ಪಿ.ಎಸ್. ಸಜ್ಜನ ಕಾಲೇಜು ವಿದ್ಯಾರ್ಥಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆ

Chandrashekhara Kulamarva
0




ಬಾಗಲಕೋಟೆ: ಜಿಲ್ಲೆಯ ಬಾಗಲಕೋಟ ತಾಲೂಕಿನ ಬೇವೂರ ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ಕು. ಸಂಗಮೇಶ ಕರಿಯಪ್ಪ ಹಾಲವರ ಮಲ್ಲಕಂಬ ಕ್ರೀಡೆಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.


ಬಾಗಲಕೋಟೆಯ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಮಲ್ಲಕಂಬ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ಒಟ್ಟು ಆರು ವಿದ್ಯಾರ್ಥಿಗಳ ಪೈಕಿ ಪಿ.ಎಸ್.ಸಜ್ಜನ ಕಾಲೇಜಿನ ಸಂಗಮೇಶ.ಕ ಹಾಲವರ ಒಬ್ಬರಾಗಿದ್ದು ಅ.24 ರಿಂದ 27 ರವರೆಗೆ ಚೆನ್ನೈನ ವಿನಾಯಕ ಮಿಸ್ಸೆನ್ಸ್  ರೀಸರ್ಚ ಫೌಂಡೇಶನ್ ಯುನಿವರ್ಸಿಟಿಯಲ್ಲಿ ನಡೆಯವ ಅಖಿಲ ಭಾರತ ಅಂತರ ವಿವಿ ಸ್ಪರ್ಧೆಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಪ್ರತಿನಿಧಿಸಲಿದ್ದಾರೆ.


ವಿದ್ಯಾರ್ಥಿಗೆ ಸಂಘದ ಚೇರ್ಮನ್‌ ಜಿ.ಜಿ. ಮಾಗನೂರ, ಸರ್ವಸದಸ್ಯರು ಪ್ರಾಚಾರ್ಯ ಡಾ. ಜಗದೀಶ ಗು. ಭೈರಮಟ್ಟಿ ಕ್ರೀಡಾವಿಭಾಗದ ಮುಖ್ಯಸ್ಥ  ಜಿ.ಎಸ್ ಗೌಡರ ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top