ಸಮಾಜದಲ್ಲಿ ಗೌರವಯುತ ಕಲೆ ಭರತನಾಟ್ಯ: ವಿದ್ವಾನ್ ಬಾಲಕೃಷ್ಣ ಮಾಸ್ಟರ್

Chandrashekhara Kulamarva
0


ಮಂಗಳೂರು: ಭರತನಾಟ್ಯವು ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಲ್ಲ ಮನುಷ್ಯನ ಮನಸ್ಸಿನ, ಆತ್ಮಶುದ್ಧಿಗಾಗಿ ದೇವತಾ ಸ್ವರೂಪಿ ಕಲೆಯಾಗಿದ್ದು ಸಮಾಜದಲ್ಲಿ ಗೌರವ ಯುತವಾದ ಮನುಷ್ಯನಿಗೆ ಗೌರವ ಸಿಕ್ಕುವ ಕಲೆ ಭರತನಾಟ್ಯ ಎಂದು ನಾಟ್ಯನಿಲಯಂ ಮಂಜೇಶ್ವರ ಇದರ ನೃತ್ಯ ಗುರು ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ನುಡಿದರು.


ಅವರು ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇಲ್ಲಿ ನಾಟ್ಯಾಚಾರ್ಯ ಮೋಹನ ಕುಮಾರ್ ನವತ್ಯುತ್ಸವ ಸರಣಿ 22ನೇ ನೃತ್ಯ ಮಾಲಿಕೆಯ ಮುಖ್ಯ ಅತಿಥಿಯಾಗಿದ್ದರು. ಗುರು ಶಿಷ್ಯ ಪರಂಪರೆ ಇಂದು ಕಾಣಸಿಗುವುದು ಇಲ್ಲೆ. ಗುರುವಿನ ಮಾರ್ಗದರ್ಶನದಲ್ಲಿ ನೃತ್ಯ ಅಭ್ಯಾಸ ಮಾಡಿದಾಗ ಮಾತ್ರ ಅದೇ ಶಾಶ್ವತ ಎಂದರು. ಗುರುಗಳಾದ ಉಳ್ಳಾಲ್ ಮೋಹನ ಕುಮಾರ್ ಶುಭ ಹಾರೈಸಿದರು.


ವಿದುಷಿ ರಾಜಶ್ರೀ ಉಳ್ಳಾಲ್ ಧನ್ಯವಾದ ನೀಡಿದರು. ಗುರು ಶ್ರೀಧರ ಹೊಳ್ಳ ನಿರೂಪಿಸಿದರು. ಮಾಸ್ಟರ್ ಪ್ರದ್ಯುಮ್ನ ಇವರು ಮನೋಜ್ಞವಾದ ನೃತ್ಯ ಪ್ರದರ್ಶನ ನೀಡಿದರು. ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ಪ್ರತಿಮಾ ಶ್ರೀಧರ್, ಡಾ. ಅಶ್ವಿನ್, ಶಾಲಿನಿ, ಶಾಲಿನಿ ಬಾಲಕೃಷ್ಣ ವಿದುಷಿ ಚಂದ್ರಿಕಾ ಮೊದಲಾದವರು ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top