿಟಿಎ ಅಧ್ಯಕ್ಷ ರಾಜಗೋಪಾಲ ಜಿ., ಸಂಸ್ಥೆ ಕಾರ್ಯಾಧ್ಯಕ್ಷ ಗಣೇಶ ಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಸಹಕಾರ್ಯದರ್ಶಿ ಎಂ.ಟಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಸಂದೀಪ್ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕಿ ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ವೀಣಾ ವಂದಿಸಿದರು.
ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದಲ್ಲಿ ಸಂಸ್ಥೆ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ಈ ಉತ್ಸವವನ್ನು ಅರ್ಥಪೂರ್ಣವಾಗಿಸಿದರು. ಇದೇ ರೀತಿಯಲ್ಲಿ ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಹಲವು ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದರು.
ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಉತ್ತರ ವಲಯದ ಅಧ್ಯಕ್ಷ ಶ್ರೀನಿವಾಸ ಕಿಣಿ ಅವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾ ದರ್ಶನಕ್ಕೆ ಇದು ಅಭೂತಪೂರ್ವ ವೇದಿಕೆಯಾಗಿದೆ. 33 ಶಾಲೆಯ ಮಕ್ಕಳು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ಲಭಿಸಿದೆ. ಆದರೆ ಸೋತವರು ಮತ್ತಷ್ಟು ಸಾಧನೆ ಮಾಡಿ, ಮತ್ತೊಂದು ಕಡೆ ಮಹತ್ಸಾಧನೆ ಮಾಡಬೇಕು ಎಂದರು.
ಗ್ರಾಮರಾಜ್ಯ ಶ್ರೀಸಂಯೋಜಕ ಕೃಷ್ಣಪ್ರಸಾದ್ ಅಮ್ಮಂಕಲ್ಲು ಅವರು ಮಾತನಾಡಿ, ನಮ್ಮ ದೇಶ ಪ್ರಗತಿಯನ್ನು ಸಾಧಿಸಿದೆ. ಯುವಕರು ಹೆಚ್ಚು ತೊಡಗಿಸಿಕೊಂಡು ಎಲ್ಲಾ ವಿಭಾಗಗಳಲ್ಲಿ ಮುಂಚೂಣಿಗೆ ಬರಬೇಕು. ಶ್ರೀ ಭಾರತೀ ಸಮೂಹ ಸಂಸ್ಥೆಯು ಪ್ರತೀ ಸಂದರ್ಭದಲ್ಲಿಯೂ ಧನಾತ್ಮಕ ಬೆಳವಣಿಗೆ ಸಾಧಿಸಿದೆ. ಈ ಉತ್ಸವ ಬಹಳಷ್ಟು ಮೆರುಗು ತಂದಿದೆ ಎಂದು ಹೇಳಿದರು.
ಎಂ.ಸಿ.ಎಫ್. ನಿವೃತ್ತ ಜಂಟಿ ಜನರಲ್ ಮೆನೇಜರ್ ಉಮೇಶ್ ಭಟ್ ಕೆ.ವಿ., ಪಿಟಿಎ ಉಪಾಧ್ಯಕ್ಷ ಬಾಲಕೃಷ್ಣ ಭಟ್, ಪ್ರಾಂಶುಪಾಲ ಸಂದೀಪ್ ಆಚಾರ್ಯ ಮತ್ತಿತರರು ಭಾಗವಹಿಸಿದ್ದರು.
ಈ ಉತ್ಸವದಲ್ಲಿ 33 ಶಾಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇಡೀ ದಿನ ಅತ್ಯಂತ ಆಕರ್ಷಣೀಯವಾದ ಮತ್ತು ಎಡೆಬಿಡದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಭ್ರಮಪಟ್ಟರು. ಭವ್ಯ ವೇದಿಕೆ, ಅಚ್ಚುಕಟ್ಟಾದ ವ್ಯವಸ್ಥೆ, ಶುಚಿರುಚಿಯಾದ ಊಟೋಪಚಾರ, ಅನಂತಶ್ರೀ ಗೋಶಾಲೆಯ ಮುಂಭಾಗದಲ್ಲಿ ಸೆಲ್ಫಿ ಕಾರ್ನರ್, ದ್ವಾರಾದಿ ಅಲಂಕಾರಗಳು ಶ್ಲಾಘನೆಗೊಳಗಾಯಿತು.
ಉಪನ್ಯಾಸಕಿ ಅಶ್ವಿನಿ ಸ್ವಾಗತಿಸಿದರು. ಮಲ್ಲಿಕಾ, ವೀಣಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕಿ ಸೌಮ್ಯಾ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಅಕ್ಷತಾ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

 
 
 
 
 
 
 
 
 
 
 

 
