ಕೆಬಿಎಂಕೆ ಕೊಂಕಣಿ ಮುಂದಾಳುಗಳ ಸಭೆಯಲ್ಲಿ ಟೈಟಸ್ ನೊರೊನಾ ಆಶಯ
ಮಂಗಳೂರು: ಭಾಷೆಗಳ ಬಗ್ಗೆ ಕೆಲಸ ಮಾಡುವ ಮುನ್ನ ಅದರಲ್ಲಿ ಕೆಲಸ ಮಾಡುವವರು ಒಬ್ಬರನ್ನು ಒಬ್ಬರು ಅರಿತು ಪ್ರೀತಿಯಿಂದ ಸಹಕಾರಿ ಆಗಬೇಕು. ಇಲ್ಲವಾದರೆ ನೀರಿನ ನಡುವಿನ ಕದ್ರುಗಳ ಹಾಗೆ ಆಗಿ ಅವರನ್ನು ಜೋಡಿಸುವ ದೋಣಿ ಕೂಡ ಇಲ್ಲದೆ ಎಲ್ಲಾ ವ್ಯರ್ಥವಾಗಿ ಹೋಗುತ್ತದೆ ಎಂದು ಅಖಿಲಭಾರತ ಕೊಂಕಣಿ ಪರಿಷದ್ ಗೋವಾದ ಉಪಾಧ್ಯಕ್ಷ ಮತ್ತು ರಾಹುಲ್ ಜಾಹಿರಾತು ಸಂಸ್ಥೆಯ ಸಂಸ್ಥಾಪಕ ಟೈಟಸ್ ನೊರೊನಾ ನುಡಿದರು.
ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಆಯೋಜಿಸಿದ ತಮ್ಮ ಕಾರ್ಯಕಾರಿ ಸಭೆ ಮತ್ತು ಕೊಂಕಣಿ ಮುಖಂಡರ ಮುಲಾಖಾತ್ ಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
ಕೆಬಿಎಂಕೆ ಕಾರ್ಯಕಾರಿ ಸಮಿತಿಯ ಆಹ್ವಾನಿತ ಸದಸ್ಯರು ,ಎಸ್ ಎಲ್ ಶೇಟ್ ಡೈಮಂಡ್ ಜೂವೆಲ್ಲರ್ಸ್ ಮಾಲಕರಾದ ಪ್ರಶಾಂತ್ ಶೇಟ್ ಮಾತನಾಡಿ, ಸೌಹಾರ್ದ ಮಾಡಲು ಒಂದು ಹೆಜ್ಜೆ ನಾವು ಮೊದಲು ಇಟ್ಟರೆ ಬೇಗ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ ಎಂದರು.
ಕೊಂಕಣಿಗೆ ಕೇಂದ್ರ ಸರಕಾರದ ಸಲಹಾ ಸಮಿತಿಯ ಸಂಚಾಲಕ ಮೆಲ್ವಿನ್ ರೊಡ್ರಿಗಸ್ ಮಾತನಾಡಿ, ತಾನು ಸಹ ಕಾರ್ಯದರ್ಶಿ, ಕಾರ್ಯದರ್ಶಿ, ಸಮ್ಮೇಳನದ ಜನರಿಗೆ ಸಹಾಯದಿಂದ ಸಲಹುವ ಹಲವು ನೆನಪುಗಳು ಇವೆ.ಕೆಬಿಎಂಕೆ ಕರ್ನಾಟಕ ಒಂದು ಪ್ರಮುಖ ಕೊಂಕಣಿ ಸಂಸ್ಥೆ ಸರಕಾರದ ಎಲ್ಲಾ ಸಹಾಯ ಪಡೆಯಲು ಯೋಗ್ಯವಾದ ಸಂಸ್ಥೆ ಎಂದು ಹೇಳಿದರು.
ನವೆಂಬರ್ 22,23 ಕೇರಳದಲ್ಲಿ ನಡೆಯುವ ಆಖಿಲ ಭಾರತ ಕೊಂಕಣಿ ಸಮ್ಮೇಳನದ ಮಾಹಿತಿಯನ್ನು ಹೆನ್ರಿ ಮೆಂಡೊನ್ಸಾ ನೀಡಿದರು.
ಹಿರಿಯ ಕೆಬಿಎಂಕೆ ಕಾರ್ಯಕಾರಿ ಸದಸ್ಯರು ಆದ ಗೀತಾ ಕಿಣಿ ಮಾತನಾಡಿ, ತಾನು ಎಲ್ಲಾ ಹುದ್ದೆಯನ್ನು ನೋಡಿದ್ದೇನೆ. ಕೊಂಕಣಿ ಮಾತೃಭಾಷೆ ನನ್ನ ತಾಯಿಗೆ ಸೇವೆ ಮಾಡಿದ ಹಾಗೆ ಮಾಡಿದ್ದೇನೆ ಎಂದರು.
ಕೆ ವಸಂತ ರಾವ್ ಅಧ್ಯಕ್ಷತೆ ವಹಿಸಿ ಶುಭಕೋರಿದರು.
ಮೀನಾಕ್ಷಿ ಪೈ, ಪ್ರಸಾದ್ ಚಂದ್ರ ಶೆಣೈ, ಜೂಲಿಯೆಟ್ ಫೆರ್ನಾಂಡೀಸ್ ಶಾಂತಿ ವೆರೊನಿಕಾ, ಎಡೊಲ್ಫ ಡಿಸೋಜ, ಝೀನಾ ಫೆರ್ನಾಂಡೀಸ್, ಮತ್ತು ಸುರೇಶ್ ಶೆಣೈ,ಲಾರೆನ್ಸ್ ಪಿಂಟೊ ಭಾಗವಹಿಸಿದರು.
ಕೊಂಕಣಿ ಮುಖಂಡರಾದ ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಪಿಂಟೊ, ದಾಯ್ಜಿ ದುಬಾಯ್ ಮಂಗಳೂರು ಅಧ್ಯಕ್ಷ ಪ್ರವೀಣ್ ತಾವ್ರೊ, ದಾಯ್ಜಿವರ್ಲ್ಡ್ ನಿರ್ಮಾಣ ಮುಖ್ಯಸ್ಥ ಸ್ಟೇನಿ ಬೇಳಾ ಹಾಜರಿದ್ದರು
ಮೊದಲಿಗೆ ರೇಮಂಡ್ ಡಿಕೂನಾ ಸ್ವಾಗತಿಸಿ, ಲಿಸ್ಟನ್ ಡಿಸೋಜ ವಂದಿಸಿದರು. ಜೇಶ್ಮಾ ಡಿಸೋಜ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


